ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 359 ಅಂಶ ಇಳಿಕೆ

Published 25 ಜನವರಿ 2024, 13:33 IST
Last Updated 25 ಜನವರಿ 2024, 13:33 IST
ಅಕ್ಷರ ಗಾತ್ರ

ಮುಂಬೈ: ಐ.ಟಿ ಷೇರುಗಳ ಮಾರಾಟ ಮತ್ತು ವಿದೇಶಿ ಹೂಡಿಕೆಯ ಹೊರಹರಿವಿನ ಹೆಚ್ಚಳದಿಂದಾಗಿ ಗುರುವಾರ ಷೇರುಪೇಟೆಯು ಕುಸಿತ ಕಂಡಿತು. 

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 359 ಅಂಶ ಕುಸಿದು 70,700ಕ್ಕೆ ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 101 ಅಂಶ ಇಳಿಕೆ ಕಂಡು 21,352ಕ್ಕೆ ವಹಿವಾಟನ್ನು ಮುಕ್ತಾಯಗೊಳಿಸಿತು.

ಸೆನ್ಸೆಕ್ಸ್‌ನ 19 ಮತ್ತು ನಿಫ್ಟಿಯ 34 ಕಂಪನಿಗಳ ಷೇರಿನ ಮೌಲ್ಯ ಕುಸಿದಿದೆ. ಟೆಕ್‌ ಮಹೀಂದ್ರ ಷೇರಿನ ಮೌಲ್ಯ ಶೇ 6ಕ್ಕಿಂತ ಹೆಚ್ಚು ಇಳಿಕೆಯಾಗಿದೆ.

ಬ್ರೆಂಟ್‌ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ 1.02ರಷ್ಟು ಏರಿಕೆಯಾಗಿದ್ದು, 80.96 ಡಾಲರ್‌ ಆಗಿದೆ. ಗಣರಾಜ್ಯೋತ್ಸವದ ಅಂಗವಾಗಿ ಮಾರುಕಟ್ಟೆಗೆ ಶುಕ್ರವಾರ ರಜೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT