ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

New Year Resolution| ಹೂಡಿಕೆಯನ್ನು ಕಲಿಸುವ ಗುರಿ: ತೇಜಸ್ ಖೋಡೆ

Last Updated 31 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ನಮ್ಮಲ್ಲಿ ಬಹುತೇಕ ಎಲ್ಲರೂ ಹೂಡಿಕೆಗೆ ಭೌತಿಕ ಆಸ್ತಿಯನ್ನು ಹೆಚ್ಚೆಚ್ಚು ಆ‌ಯ್ಕೆ ಮಾಡಿಕೊಳ್ಳುತ್ತಾರೆ. ಚಿನ್ನ, ರಿಯಲ್ ಎಸ್ಟೇಟ್‌ನಲ್ಲಿ ಅವರು ಹಣ ತೊಡಗಿಸುತ್ತಿದ್ದಾರೆ. ದುಡಿದು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡುವ ಸಂದರ್ಭ ಬಂದಾಗ, ಅದನ್ನು ಭೌತಿಕ ಆಸ್ತಿಯಲ್ಲಿ ತೊಡಗಿಸುತ್ತಾರೆ. ನಮ್ಮ ಗುರಿ, ದೇಶದ ಉಳಿತಾಯದ ಹಣವು ಹಣಕಾಸು ಉತ್ಪನ್ನಗಳಲ್ಲಿ ವಿನಿಯೋಗವಾಗುವಂತೆ ಮಾಡುವುದು. ದುಡಿದು ಸಂಪಾದಿಸುವವರು ಷೇರು, ಬಾಂಡ್‌ಗಳಲ್ಲಿ ಹಣ ತೊಡಗಿಸಬೇಕು. ಇದು ನಮ್ಮ ಒಟ್ಟು ಧ್ಯೇಯವೂ ಹೌದು. ತಂತ್ರಜ್ಞಾನದ ನೆರವಿನಿಂದ ನಾವು ಇದನ್ನು ಸಾಧ್ಯವಾಗಿಸಲು ಕೆಲಸ ಮಾಡುತ್ತಿದ್ದೇವೆ. 2023ರಲ್ಲಿ ನಮ್ಮ ಆದ್ಯತೆ ಇದರ ಕಡೆ ಇರುತ್ತದೆ.

ಅನಿವಾಸಿ ಭಾರತೀಯರು (ಎನ್‌ಆರ್‌ಐ) ರಿಯಲ್ ಎಸ್ಟೇಟ್‌, ಫ್ಲ್ಯಾಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅವರಿಗೆ ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದನ್ನು ಸುಲಭವಾಗಿಸುವ ಕೆಲಸ ಮಾಡುತ್ತೇವೆ. ಅವರು ಷೇರುಗಳಲ್ಲಿ ಹೂಡಿಕೆ ಮಾಡಿದರೆ, ಕಂಪನಿಗಳಿಗೆ ಬಂಡವಾಳ ಹೆಚ್ಚು ಸಿಗುತ್ತದೆ, ಆಗ ಉದ್ಯೋಗ ಸೃಷ್ಟಿ ಜಾಸ್ತಿ ಆಗುತ್ತದೆ. ಎಲ್ಲರೂ ಜಮೀನು, ಫ್ಲ್ಯಾಟ್‌ಗಳ ಮೇಲೆ ಹೂಡಿಕೆ ಮಾಡಿದರೆ ದೇಶದ ಅರ್ಥ ವ್ಯವಸ್ಥೆ ಹೆಚ್ಚು ಬೆಳೆಯುವುದಿಲ್ಲ.

ನಮ್ಮ ಬೆಂಗಳೂರು ಐ.ಟಿ. ಕೇಂದ್ರವಾಗಿ ಬೆಳೆದಿದೆ. ನಮ್ಮ ಬೆಂಗಳೂರು ದೇಶದ ಹಣಕಾಸಿನ ಕೇಂದ್ರವೂ ಆಗಬೇಕು ಎಂಬುದು ನಮ್ಮ ಕನಸು. ನಾವು ಬಂಡವಾಳ ಮಾರುಕಟ್ಟೆ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಗಮನ ನೀಡುತ್ತಿದ್ದೇವೆ. ಬೇರೆ ರಾಜ್ಯಗಳ ಜನರಿಗೆ, ಇಲ್ಲಿಗೆ ಬಂದು ಕೆಲಸ ಮಾಡಿ ಎಂದು ಕರೆಯುತ್ತಿದ್ದೇವೆ. ಈಗ ಮುಂಬೈನಲ್ಲಿ ಹೆಚ್ಚಿನ ಹಣಕಾಸು ಸಂಸ್ಥೆಗಳು ಇವೆ. ಬೆಂಗಳೂರು ಕೂಡ ಹಾಗೆಯೇ ಬೆಳೆಯುವಂತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT