ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಕೆನರಾ ಬ್ಯಾಂಕ್‌

Last Updated 23 ಮೇ 2019, 15:58 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಹಕರ ಸಂಖ್ಯೆ ವಿಸ್ತರಿಸಲು ಅದರಲ್ಲೂ ವಿಶೇಷವಾಗಿ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪಲು ಕೆನರಾ ಬ್ಯಾಂಕ್‌, ಪ್ರಭಾವಿ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಕಾರ್ಯಾರಂಭ ಮಾಡಿದೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿನ ಬ್ಯಾಂಕ್‌ನ ಅಧಿಕೃತ ಪುಟಗಳಿಗೆ ಕೆನರಾ ಬ್ಯಾಂಕ್‌ನ ಅಧ್ಯಕ್ಷ ಟಿ. ಎನ್‌. ಮನೋಹರನ್‌ ಮತ್ತು ಸಿಇಒ ಆರ್‌. ಎ. ಶಂಕರ ನಾರಾಯಣನ್ ಅವರು ಚಾಲನೆ ನೀಡಿದ್ದಾರೆ. ಬ್ಯಾಂಕ್‌, ಈಗಾಗಲೇ ಯೂಟ್ಯೂಬ್‌ ಮತ್ತು ಟ್ವಿಟರ್‌ನಲ್ಲಿ ಅಸ್ತಿತ್ವದಲ್ಲಿ ಇದೆ. ಗಮನಾರ್ಹ ಸಂಖ್ಯೆಯ ಚಂದಾದಾರರೂ ಇದ್ದಾರೆ. ಬ್ಯಾಂಕ್‌ಗೆ ಯೂಟ್ಯೂಬ್‌ ಚಾನೆಲ್‌ನಲ್ಲಿ 10 ಲಕ್ಷ ವೀಕ್ಷಣೆ, 25 ಸಾವಿರ ಚಂದಾದಾರರು ಮತ್ತು ಟ್ವಿಟರ್‌ನಲ್ಲಿ 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದಾರೆ.

ಗ್ರಾಹಕರು ಇನ್ನು ಮುಂದೆ ಫೇಸ್‌ಬುಕ್‌ನಲ್ಲಿ (@canarabankglobal) ಮತ್ತು ಇನ್‌ಸ್ಟಾಗ್ರಾಂನಲ್ಲಿ (@canarabankinsta) ಬ್ಯಾಂಕಿಂಗ್‌ ಉತ್ಪನ್ನ ಮತ್ತು ಸೇವೆಗಳ ಬಗ್ಗೆ ತಾಜಾ ಮಾಹಿತಿ ಪಡೆಯಬಹುದು. ಈ ಉಪಕ್ರಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾಂಕ್‌ನ ಉಪಸ್ಥಿತಿ ಬಲಪಡಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT