ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 635 ಅಂಶ ಜಿಗಿತ

Last Updated 9 ಜನವರಿ 2020, 15:06 IST
ಅಕ್ಷರ ಗಾತ್ರ

ಮುಂಬೈ: ಅಮೆರಿಕ–ಇರಾನ್‌ ಸೇನಾ ಸಂಘರ್ಷವು ದೇಶದ ಷೇರುಪೇಟೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ.ಸದ್ಯದ ಮಟ್ಟಿಗೆ ಪರಿಸ್ಥಿತಿ ತುಸು ಶಾಂತವಾಗಿರುವುದರಿಂದ ಹೂಡಿಕೆದಾರರು ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಗುರುವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 634 ಅಂಶ ಜಿಗಿತ ಕಂಡು 41,452 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 190 ಅಂಶ ಹೆಚ್ಚಾಗಿ 12,215 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್‌ ಶೇ 3.80ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿದೆ. ಎಸ್‌ಬಿಐ, ಮಹೀಂದ್ರಾ, ಇಂಡಸ್‌ಇಂಡ್‌ ಬ್ಯಾಂಕ್‌, ಮಾರುತಿ ಸುಜುಕಿ, ಎಷ್ಯನ್‌ ಪೇಂಟ್ಸ್‌ ಮತ್ತು ರಿಲಯನ್ಸ್‌ ಇಂಡಸ್ಟ್ರಿಸ್‌ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.

ಟಿಸಿಎಸ್‌, ಎಚ್‌ಸಿಎಲ್‌ ಟೆಕ್‌, ಎನ್‌ಟಿಪಿಸಿ ಮತ್ತು ಸನ್‌ ಫಾರ್ಮಾ ಷೇರುಗಳು ಶೇ 1.73ರವರೆಗೂ ಇಳಿಕೆ ಕಂಡಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ನೊಂದಿಗೆ ಶಾಂತಿ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ. ಇದು ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಚೀನಾದ ಉಪ ಪ್ರಧಾನಿ ಲಿಯು ಹೇ ಅವರು ಮುಂದಿನವಾರ ವಾಷಿಂಗ್ಟನ್‌ಗೆ ಭೆಟಿ ನೀಡಲಿದ್ದು, ಅಮೆರಿಕ ಮತ್ತು ಚೀನಾ ಮಧ್ಯೆ ಮಧ್ಯಂತರ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವುದಾಗಿ ತಿಳಿಸಿದ್ದಾರೆ. ಇದೂ ಸಹ ಖರೀದಿ ವಹಿವಾಟಿಗೆ ಚೇತರಿಕೆ ನೀಡಿತು.

***

* 0.40%-ಬ್ರೆಂಟ್ ತೈಲ ದರದಲ್ಲಿನ ಏರಿಕೆ

* 26 ಪೈಸೆ -ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT