ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೋತ್ತರ ಸಮೀಕ್ಷೆ ಪ್ರಭಾವ: ಸೆನ್ಸೆಕ್ಸ್ 1,098 ಅಂಕ ಏರಿಕೆ

Last Updated 20 ಮೇ 2019, 7:30 IST
ಅಕ್ಷರ ಗಾತ್ರ

ಮುಂಬೈ: ಎನ್‌ಡಿಎಅಧಿಕಾರದಲ್ಲಿ ಮುಂದುವರಿಯುತ್ತದೆ ಎಂಬ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ನುಡಿಗೆ ಷೇರು ಸೂಚ್ಯಂಕ 1,098ಅಂಕ ಏರಿಕೆ ಕಂಡಿದೆ.

ಮಧ್ಯಾಹ್ನದ ಹೊತ್ತಿಗೆ ಬಿಎಸ್ಇ ಸೆನ್ಸೆಕ್ಸ್ 1,098 ಅಂಕಗಳ ಏರಿಕೆ ಕಂಡುಕೊಂಡಿದ್ದು ನಿಫ್ಟಿ327ಅಂಕ ಏರಿಕೆಯಾಗಿದೆ.

ಸೋಮವಾರ ಬೆಳಗ್ಗೆ 9.20ಕ್ಕೆ ಬಿಎಸ್‌ಇ ಸೂಚ್ಯಂಕ 962 ಅಂಕ ಏರಿಕೆ ಕಂಡುಕೊಂಡಿದ್ದು, ನಿಫ್ಟಿ 287 ಪಾಯಿಂಟ್ ಏರಿಕೆಯಾಗಿದೆ.

ಬಿಎಸ್‌ಇಯಲ್ಲಿ 952 ಕಂಪನಿಗಳಿಗೆ ಲಾಭವಾಗಿದ್ದು 100 ಷೇರುಗಳು ನಷ್ಟ ಅನುಭವಿಸಿವೆ. ಬ್ಯಾಂಕ್, ವಾಹನ, ಇನ್‌ಫ್ರಾ, ಎಫ್‌ಎಂಸಿಜಿ ಷೇರುಗಳು ಲಾಭಗಳಿಸಿದ್ದು, ಐಟಿ ಷೇರುಗಳಿಗೆ ನಷ್ಟವುಂಟಾಗಿದೆ.

ಯೆಸ್ ಬ್ಯಾಂಕ್, ಎಂಆ್ಯಂಡ್‌ಎಂ,ಇಂಡ್‌ಸೆಂಡ್ ಬ್ಯಾಂಕ್, ಎಲ್‌ಆ್ಯಂಡ್‌ಟಿ, ಬಜಾಜ್ ಫಿನಾನ್ಸ್, ಎಚ್‌ಪಿಸಿಎಲ್, ಬಿಪಿಸಿಎಲ್, ಟಾಟಾ ಮೊಟಾರ್ಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮೊದಲಾದವುಗಳು ಷೇರು ಮಾರುಕಟ್ಟೆಯಲ್ಲಿ ಲಾಭಗಳಿಸಿವೆ.

ಡಾ.ರೆಡ್ಡೀಸ್ ಲ್ಯಾಬ್, ಸಿ ಎಂಟರ್‌ಟೇನ್‌ಮೆಂಟ್, ಬಜಾಜ್ ಆಟೋ, ಟೆಕ್ ಮಹೀಂದ್ರ, ಇನ್‌ಫೋಸಿಸ್, ಎಚ್‌ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ನಷ್ಟದಲ್ಲಿವೆ.

ಎಸ್‌ಬಿಐ ಷೇರುಗಳು ಶೇ.7.52 ಏರಿಕೆಯಾಗಿದ್ದು , ಬಜಾಜ್ ಆಟೋ ಶೇ. 3ರಷ್ಟು ಇಳಿಕೆ ಕಂಡಿದೆ.

ರೂಪಾಯಿ ಮೌಲ್ಯ ಏರಿಕೆ
ಶುಕ್ರವಾರದ ವಹಿವಾಟನ ಅಂತ್ಯಕ್ಕೆ ರೂಪಾಯಿ 70.22ಕ್ಕೆ ಕೊನೆಗೊಂಡಿತ್ತು. ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 79 ಪೈಸೆ ಏರಿಕೆಯಾಗಿ 69.44 ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT