ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಂಪನಿಯ ತೆರಿಗೆ ನಂತರದ ಲಾಭವು (ಪಿಎಟಿ) ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 29.3ರಷ್ಟು ಹೆಚ್ಚಾಗಿದೆ. ಕಂಪನಿಯ ವರಮಾನ ಮತ್ತು ತೆರಿಗೆ ನಂತರದ ಲಾಭವು 2027–28ರವರೆಗೆ ಕ್ರಮವಾಗಿ ಶೇ 19 ಹಾಗೂ ಶೇ 16ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಬೆಳೆಯುವ ನಿರೀಕ್ಷೆ ಇದೆ ಎಂದು ಬ್ರೋಕರೇಜ್ ಸಂಸ್ಥೆ ಆನಂದ ರಾಠಿ ಅಂದಾಜು ಮಾಡಿದೆ. ಕಂಪನಿಯ ಷೇರುಬೆಲೆಯು ₹5,768ಕ್ಕೆ ತಲುಪಬಹುದು ಎಂದು ಅದು ಹೇಳಿದೆ.

ಕಂಪನಿಯ ಬಳಿ ₹2.5 ಲಕ್ಷ ಕೋಟಿಯಷ್ಟು ಮೊತ್ತದ ಕಾರ್ಯಾದೇಶ ಇದೆ. ಇದು ಮುಂದಿನ ಹಲವು ವರ್ಷಗಳವರೆಗೆ ವರಮಾನದ ಖಾತರಿಯನ್ನು ನೀಡುತ್ತಿದೆ ಎಂದು ಆನಂದ ರಾಠಿ ಅಭಿಪ್ರಾಯಪಟ್ಟಿದೆ. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಎಚ್ಎಎಲ್ ಕಂಪನಿಯ ಷೇರು ಮೌಲ್ಯವು ₹4,247.60 ಆಗಿತ್ತು.

ಕಂಪನಿಯು ಎದುರಿಸಬಹುದಾದ ಕೆಲವು ಸವಾಲುಗಳನ್ನು ಕೂಡ ಆನಂದ ರಾಠಿ ಪಟ್ಟಿ ಮಾಡಿದೆ. ಎಂಜಿನ್ ಪೂರೈಕೆಯಲ್ಲಿನ ವಿಳಂಬ, ಎಂಕೆ1ಎ ಸಂಬಂಧಿತ ಕೆಲಸಗಳನ್ನು ನಿರ್ವಹಿಸುವಲ್ಲಿನ ಅಡಚಣೆಗಳು, ಬೃಹತ್ ಪ್ರಮಾಣದ ರಕ್ಷಣಾ ಗುತ್ತಿಗೆಗಳನ್ನು ನೀಡುವುದರಲ್ಲಿನ ವಿಳಂಬಗಳು ಆ ಕೆಲವು ಸವಾಲುಗಳು ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

(ಬ್ರೋಕರೇಜ್ ಸಂಸ್ಥೆಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.