ಸುಮಧುರ ಗ್ರೂಪ್‌ನ ಪ್ರಚಾರ: ರಾಯಭಾರಿ ಎಂ.ಎಸ್.ದೋನಿ

7

ಸುಮಧುರ ಗ್ರೂಪ್‌ನ ಪ್ರಚಾರ: ರಾಯಭಾರಿ ಎಂ.ಎಸ್.ದೋನಿ

Published:
Updated:

ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ರಿಯಲ್‌ ಎಸ್ಟೇಟ್‌ ಸಂಸ್ಥೆಯಾಗಿರುವ ಸುಮಧುರ ಗ್ರೂಪ್‌, ತನ್ನ ಪ್ರಚಾರ ರಾಯಭಾರಿಯಾಗಿ ಕ್ರಿಕೆಟಿಗ ಎಂ. ಎಸ್‌. ದೋನಿ ಅವರನ್ನು ನೇಮಕ ಮಾಡಿಕೊಂಡಿದೆ.

‘ಕ್ರಿಕೆಟ್‌ನ ಜನಪ್ರಿಯ ಆಟಗಾರ ದೋನಿ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಂಡಿರುವುದು ನಮ್ಮ ಸಂಸ್ಥೆಯ ಪಾಲಿಗೆ ತುಂಬ ಹೆಮ್ಮೆಯ ಸಂಗತಿಯಾಗಿದೆ. ದೋನಿ ಅವರ ವಿನಯವಂತಿಕೆ, ಜಾಣತನ, ನಾಯಕತ್ವ ಗುಣ, ವಿಶ್ವಾಸಾರ್ಹತೆಯ ವ್ಯಕ್ತಿತ್ವ ಮತ್ತಿತರ ಗುಣ ವಿಶೇಷತೆಗಳು ಸಂಸ್ಥೆಯ ಬ್ರ್ಯಾಂಡ್‌ ವರ್ಚಸ್ಸಿಗೆ ತುಂಬ ಹೊಂದಾಣಿಕೆಯಾಗುತ್ತವೆ’ ಎಂದು ಸುಮಧುರ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮಧುಸೂಧನ ಜಿ. ಅವರು ಪ್ರತಿಕ್ರಿಯಿಸಿದ್ದಾರೆ.

ಸುಮಧುರ ಗ್ರೂಪ್‌, 20 ವರ್ಷಗಳಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ 30 ವಸತಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಸಂಸ್ಥೆಯು ಈಗ ದೇಶದಾದ್ಯಂತ ತನ್ನ ವಹಿವಾಟು ವಿಸ್ತರಿಸಲು ಮುಂದಾಗಿದೆ.

‘ದೋನಿ ಅವರ ಕ್ರಿಕೆಟ್‌ ಜೀವನ ಪಯಣದಂತೆ ಸುಮಧುರ ಗ್ರೂಪ್ ಕೂಡ ಪ್ರತಿಕೂಲತೆಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಕಂಡಿದೆ. ದೋನಿ ಅವರ, ಕುಟುಂಬವನ್ನು ಪ್ರೀತಿಸುವ ಹೊಣೆಗಾರಿಕೆಯ ವ್ಯಕ್ತಿತ್ವದಂತೆಯೇ ನಾವು ಕೂಡ ನಮ್ಮ ವಸತಿ ನಿರ್ಮಾಣ ಯೋಜನೆಗಳ ಮೂಲಕ ಕುಟುಂಬಗಳನ್ನು ಒಂದುಗೂಡಿಸುತ್ತಿದ್ದೆವೆ’ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಶ್ರೀನಿವಾಸ್‌ ಮೊರಾಮಚೆಟ್ಟಿ ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !