ಮ್ಯೂಚುವಲ್ ಫಂಡ್: 72 ಲಕ್ಷ ಹೊಸ ಖಾತೆ ಸೇರ್ಪಡೆ

ನವದೆಹಲಿ: ಮ್ಯೂಚುವಲ್ ಫಂಡ್ ಉದ್ಯಮಕ್ಕೆ 2020ರಲ್ಲಿ ಹೊಸದಾಗಿ 72 ಲಕ್ಷ ಖಾತೆಗಳು (ಫೋಲಿಯೊ) ಸೇರ್ಪಡೆಯಾಗಿವೆ. ಇದರಿಂದಾಗಿ ಒಟ್ಟಾರೆ ಖಾತೆಗಳ ಸಂಖ್ಯೆ 9.43 ಕೋಟಿಗಳಿಗೆ ತಲುಪಿದೆ.
2019ರಲ್ಲಿ ಹೊಸದಾಗಿ 68 ಲಕ್ಷ ಹೂಡಿಕೆದಾರರ ಖಾತೆಗಳು ಸೇರ್ಪಡೆಯಾಗಿದ್ದವು. ಅದರಿಂದಾಗಿ ಒಟ್ಟು ಖಾತೆಗಳ ಸಂಖ್ಯೆ 8.71 ಕೋಟಿಗಳಿಗೆ ತಲುಪಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.
ಬ್ಯಾಂಕ್ ಠೇವಣಿಗಳಿಗೆ ಕಡಿಮೆ ಬಡ್ಡಿದರ ಇರುವುದರಿಂದ ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳತ್ತ ಆಕರ್ಷಿತರಾಗಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.