ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: 2 ದಿನದಲ್ಲಿ ₹5 ಲಕ್ಷ ಕೋಟಿ ವೃದ್ಧಿ

Last Updated 24 ಜೂನ್ 2022, 15:46 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯಿತು. ಇದರಿಂದಾಗಿ ಎರಡು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹5 ಲಕ್ಷ ಕೋಟಿ ಹೆಚ್ಚಾಗಿದೆ. ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹242.27 ಲಕ್ಷ ಕೋಟಿಗೆ ತಲುಪಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 462 ಅಂಶ ಏರಿಕೆ ಕಂಡಿದ್ದು 52,728 ಅಂಶಗಳಿಗೆ ತಲುಪಿದೆ. ಗುರುವಾರ ಸೆನ್ಸೆಕ್ಸ್‌ 443 ಅಂಶ ಏರಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶುಕ್ರವಾರ 143 ಅಂಶ ಹೆಚ್ಚಾಗಿ 15,699 ಅಂಶಗಳಿಗೆ ತಲುಪಿತು.

ವಾಹನ, ಬ್ಯಾಂಕಿಂಗ್ ಮತ್ತು ಇಂಧನ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದು ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು.

ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಸ್ಥಿರವಾಗಿರುವುದು ಹಾಗೂ ಸರಕುಗಳ ದರ ಇಳಿಮುಖ ಆಗಿರುವುದು ದೇಶಿ ಷೇರುಪೇಟೆಗಳಲ್ಲಿ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿವೆ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಐ.ಟಿ. ಹೊರತುಪಡಿಸಿ ಉಳಿದೆಲ್ಲ ವಲಯಗಳ ಸೂಚ್ಯಂಕಗಳು ಶುಕ್ರವಾರ ಗಳಿಕೆ ಕಂಡಿವೆ. ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಶೇ 1.60ರಷ್ಟು ಮತ್ತು ಮಿಡ್‌ ಕ್ಯಾಪ್‌ ಶೇ 1.53ರಷ್ಟು ಏರಿಕೆ ಕಂಡಿವೆ.

ಕಚ್ಚಾ ತೈಲ ದರ ಹೆಚ್ಚಳ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 1.11ರಷ್ಟು ಹೆಚ್ಚಾಗಿದ್ದು ಒಂದು ಬ್ಯಾರಲ್‌ಗೆ 111.27 ಡಾಲರ್‌ಗೆ ತಲುಪಿತು.

ವಲಯವಾರು ಗಳಿಕೆ (%)

ದೂರಸಂಪರ್ಕ;2.53

ವಾಹನ;1.98

ವಿದ್ಯುತ್;1.73

ಗ್ರಾಹಕ ಬಳಕೆ ವಸ್ತುಗಳು;1.47

ಹಣಕಾಸು;1.40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT