ಮುಂಬೈ: ಷೇರುಪೇಟೆಯ ಸತತ ಐದು ವಹಿವಾಟಿನ ದಿನಗಳ ಏರಿಕೆಗೆ ಬುಧವಾರ ತಡೆ ಬಿದ್ದಿತು.

ತೀವ್ರ ಏರಿಳಿತದಿಂದ ಕೂಡಿದ್ದ ದಿನದ ವಹಿವಾಟಿನ ಮೇಲೆ ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ನಿರುತ್ಸಾಹವು ಪ್ರಭಾವ ಬೀರಿತು. ಸೂಚ್ಯಂಕದ ಪ್ರಮುಖ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೊಸಿಸ್ ಮತ್ತು ಟಿಸಿಎಸ್ ಷೇರುಗಳು ನಷ್ಟ ಕಂಡವು. ಹೀಗಾಗಿ ಸಂವೇದಿ ಸೂಚ್ಯಂಕವು 346 ಅಂಶಗಳ ಕುಸಿತ ಕಂಡಿತು.

ದಿನದ ಆರಂಭದಲ್ಲಿನ ವಹಿವಾಟು ಸಕಾರಾತ್ಮಕವಾಗಿತ್ತು. ಸೂಚ್ಯಂಕವು ದಿನದ ಗರಿಷ್ಠ ಮಟ್ಟದಿಂದ 594 ಅಂಶ ಕುಸಿತ ಕಂಡಿತ್ತು. ಕೊನೆಯಲ್ಲಿ 346 ಅಂಶಗಳ ನಷ್ಟದಲ್ಲಿ 36,329 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 94 ಅಂಶ ನಷ್ಟಕ್ಕೆ ಎರವಾಗಿ 10,705 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಬಜಾಜ್ ಫಿನ್‌ಸರ್ವ್, ಎಚ್‌ಸಿಎಲ್ ಟೆಕ್, ಮಾರುತಿ ನಷ್ಟ ಕಂಡ ಪ್ರಮುಖ ಕಂಪನಿಗಳಾಗಿವೆ.

ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರ್ಥಿಕತೆ ಚೇತರಿಕೆಯ ಬಗೆಗಿನ ಕಳವಳವು ಜಾಗತಿಕ ಷೇರುಪೇಟೆಗಳ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ವಹಿವಾಟುದಾರರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.