ಶನಿವಾರ, ಜುಲೈ 2, 2022
20 °C

ನವೋದ್ಯಮ: ಬೆಂಗಳೂರಿಗೆ 23ನೆಯ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್: ಜಾಗತಿಕವಾಗಿ ಯಶಸ್ಸು ಕಾಣುವ ನವೋದ್ಯಮ ಕಟ್ಟಲು ಪೂರಕವಾದ ವ್ಯವಸ್ಥೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 23ನೆಯ ಸ್ಥಾನ ಪಡೆದಿದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಮೊದಲ ಸ್ಥಾನದಲ್ಲಿದೆ.

ದೆಹಲಿಯು 36ನೆಯ ಸ್ಥಾನದಲ್ಲಿದೆ ಎಂದು ‘ಜಾಗತಿಕ ನವೋದ್ಯಮ ವ್ಯವಸ್ಥೆ ವರದಿ – 2021’ ಹೇಳಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ವ್ಯವಸ್ಥೆಗಳ ಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ನವೋದ್ಯಮಗಳು ಜಾಗತಿಕ ಮಟ್ಟದಲ್ಲಿ ಯಶಸ್ಸು ಕಾಣಲು ಅಗತ್ಯವಿರುವ ವ್ಯವಸ್ಥೆಗಳು ಯಾವ ನಗರಗಳಲ್ಲಿ ಇವೆ ಎಂಬುದನ್ನು ವಿಶ್ಲೇಷಿಸಿ ಸ್ಟಾರ್ಟ್‌ಅಪ್‌ ಜಿನೋಮ್ ಸಂಸ್ಥೆ ಈ ವರದಿ ಸಿದ್ಧಪಡಿಸುತ್ತದೆ.

‘ಬಂಡವಾಳ ಸಂಗ್ರಹ, ಮಾಹಿತಿ ಹಾಗೂ ಇತರ ಪ್ರದೇಶಗಳ ಜೊತೆಗಿನ ಸಂಪರ್ಕದ ವಿಚಾರದಲ್ಲಿ ಸುಧಾರಣೆ ಕಂಡಿರುವ ಬೆಂಗಳೂರು 23ನೆಯ ಸ್ಥಾನ ಪಡೆದಿದೆ’ ಎಂದು ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು