ಮಂಗಳವಾರ, ಅಕ್ಟೋಬರ್ 22, 2019
21 °C
ಕೇಂದ್ರದ ಆರ್ಥಿಕ ಉತ್ತೇಜನಾ ಕ್ರಮಗಳ ಪ್ರಭಾವ

ಸಕಾರಾತ್ಮಕ ವಹಿವಾಟಿನ ವಾರ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಈ ವಾರ ಸಕಾರಾತ್ಮಕ ವಹಿವಾಟು ನಡೆಯಿತು. ಕೇಂದ್ರ ಸರ್ಕಾರದ ಘೋಷಿಸುತ್ತಿರುವ ಆರ್ಥಿಕ ಉತ್ತೇಜನ ಕ್ರಮಗಳು ಸೂಚ್ಯಂಕಗಳ ಏರುಮುಖ ಚಲನೆಗೆ ಕಾರಣವಾಗಿವೆ.

ವಾರದ ವಹಿವಾಟು ಚಂಚಲವಾಗಿತ್ತು. ಸೆಪ್ಟೆಂಬರ್ 20ರಂದು ಕಾರ್ಪೊರೇಟ್ ತೆರಿಗೆ ದರ ಕಡಿತದ ನಿರ್ಧಾರ ಘೋಷಣೆಯಾದ ಬಳಿಕ ಸಂವೇದಿ ಸೂಚ್ಯಂಕ 10 ವರ್ಷಗಳ ಬಳಿಕ 1921 ಅಂಶಗಳಷ್ಟು ಭಾರಿ ಜಿಗಿತ ಕಂಡಿತ್ತು.

ಸೋಮವಾರದ (ಸೆ.23) ವಹಿವಾಟಿನಲ್ಲಿಯೂ ಸೂಚ್ಯಂಕಗಳ ಏರಿಕೆ ಓಟ ಮುಂದುವರಿಯಿತು. ಆದರೆ, ಮಂಗಳವಾರ ಅಲ್ಪ ಗಳಿಕೆ ಕಂಡರೆ, ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಬುಧವಾರ, ಗುರುವಾರ ಮತ್ತು ಶುಕ್ರವಾರ ನಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ವಾರದ ವಹಿವಾಟಿನಲ್ಲಿ 808 ಅಂಶ ಜಿಗಿತ ಕಂಡು 38,822 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. 

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 238 ಅಂಶ ಹೆಚ್ಚಾಗಿ 11,512 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸಂಪತ್ತು 2.32 ಲಕ್ಷ ಕೋಟಿ ಹೆಚ್ಚಳ
ವಾರದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 2.32 ಲಕ್ಷ ಕೋಟಿ ಹೆಚ್ಚಾಗಿದೆ. 

ಷೇರುಪೇಟೆಯ ಬಂಡವಾಳ ಮೌಲ್ಯ ₹ 145.37 ಲಕ್ಷ ಕೋಟಿಯಿಂದ ₹ 147.69 ಲಕ್ಷ ಕೋಟಿಗೆ ತಲುಪಿದೆ. ಸೆಪ್ಟೆಂಬರ್‌ 3 ರಿಂದ 27ರವರೆಗಿನ ವಹಿವಾಟು ಅವಧಿಗಳಲ್ಲಿ ಹೂಡಿಕೆದಾರರ ಸಂಪತ್ತು ₹ 9.27 ಲಕ್ಷ ಕೋಟಿ ಹೆಚ್ಚಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)