ಗುರುವಾರ , ಸೆಪ್ಟೆಂಬರ್ 23, 2021
26 °C

ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಸೆನ್ಸೆಕ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಲ್ಲಿ 151 ಅಂಶ ಏರಿಕೆ ಕಂಡು, ಸಾರ್ವಕಾಲಿಕ ದಾಖಲೆಯ ಮಟ್ಟವಾದ 54,554ರಲ್ಲಿ ವಹಿವಾಟು ಕೊನೆಗೊಳಿಸಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 21 ಅಂಶ ಏರಿಕೆ ಕಂಡಿತು. ‘ದೇಶಿ ಷೇರು ಮಾರುಕಟ್ಟೆಗಳು ಮಂಗಳವಾರ ಬಹಳ ಚಂಚಲ ವಹಿವಾಟು ನಡೆಸಿದವು. ನಿಫ್ಟಿ ಸೂಚ್ಯಂಕವು ದಾಖಲೆಯ ಮಟ್ಟವನ್ನು ತಲುಪಿ, ನಂತರ ಕುಸಿತ ಕಂಡಿತು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ವಿನೋದ್ ಮೋದಿ ಹೇಳಿದ್ದಾರೆ.

ಮಿಡ್‌ ಕ್ಯಾಪ್‌ ಹಾಗೂ ಸ್ಮಾಲ್‌ ಕ್ಯಾಪ್‌ ಷೇರುಗಳ ಮೌಲ್ಯದಲ್ಲಿ ಈಚಿನ ತಿಂಗಳುಗಳಲ್ಲಿ ಹೆಚ್ಚಳ ಆಗಿದ್ದರಿಂದಾಗಿ, ಹೂಡಿಕೆದಾರರು ಲಾಭದ ಉದ್ದೇಶದಿಂದ ಈ ಷೇರುಗಳನ್ನು ಮಾರಾಟ ಮಾಡಿದರು ಎಂದು ವರ್ತಕರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು