ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ಸೆನ್ಸೆಕ್ಸ್, ಸಂಪತ್ತು ₹ 3.52 ಲಕ್ಷ ಕೋಟಿಯಷ್ಟು ಹೆಚ್ಚಳ

Last Updated 25 ಸೆಪ್ಟೆಂಬರ್ 2020, 14:12 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದ ಪರಿಣಾಮವಾಗಿ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಹೂಡಿಕೆದಾರರ ಒಟ್ಟು ಸಂಪತ್ತಿನಲ್ಲಿ ₹ 3.52 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 835 ಅಂಶ ಏರಿಕೆ ಕಂಡಿದೆ.

‘ಹಿಂದಿನ ಕೆಲವು ದಿನಗಳಲ್ಲಿ ಷೇರುಗಳ ಮಾರಾಟ ತೀವ್ರವಾಗಿತ್ತು. ಆದರೆ, ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರ ಸಕಾರಾತ್ಮಕ ವಹಿವಾಟು ನಡೆಸಿದವು. ಹಿಂದಿನ ದಿನದ ಅವಧಿಯಲ್ಲಿ ಆಗಿದ್ದ ನಷ್ಟದಲ್ಲಿ ಬಹುತೇಕ ಪಾಲನ್ನು ಭರ್ತಿ ಮಾಡಿಕೊಂಡವು. ಹೂಡಿಕೆದಾರರು ಕಡಿಮೆ ಬೆಲೆಗೆ ಸಿಗುತ್ತಿದ್ದ ಒಳ್ಳೆಯ ಷೇರುಗಳನ್ನು ಖರೀದಿ ಮಾಡಿದರು’ ಎಂದು ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾದಿಯಾ ಹೇಳಿದರು.

ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 1,114 ಅಂಶಗಳ ಕುಸಿತ ದಾಖಲಿಸಿತ್ತು. ಸೆನ್ಸೆಕ್ಸ್‌ನ ಭಾಗವಾಗಿರುವ ಎಲ್ಲ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಶುಕ್ರವಾರ ಹೆಚ್ಚಳ ಆಯಿತು. ಬಜಾಜ್ ಫಿನ್‌ಸರ್ವ್‌, ಎಚ್‌ಸಿಎಲ್‌ ಟೆಕ್‌, ಭಾರ್ತಿ ಏರ್‌ಟೆಲ್‌, ಇಂಡಸ್ ಇಂಡ್ ಬ್ಯಾಂಕ್, ಎಲ್‌ ಆ್ಯಂಡ್ ಟಿ, ಟಿಸಿಎಸ್‌, ಐಸಿಐಸಿಐ ಬ್ಯಾಂಕ್ ಮತ್ತು ಒಎನ್‌ಜಿಸಿ ಷೇರುಗಳ ಮೌಲ್ಯದಲ್ಲಿ ಗರಿಷ್ಠ ಶೇಕಡ 6.64ರಷ್ಟು ಹೆಚ್ಚಳ ಆಯಿತು.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಗರಿಷ್ಠ ಶೇ 2.90ರಷ್ಟು ಗಳಿಕೆ ಕಂಡವು.

ರೂಪಾಯಿ ಚೇತರಿಕೆ: ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 28 ಪೈಸೆಗಳಷ್ಟು ಹೆಚ್ಚಾಯಿತು. ದಿನದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯ 73.61 ಆಗಿತ್ತು.

ಏಷ್ಯಾದ ಹಲವು ಕರೆನ್ಸಿಗಳ ಮೌಲ್ಯದಲ್ಲಿ ಹೆಚ್ಚಳ ಆಗಿದೆ. ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಇವು ರೂಪಾಯಿ ಮೌಲ್ಯ ಹೆಚ್ಚಿಸುವಲ್ಲಿ ನೆರವಿಗೆ ಬಂದವು ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT