ಮುಂಬೈ: ಬುಧವಾರ ಭಾರಿ ಇಳಿಕೆ ಕಂಡಿದ್ದ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಉತ್ತಮ ಚೇತರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್ 358 ಅಂಶ ಏರಿಕೆಯಾಗಿ, 70,865ಕ್ಕೆ ವಹಿವಾಟು ಮುಕ್ತಾಯಗೊಂಡಿತು. 21 ಷೇರುಗಳು ಲಾಭ ಗಳಿಸಿದ್ದರೆ, ಉಳಿದ 9 ಷೇರುಗಳು ಇಳಿಕೆ ಕಂಡಿವೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 130 ಅಂಶ ಏರಿಕೆಯಾಗಿ 21,280ಕ್ಕೆ ಸ್ಥಿರಗೊಂಡಿತು. 38 ಷೇರುಗಳು ಗಳಿಕೆ ಕಂಡಿದ್ದರೆ, 12 ಇಳಿಕೆ ಕಂಡಿವೆ.

ಹೂಡಿಕೆದಾರರು ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಖರೀದಿಗೆ ಉತ್ಸಾಹ ತೋರಿದರು. ಹಾಗಾಗಿ, ಸೂಚ್ಯಂಕಗಳು ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳಲು ಸಹಾಯವಾಯಿತು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಸೆನ್ಸೆಕ್ಸ್ ಗಳಿಕೆಗೆ 300 ಅಂಶಗಳಿಗಿಂತ ಹೆಚ್ಚು ಕೊಡುಗೆ ನೀಡಿವೆ.

ಪವರ್ ಗ್ರಿಡ್ (ಶೇ 2.27), ಎಚ್‌ಡಿಎಫ್‌ಸಿ ಬ್ಯಾಂಕ್ (ಶೇ 1.82), ಕೋಟಕ್ ಬ್ಯಾಂಕ್ (ಶೇ 1.66), ರಿಲಯನ್ಸ್ ಇಂಡಸ್ಟ್ರೀಸ್ (ಶೇ 1.38), ಎನ್‌ಟಿಪಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್ ಮತ್ತು ಭಾರ್ತಿ ಏರ್‌ಟೆಲ್ ಗಳಿಕೆ ಕಂಡಿವೆ. ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಇಳಿಕೆ ಕಂಡಿವೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್ ಗೇಜ್ ಶೇ 1.69 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಶೇ 1.61 ಏರಿಕೆ ಕಂಡಿವೆ. ಯುಟಿಲಿಟಿ (ಶೇ 2.46), ವಿದ್ಯುತ್ (ಶೇ 2.43), ತೈಲ ಮತ್ತು ಅನಿಲ (ಶೆ 1.72), ಟೆಲಿ ಕಮ್ಯುನಿಕೇಷನ್ (ಶೇ 1.64) ಮತ್ತು ಇಂಧನ (ಶೇ 1.62) ಏರಿಕೆ ಕಂಡಿದ್ದರೆ, ಆಟೊಮೊಬೈಲ್ ಷೇರುಗಳು ಇಳಿಕೆ ಕಂಡಿವೆ.

ಏಷ್ಯಾ ಮಾರುಕಟ್ಟೆಯಲ್ಲಿ ಸಿಯೋಲ್ ಮತ್ತು ಟೋಕಿಯೊ ಇಳಿಕೆ ಕಂಡಿದ್ದರೆ, ಶಾಂಘೈ ಮತ್ತು ಹಾಂಗ್‌ಕಾಂಗ್ ಗಳಿಕೆ ಕಂಡಿವೆ. ಜಾಗತಿಕ ಬ್ರೆಂಟ್ ಕಚ್ಚಾ ತೈಲ ಶೇ 0.33ರಷ್ಟು ಏರಿಕೆಯಾಗಿ, ಪ್ರತಿ ಬ್ಯಾರೆಲ್‌ಗೆ 79.96 ಡಾಲರ್‌ಗೆ ತಲುಪಿದೆ.

ಬೆಳ್ಳಿ ದರ ₹600 ಏರಿಕೆ ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಬೆಳ್ಳಿ ಧಾರಣೆ ಕೆ.ಜಿಗೆ ₹600 ಏರಿಕೆಯಾಗಿ ₹79100ಕ್ಕೆ ತಲುಪಿದೆ. ಚಿನ್ನವು 10 ಗ್ರಾಂಗೆ ₹50 ಇಳಿಕೆಯಾಗಿ ₹63050ರಂತೆ ಮಾರಾಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2037 ಡಾಲರ್ ಮತ್ತು 24.25 ಡಾಲರ್‌ನಂತೆ ಮಾರಾಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.