ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೊ ಇಂಡಿಯಾ: ನಮೋದ್ಯಮಗಳಿಗೆ ಸುವರ್ಣಾವಕಾಶ

ರಕ್ಷಣಾ –ವೈಮಾನಿಕ ಕ್ಷೇತ್ರದ ಕೈಗಾರಿಕೆಗಳಿಗೆ ಒಂದು ತಿಂಗಳವರೆಗೆ ಅವಕಾಶ
Last Updated 28 ಜನವರಿ 2021, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 5ರವರೆಗೆ ನಡೆಯಲಿರುವ ಏರ್‌ ಷೋ ಲೋಹದ ಹಕ್ಕಿಗಳ ಶಕ್ತಿ ಪ್ರದರ್ಶನಮಾಡಿಸುವುದರ ಜೊತೆಗೆ, ನವೋದ್ಯಮಗಳಿಗೂ ಸುವರ್ಣಾವಕಾಶವನ್ನು ತಂದುಕೊಟ್ಟಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ನೆಲ ವಿಸ್ತರಿಸಿಕೊಳ್ಳಲು ಕಂಪನಿಗಳಿಗೆ ಈ ಷೋ ನೆರವಾಗಲಿದೆ.

‘ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ, ಮಧ್ಯಮ ಮತ್ತು ನವೋದ್ಯಮಗಳಿಗೆ ಈ ಏರ್‌ ಷೋ ಸುವರ್ಣಾವಕಾಶವಿದೆ. ಕೇವಲ ₹20 ಸಾವಿರ ಶುಲ್ಕ ಪಾವತಿಸಿ ಮಳಿಗೆ ತೆರೆಯಬಹುದು’ ಎಂದು ಎಚ್‌ಎಎಲ್‌ನ ಡಿಪಿಐಟಿ ವಿಭಾಗದ ಸಿಇಒ ರಾಜೀವ್‌ ಅಗರ್‌ವಾಲ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನವೋದ್ಯಮಗಳು ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಒಂದು ತಿಂಗಳವರೆಗೆ ಮಳಿಗೆ ತೆರೆದಿಟ್ಟು, ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಬಹುದು. ಈ ಬಾರಿ ಅಂತರರಾಷ್ಟ್ರೀಯ ಮಟ್ಟದ ಅನೇಕ ಕಂಪನಿಗಳು ವರ್ಚುವಲ್ ರೂಪದಲ್ಲಿ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ಪನ್ನಗಳು ಅವರಿಗೆ ಇಷ್ಟವಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಒಪ್ಪಂದ ಕುದುರಬಹುದು’ ಎಂದು ರಾಜೀವ್‌ ಅಗರ್‌ವಾಲ್ ಹೇಳಿದರು.

‘ತ್ರೀಡಿ ರೂಪದಲ್ಲಿ ಮಳಿಗೆಗಳಲ್ಲಿನ ಉತ್ಪನ್ನಗಳನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಉತ್ಪನ್ನಗಳ ವಿಡಿಯೊ, ಫೋಟೊ ಅಥವಾ ಬ್ರೋಚರ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯ ಒದಗಿಸಲಾಗಿದೆ. ನೇರವಾಗಿ ಸಂವಾದ ನಡೆಸಲು ವ್ಯವಸ್ಥೆಯೂ ಇರುವುದರಿಂದ ವಿಶ್ವದ ಯಾವುದೇ ದೇಶದಿಂದ ನೇರವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಪ್ರವೇಶ ಶುಲ್ಕವೂ ಕಡಿಮೆ ಇದ್ದು, ನವೋದ್ಯಮಗಳು ಇದರ ಉಪಯೋಗ ಪಡೆದುಕೊಳ್ಳಬಹುದು’ ಎಂದರು.

ಒಂದೇ ಪರೀಕ್ಷೆ ಸಾಕು:‘ಏರ್‌ ಷೋವನ್ನು ವೀಕ್ಷಿಸಲು ಬರುವವರು ಅಥವಾ ಭಾಗವಹಿಸುವವರು ಜ.31ರಂದು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು, ನೆಗೆಟಿವ್‌ ವರದಿ ಅಪ್‌ಲೋಡ್‌ ಮಾಡಿದರೆ ಸಾಕು. ಷೋ ಮುಗಿಯುವವರೆಗೆ ಮತ್ತೆ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಏರ್‌ ಷೋದ ಸಂಪೂರ್ಣ ಮಾಹಿತಿಗೆ, https://aeroindia.gov.in ವೆಬ್‌ಸೈಟ್ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT