ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Share Market: ಹೊಸ ಎತ್ತರಕ್ಕೆ ಜಿಗಿದ ಸೂಚ್ಯಂಕಗಳು

Published : 29 ಆಗಸ್ಟ್ 2024, 14:00 IST
Last Updated : 29 ಆಗಸ್ಟ್ 2024, 14:00 IST
ಫಾಲೋ ಮಾಡಿ
Comments

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಹೊಸ ಎತ್ತರಕ್ಕೆ ಜಿಗಿದಿವೆ. ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ರಿಲಯನ್ಸ್ ಇಂಡಸ್ಟ್ರಿಸ್‌ ಮತ್ತು ಟಾಟಾ ಮೋಟರ್ಸ್‌ ಷೇರುಗಳನ್ನು ಖರೀದಿಸಿದ್ದು, ಇದಕ್ಕೆ ನೆರವಾಯಿತು.  

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 349 ಅಂಶ ಏರಿಕೆ (ಶೇ 0.43ರಷ್ಟು) 82,134 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 99 ಅಂಶ ಹೆಚ್ಚಳ (ಶೇ 0.40ರಷ್ಟು) ಕಂಡು 25,151 ಅಂಶಗಳಲ್ಲಿ ಸ್ಥಿರಗೊಂಡಿತು. 

ಸೆನ್ಸೆಕ್ಸ್‌ ಗುಚ್ಛದಲ್ಲಿ ಟಾಟಾ ಮೋಟರ್ಸ್‌ ಷೇರಿನ ಮೌಲ್ಯದಲ್ಲಿ ಶೇ 4ರಷ್ಟು ಏರಿಕೆಯಾಗಿದೆ. ಬಜಾಜ್‌ ಫಿನ್‌ಸರ್ವ್‌, ಬಜಾಜ್‌ ಫೈನಾನ್ಸ್, ಎಚ್‌ಸಿಎಲ್‌  ಟೆಕ್ನಾಲಜೀಸ್‌, ಐಟಿಸಿ, ಟೆಕ್‌ ಮಹೀಂದ್ರ, ಮಾರುತಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ. 

ಮಹೀಂದ್ರ ಆ್ಯಂಡ್‌ ಮಹೀಂದ್ರ, ಸನ್‌ ಫಾರ್ಮಾ, ಜೆಎಸ್‌ಡಬ್ಲ್ಯು, ಕೋಟಕ್‌ ಮಹೀಂದ್ರ ಬ್ಯಾಂಕ್‌, ಇನ್ಫೊಸಿಸ್‌ ಮತ್ತು ಟಾಟಾ ಸ್ಟೀಲ್‌ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಸೋಲ್‌, ಟೋಕಿಯೊ, ಶಾಂಘೈ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆದಿದೆ.

₹30,389 ಕೋಟಿ ಸೇರ್ಪಡೆ:
ಬಿಎಸ್‌ಇಯಲ್ಲಿ ರಿಲಯನ್ಸ್ ಇಂಡಸ್ಟ್ರಿಸ್‌ ಷೇರಿನ ಮೌಲ್ಯದಲ್ಲಿ ಶೇ 1.50ರಷ್ಟು ಹಾಗೂ ಎನ್‌ಎಸ್‌ಇಯಲ್ಲಿ ಶೇ 1.54ರಷ್ಟು ಏರಿಕೆಯಾಗಿದೆ. ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ₹30,389 ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್‌ ₹20.57 ಲಕ್ಷ ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT