ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 1ಕ್ಕೂ ಹೆಚ್ಚು ಕುಸಿದ ಸೆನ್ಸೆಕ್ಸ್, ನಿಫ್ಟಿ

ದೇಶದ ಷೇರುಪೇಟೆಗಳಲ್ಲಿ ಹೆಚ್ಚಿದ ಮಾರಾಟದ ಒತ್ತಡಕ್ಕೆ
Published 5 ಮೇ 2023, 18:03 IST
Last Updated 5 ಮೇ 2023, 18:03 IST
ಅಕ್ಷರ ಗಾತ್ರ

ಮುಂಬೈ : ದೇಶದ ಷೇರುಪೇಟೆಗಳು ಶುಕ್ರವಾರದ ವಹಿವಾಟಿನಲ್ಲಿ ಶೇಕಡ 1ಕ್ಕೂ ಹೆಚ್ಚಿನ ಕುಸಿತ ಕಂಡವು. ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಲೀನದಿಂದ ಸುಮಾರು ₹1,230 ಕೋಟಿಯಿಂದ ₹1,600 ಕೋಟಿಯಷ್ಟು ಬಂಡವಾಳ ಹೊರಹೋಗಲಿದೆ ಎನ್ನುವ ವರದಿ ಪ್ರಕಟವಾದ ಬಳಿಕ ಎರಡೂ ಕಂಪನಿಗಳ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರ ಪರಿಣಾವಾಗಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 695 ಅಂಶ ಇಳಿಕೆ ಕಂಡು 61,054 ಅಂಶಗಳಿಗೆ ತಲುಪಿತು. ದಿನದ ವಹಿವಾಟಿನ ಒಂದು ಹಂತದಲ್ಲಿ 747 ಅಂಶಗಳವರೆಗೂ ಇಳಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 187 ಅಂಶ ಇಳಿಕೆಯಾಗಿ 18,069 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ಭಾರತದ ಮಾರುಕಟ್ಟೆಗಳು ಇಳಿಕೆ ಕಾಣುವಂತಾಯಿತು. ಯುರೋಪ್‌ನ ಕೇಂದ್ರೀಯ ಬ್ಯಾಂಕ್‌ ಬಡ್ಡಿದರವನ್ನು ಶೇ 0.25ರಷ್ಟು ಹೆಚ್ಚಿಸಿದ್ದು, ಅಗತ್ಯ ಬಿದ್ದರೆ ಬಡ್ಡಿದರದಲ್ಲಿ ಇನ್ನಷ್ಟು ಹೆಚ್ಚಳ ಮಾಡುವುದಾಗಿಯೂ ಸೂಚನೆ ನೀಡಿದೆ. ಇದು ಜಾಗತಿಕ ಮಟ್ಟದಲ್ಲಿ ವಹಿವಾಟು ಇಳಿಕೆಗೆ ಕಾರಣವಾಯಿತು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಅಮೆರಿಕದಲ್ಲಿ ಪ್ರಾದೇಶಿಕ ಬ್ಯಾಂಕ್‌ಗಳ ಸಾಮರ್ಥ್ಯದ ಬಗೆಗಿನ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಅಮೆರಿಕದ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಕಂಡುಬಂದಿತು ಎಂದು ನಾಯರ್ ತಿಳಿಸಿದ್ದಾರೆ. ಬ್ರೆಂಟ್‌ ಕಚ್ಚಾ ತೈಲ ದರ ಶೇ 1.59ರಷ್ಟು ಏರಿಕೆ ಕಂಡು ಒಂದು ಬ್ಯಾರಲ್‌ಗೆ 73.65 ಡಾಲರ್‌ಗೆ ತಲುಪಿತು.

  • ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರುಕಟ್ಟೆ ಮೌಲ್ಯ ₹56,228 ಕೋಟಿ ಇಳಿಕೆ

  • ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ ₹29,572 ಕೋಟಿ ಇಳಿಕೆ

‘ಭಾರತದ ಷೇರುಪೇಟೆಯಲ್ಲಿ ಲಾಭ ಮಾಡಿಕೊಳ್ಳಿ’

ಬೆಂಗಳೂರು (ರಾಯಿಟರ್ಸ್‌): ಭಾರತದ ಮಾರುಕಟ್ಟೆಗಳಲ್ಲಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಇದು ಸೂಕ್ತ ಸಮಯ ಎಂದು ಬಿಆಫ್‌ಎ ಸೆಕ್ಯುರಿಟೀಸ್‌ ಹೂಡಿಕೆದಾರರಿಗೆ ಸಲಹೆ ನೀಡಿದೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಹಾಗೂ ದೇಶಿ ಕಾರ್ಪೊರೇಟ್ ಕಂಪನಿಗಳ ಗಳಿಕೆ ನಿರೀಕ್ಷೆಗಿಂತಲೂ ಕಡಿಮೆ ಇರುವ ಕಾರಣಗಳಿಂದಾಗಿ ಈ ವರ್ಷದ ಅಂತ್ಯದ ವೇಳೆಗೆ ನಿಫ್ಟಿ 50 ಸೂಚ್ಯಂಕ ತುಸು ಇಳಿಕೆ ಕಾಣಲಿದೆ. ಹೀಗಾಗಿ ಈಗ ಲಾಭ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ನಿಫ್ಟಿ 50 ಶೇ 0.36ರಷ್ಟು ಏರಿಕೆ ಕಂಡು 18170 ಅಂಶಗಳಿಗೆ ತಲುಪಿದೆ. ನಿಫ್ಟಿ 50 ಸೂಚ್ಯಂಕವು ಸದ್ಯ ಇರುವ ಮಟ್ಟದಿಂದ ಸುಮಾರು ಶೇ 1ರವರೆಗೆ ಇಳಿಕೆ ಕಾಣಲಿದ್ದು ವರ್ಷಾಂತ್ಯದ ವೇಳೆಗೆ 18 ಸಾವಿರ ಅಂಶಗಳ ಮಟ್ಟದಲ್ಲಿ ಇರಲಿದೆ ಎಂದು ಬಿಆಫ್‌ಎ ಅಂದಾಜು ಮಾಡಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT