₹30 ಸಾವಿರ ಕೋಟಿ ಹಿಂಪಡೆದ ಮ್ಯೂಚುವಲ್ ಫಂಡ್ ಕಂಪನಿಗಳು

ನವದೆಹಲಿ: ಮ್ಯೂಚುವಲ್ ಫಂಡ್ (ಎಂ.ಎಫ್) ಕಂಪನಿಗಳು ನವೆಂಬರ್ ತಿಂಗಳಿನಲ್ಲಿ ಷೇರು ಮಾರುಕಟ್ಟೆಗಳಿಂದ ಒಟ್ಟು ₹ 30,760 ಕೋಟಿಯನ್ನು ಹಿಂದಕ್ಕೆ ಪಡೆದಿವೆ. ಎಂ.ಎಫ್. ಕಂಪನಿಗಳು ಲಾಭಗಳಿಕೆಯ ಉದ್ದೇಶದಿಂದ ಮಾರುಕಟ್ಟೆಯಿಂದ ಸತತವಾಗಿ ಆರು ತಿಂಗಳುಗಳಿಂದ ಹಣ ಹಿಂದಕ್ಕೆ ಪಡೆಯುತ್ತಿವೆ.
ಇದರಿಂದಾಗಿ ಈ ವರ್ಷದ 11 ತಿಂಗಳುಗಳ ಅವಧಿಯಲ್ಲಿ ಎಂ.ಎಫ್. ಕಂಪನಿಗಳು ಷೇರು ಮಾರುಕಟ್ಟೆಗಳಿಂದ ಹಿಂದಕ್ಕೆ ಪಡೆದ ನಿವ್ವಳ ಮೊತ್ತವು ₹ 28 ಸಾವಿರ ಕೋಟಿಗಿಂತ ಹೆಚ್ಚಾದಂತಾಗಿದೆ. ಎಂ.ಎಫ್. ಕಂಪನಿಗಳು ಹಣ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದರೂ, ವಿದೇಶಿ ಹೂಡಿಕೆದಾರರಿಂದ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಆಗುತ್ತಿರುವ ಕಾರಣ ದೇಶಿ ಷೇರು ಮಾರುಕಟ್ಟೆಗಳ ಸೂಚ್ಯಂಕಗಳು ಏರುಗತಿಯಲ್ಲಿ ಇವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.