ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್: ಎರಡು ದಿನಗಳ ಏರಿಕೆಗೆ ತಡೆ

Last Updated 5 ಏಪ್ರಿಲ್ 2022, 15:26 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳನ್ನು ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡಿದ ಪರಿಣಾಮವಾಗಿ ದೇಶದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಇಳಿಕೆ ಕಂಡವು.

ಹೂಡಿಕೆದಾರರು ರಷ್ಯಾ–ಉಕ್ರೇನ್ ಸಮರ ಮತ್ತು ಕಚ್ಚಾ ತೈಲ ಬೆಲೆಯ ಮೇಲೆ ಕೂಡ ಗಮನ ಕೇಂದ್ರೀಕರಿಸಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 435 ಅಂಶ ಇಳಿಕೆ ಕಂಡಿತು. ರಾಷ್ಟ್ರೀಯ ಷೇರು‍ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 96 ಅಂಶ ಕುಸಿಯಿತು.

ಮಾರುಕಟ್ಟೆಯಲ್ಲಿ ಈಚೆಗೆ ಏರಿಕೆ ಕಂಡುಬಂದಿದೆ. ಈ ಏರಿಕೆಯ ನಂತರದಲ್ಲಿ ಮಾರುಕಟ್ಟೆಗಳು ಏರಿಕೆಯೂ ಇಲ್ಲದ, ಇಳಿಕೆಯೂ ಇಲ್ಲದ ಸ್ಥಿತಿಯಲ್ಲಿ ತುಸು ಕಾಲ ಇರಬಹುದು. ಆದರೆ, ವಹಿವಾಟುಗಳಿಗೆ ಹೊಸ ಅವಕಾಶ ಇದ್ದೇ ಇರುತ್ತದೆ. ಹೂಡಿಕೆದಾರರು ಒಳ್ಳೆಯ ಗುಣಮಟ್ಟದ ಕಂಪನಿಗಳನ್ನು ಕಡಿಮೆ ಬೆಲೆಗೆ ಖರೀದಿಸುವತ್ತ ಗಮನ ನೀಡಬೇಕು ಎಂದು ರೆಲಿಗೇರ್ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 109.24 ಡಾಲರ್‌ಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT