ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌, ಟಿಸಿಎಸ್‌ ಷೇರು ಜಿಗಿತ

Published 12 ಜನವರಿ 2024, 15:22 IST
Last Updated 12 ಜನವರಿ 2024, 15:22 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದ  ವರದಿ ಬಿಡುಗಡೆಯಾದ ಬೆನ್ನಲ್ಲೇ ಶುಕ್ರವಾರ ಇನ್ಫೊಸಿಸ್‌ ಷೇರಿನ ಮೌಲ್ಯ ಶೇ 8ರಷ್ಟು ಏರಿಕೆಯಾಗಿದ್ದರೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಷೇರಿನ ಮೌಲ್ಯ ಶೇ 4ರಷ್ಟು ಹೆಚ್ಚಳವಾಗಿದೆ.

ಇನ್ಫೊಸಿಸ್‌ ಮಾರುಕಟ್ಟೆ ಮೌಲ್ಯ ₹6,69,135 ಕೋಟಿಗೆ ತಲುಪಿದೆ. ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ₹48,652 ಕೋಟಿ ಸೇರ್ಪಡೆಯಾಗಿದೆ.

ಸೆನ್ಸೆಕ್ಸ್‌ನಲ್ಲಿ ಕಂಪನಿಯ ಷೇರಿನ ಮೌಲ್ಯ ಶೇ 7.84ರಷ್ಟು ಹೆಚ್ಚಾಗಿದ್ದು, ಪ್ರತಿ ಷೇರಿನ ಬೆಲೆ ₹1,612ಕ್ಕೆ ಮುಟ್ಟಿದೆ. ಆರಂಭಿಕ ವಹಿವಾಟಿನಲ್ಲಿ ಷೇರಿನ ಮೌಲ್ಯವು ಶೇ 8ರಷ್ಟು ಏರಿಕೆಯಾಗಿತ್ತು. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 8ರಷ್ಟು ಏರಿಕೆಯಾಗಿದ್ದು, ಪ್ರತಿ ಷೇರಿನ ಬೆಲೆ ₹1,615 ಆಗಿದೆ. 

ಟಿಸಿಎಸ್‌ ₹53,239 ಕೋಟಿ ಗಳಿಕೆ: 

ಷೇರಿನ ಮೌಲ್ಯ ಏರಿಕೆ ಕಂಡಿದ್ದರಿಂದ ಟಿಸಿಎಸ್‌ ಮಾರುಕಟ್ಟೆ ಮೌಲ್ಯವು  ₹14,20,333 ಕೋಟಿಗೆ ತಲುಪಿದೆ. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹53,239 ಕೋಟಿ ಸೇರ್ಪಡೆಯಾಗಿದೆ.

ಬಿಎಸ್‌ಇಯಲ್ಲಿ ಟಿಸಿಎಸ್‌ನ ಷೇರಿನ ಮೌಲ್ಯ ಶೇ 3.89ರಷ್ಟು ಏರಿಕೆಯಾಗಿದೆ. ಪ್ರತಿ ಷೇರಿನ ಬೆಲೆ ₹3,881ಕ್ಕೆ ತಲುಪಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 3.91ರಷ್ಟು ಏರಿಕೆ ಕಂಡಿದ್ದು, ಪ್ರತಿ ಷೇರಿನ ಬೆಲೆ ₹3,881 ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT