ನವದೆಹಲಿ: ಭಾರತದ ಷೇರು ಮಾರುಕಟ್ಟೆಗಳು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಉತ್ತಮವಾಗಿ ಬೆಳವಣಿಗೆ ಕಂಡಿದೆ. ನಿಫ್ಟಿ 50 ಸೂಚ್ಯಂಕವು ಈ ತಿಂಗಳಲ್ಲಿ ಶೇ 5ರಷ್ಟು ಏರಿಕೆ ಕಂಡಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಇತ್ತೀಚಿನ ವರದಿಯ ಪ್ರಕಾರ, ಈ ತಿಂಗಳಲ್ಲಿ ಹೂಡಿಕೆದಾರರ ಭಾಗವಹಿಸುವಿಕೆಯೂ ಗಮನಾರ್ಹವಾಗಿ ಏರಿದೆ. ಏಪ್ರಿಲ್ನಲ್ಲಿ 10.1 ಲಕ್ಷ ಹೊಸ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದಾರೆ.

23,165 ಅಂಶಗಳೊಂದಿಗೆ ತಿಂಗಳನ್ನು ಪ್ರಾರಂಭಿಸಿದ ನಿಫ್ಟಿ 50 ಸೂಚ್ಯಂಕವು ಏಪ್ರಿಲ್ 30ರ ವೇಳೆಗೆ 24,334 ಅಂಶಗಳಿಗೆ ಏರಿತ್ತು. ಈ ಸ್ಥಿರ ಏರಿಕೆಯು ಹೂಡಿಕೆದಾರರಲ್ಲಿ ಸಕಾರಾತ್ಮಕ ಮಾರುಕಟ್ಟೆ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಇದು ಆರ್ಥಿಕ ಸ್ಥಿರತೆ ಮತ್ತು ಷೇರು ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ವಿಶ್ವಾಸದಿಂದ ಬೆಂಬಲಿತವಾಗಿದೆ ಎಂದು ಅದು ತಿಳಿಸಿದೆ.

ಎನ್ಎಸ್ಇಯಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ ನೋಂದಾಯಿತ ಹೂಡಿಕೆದಾರರ ಸಂಖ್ಯೆಯು 11.4 ಕೋಟಿಗಳಷ್ಟಿತ್ತು, ಈ ತಿಂಗಳಲ್ಲಿ 10.1 ಲಕ್ಷ ಹೊಸ ಹೂಡಿಕೆದಾರರಯ ಆಗಮಿಸಿದ್ದಾರೆ. ಎನ್ಎಸ್ಇಯಲ್ಲಿ ವರ್ಷದಿಂದ ವರ್ಷಕ್ಕೆ ಸರಾಸರಿ ಶೇ 22.1ರಷ್ಟು ಬೆಳವಣಿಗೆ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.