ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕನ್ ಡಾಲರ್ ಎದುರು 27 ಪೈಸೆ ಕುಸಿದ ಭಾರತದ ರೂಪಾಯಿ ಮೌಲ್ಯ

Last Updated 2 ಜೂನ್ 2021, 6:19 IST
ಅಕ್ಷರ ಗಾತ್ರ

ಮುಂಬೈ: ದುರ್ಬಲ ದೇಶೀಯ ಷೇರುಗಳು ಮತ್ತು ಬಲವಾದ ಅಮೆರಿಕನ್ ಕರೆನ್ಸಿಯಿಂದಾಗಿ ಬುಧವಾರ ದಿನದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್‌ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ 27 ಪೈಸೆ ಇಳಿಕೆ ಕಂಡು 75.17ಕ್ಕೆ ವಿನಿಮಯಗೊಂಡಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ ಆರಂಭದಲ್ಲಿ73.13ಕ್ಕೆ ಇಳಿಯಿತು, ಬಳಿಕ, 73.17ಕ್ಕೆ ಮುಟ್ಟಿತು. ಇದು ಹಿಂದಿನ ಮುಕ್ತಾಯಕ್ಕಿಂತ 27 ಪೈಸೆ ಕುಸಿತವನ್ನು ದಾಖಲಿಸಿದೆ.

ಮಂಗಳವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 75.90 ರಷ್ಟಿತ್ತು.

‘ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಆರ್ಥಿಕ ಚೇತರಿಕೆಯ ಸುತ್ತಲಿನ ಅನಿಶ್ಚಿತತೆಗಳ ನಡುವೆ ಕರೆನ್ಸಿಯ ಭವಿಷ್ಯವು ಅನಿಶ್ಚಿತತೆಯಿಂದ ಉಳಿಯಬಹುದು’ ಎಂದು ರಿಲಯನ್ಸ್ ಸೆಕ್ಯುರಿಟೀಸ್ ಸಂಶೋಧನಾ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಏಷ್ಯಾದ ಹಲವು ಕರೆನ್ಸಿಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಕುಸಿತ ಕಂಡಿವೆ.

ಈ ಮಧ್ಯೆ, ಆರು ಕರೆನ್ಸಿಗಳ ಬಾಸ್ಕೆಟ್ ಎದುರುಡಾಲರ್ ಸೂಚ್ಯಂಕವು ಶೇಕಡಾ 0.08 ರಷ್ಟು ಏರಿಕೆ ಕಂಡು 89.90 ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT