ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಕೋವಿಡ್-19 ಆತಂಕದ ಛಾಯೆ: ಕರಗುತ್ತಿದೆ ಸಂಪತ್ತು

Last Updated 3 ಏಪ್ರಿಲ್ 2020, 13:12 IST
ಅಕ್ಷರ ಗಾತ್ರ

ಮುಂಬೈ: ಏಷ್ಯಾದ 3ನೇ ಅತಿದೊಡ್ಡ ಆರ್ಥಿಕತೆ ಎನಿಸಿರುವ ಭಾರತದಲ್ಲಿ ಶುಕ್ರವಾರ ಕೋವಿಡ್-19ರಿಂದ ಉಂಟಾದ ಸೋಂಕಿತರ ಸಂಖ್ಯೆ 2000 ದಾಟಿತು. ಜಾಗತಿಕ ಆರ್ಥಿಕ ಹಿಂಜರಿತದ ಕಾರ್ಮೋಡ ದಟ್ಟೈಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಎಲ್ಲೆಡೆ ಷೇರುಪೇಟೆಗಳು ಕುಸಿತ ದಾಖಲಿಸುತ್ತಿವೆ. ಪೂರೈಕೆಯಲ್ಲಿ ಅಡೆತಡೆ ಉಂಟಾಗಬಹುದು ಎಂಬ ಕಾರಣಕ್ಕೆ ಕಚ್ಚಾ ತೈಲದ ಬೆಲೆ ಏರುತ್ತಿದೆ.

ಮುಂಬೈ ಪೇಟೆಯ ಸಂವೇದಿಕ ಸೂಚ್ಯಂಕ (ಸೆನ್ಸೆಕ್ಸ್) ಮತ್ತು ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕಗಳ (ನಿಫ್ಟಿ) ಮೇಲೂ ಈ ಬೆಳವಣಿಗೆಗಳು ಕರಾಳ ಛಾಯೆ ಬೀಳುತ್ತಿದೆ. ಸತತ ಇಳಿಕೆಯ ಹಾದಿಯಲ್ಲಿರುವ ಭಾರತೀಯ ಷೇರುಪೇಟೆಗಳು ಚೇತರಿಸಿಕೊಳ್ಳುತ್ತಿಲ್ಲ.

ಶುಕ್ರವಾರವೂ ಷೇರುಪೇಟೆಯಲ್ಲಿ ಇದರ ಪರಿಣಾಮಗಳು ಪ್ರತಿಫಲಿಸಿದವು. ನಿಫ್ಟಿ 50 ಸೂಚ್ಯಂಕವು ಶೇ 2.06ರ ಕುಸಿತ ದಾಖಲಿಸಿ, 8,083.80 ಅಂಶಗಳಲ್ಲಿ ದಿನದ ವಹಿವಾಟು ಮುಗಿಸಿತು. ಮುಂಬೈ ಪೇಟೆಯ ಸೆನ್ಸೆಕ್ಸ್‌ 2.39ರ ಇಳಿಕೆ ದಾಖಲಿಸಿ, 27,590.95 ಅಂಶಗಳಲ್ಲಿ ದಿನದ ವಹಿವಾಟು ಮುಗಿಸಿತು.

ಈ ವಾರದಲ್ಲಿ ಎನ್‌ಎಸ್‌ಸಿ ಶೇ 6.7 ಮತ್ತು ಬಿಎಸ್‌ಇ ಶೇ 7.5ರಷ್ಟು ಇಳಿಕೆ ದಾಖಲಿಸಿವೆ. ಇದು ಕಳೆದ 7 ವಾರಗಳಿಂದ ದಾಖಲಾಗುತ್ತಿರುವ ಸತತ ಇಳಿಕೆಯ ಮುಂದುವರಿಕೆ.

ಶುಕ್ರವಾರ ಮುಂಜಾನೆ ಹೊತ್ತಿದೆ ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 2000 ದಾಟಿತ್ತು. ಈವರೆಗೆ ದೇಶದಲ್ಲಿ 58 ಮಂದಿ ಮೃತಪಟ್ಟಿದ್ದಾರೆ. ವಿಶ್ವದ ವಿವಿಧೆಡೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ.

ರಷ್ಯಾ ಮತ್ತು ಸೌದಿ ಅರೇಬಿಯಾಗಳ ಪ್ರತಿದಿನದ ತೈಲೋತ್ಪಾದನೆಗೆ ಮಿತಿ ವಿಧಿಸುವ ಒಪ್ಪಂದವೊಂದನ್ನು ನಾನು ಮಧ್ಯವರ್ತಿಯಾಗಿ ಊರ್ಜಿತಕ್ಕೆ ತಂದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಗುರುವಾರಹೇಳಿಕೆ ನೀಡಿದ್ದರು.ಈ ಬೆಳವಣಿಗೆಯ ನಂತರ ಏರಲು ಆರಂಭಿಸಿದ ಕಚ್ಚಾತೈಲದ ಬೆಲೆ ಶುಕ್ರವಾರವೂ ಮುನ್ನಡೆ ಕಾಯ್ದುಕೊಂಡಿತು.ಅಮೆರಿಕ ಮತ್ತುಚೀನಾ ನಂತರ ಭಾರತ ವಿಶ್ವದ ಅತಿದೊಡ್ಡ ಕಚ್ಚಾತೈಲು ಆಮುದುದಾರ ದೇಶವಾಗಿದೆ.

ಷೇರುಪೇಟೆಯಲ್ಲಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಮೌಲ್ಯ ಕಳೆದುಕೊಂಡವು. ನಿಫ್ಟಿ ಬ್ಯಾಂಕಿಂಗ್‌ ಸಂವೇದಿ ಸೂಚ್ಯಂಕವು ಶೇ 5.3 ಮತ್ತು ನಿಫ್ಟಿ ಫೈನಾನ್ಷಿಯಲ್ ಇಂಡೆಕ್ಸ್ ಶೇ 4.3ರಷ್ಟು ಮೌಲ್ಯ ಕಳೆದುಕೊಂಡಿತು.

ಆಕ್ಸಿಸ್‌ ಬ್ಯಾಂಕ್ ಶೇ 9.26ರಷ್ಟು ಮೌಲ್ಯ ಕಳೆದುಕೊಂಡು (₹ 325.45), ಅತಿಹೆಚ್ಚು ಕುಸಿತ ದಾಖಲಿಸಿದ ಕಂಪನಿ ಎನಿಸಿತು. ಇಂಡಸ್‌ಇಂಡ್ ಬ್ಯಾಂಕ್ ಸಹ ಶೇ 8.49ರಷ್ಟು ಮೌಲ್ಯ ಕಳೆದುಕೊಂಡಿತು (₹ 313.25). ಸನ್‌ ಫಾರ್ಮಾ ಶೇ 9.43ರಷ್ಟು ಗಳಿಕೆ ದಾಖಲಿಸಿತು (₹ 375.90).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT