ಮುಂಬೈ: ಬಜೆಟ್ ಪ್ರಸ್ತಾವಗಳಿಗೆ ಸತತ ಎರಡನೆ ವಹಿವಾಟಿನ ದಿನವೂ ನಕಾರಾತ್ಮಕವಾಗಿ ಸ್ಪಂದಿಸಿರುವ ಮುಂಬೈ ಷೇರುಪೇಟೆಯು ಸೋಮವಾರದ ವಹಿವಾಟಿನಲ್ಲಿ 793 ಅಂಶಗಳ ಪತನ ಕಂಡಿದೆ.
ಈ ಹಣಕಾಸು ವರ್ಷದಲ್ಲಿ ದಿನದ ವಹಿವಾಟಿನಲ್ಲಿನ ಇದುವರೆಗಿನ ಅತಿದೊಡ್ಡ ಕುಸಿತ ಇದಾಗಿದೆ. ಎರಡು ದಿನಗಳಲ್ಲಿನ ಸೂಚ್ಯಂಕದ ಒಟ್ಟಾರೆ ನಷ್ಟವು 1,187 ಅಂಶಗಳಷ್ಟಾಗಿದೆ.
ಕರಗಿದ₹ 3 ಲಕ್ಷ ಕೋಟಿ ಸಂಪತ್ತು
ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆದಿದ್ದರಿಂದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ಒಂದೇ ದಿನದಲ್ಲಿ ₹ 3.39 ಲಕ್ಷ ಕೋಟಿಗಳಷ್ಟು ಕರಗಿತು.ಶುಕ್ರವಾರದ ನಷ್ಟವನ್ನೂ ಪರಿಗಣಿಸಿದರೆ ಇದುವರೆಗೆ ಕರಗಿದ ಸಂಪತ್ತು ₹ 5.61ಲಕ್ಷ ಕೋಟಿಗಳಷ್ಟಾಗಿದೆ. ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ₹ 151.35 ಲಕ್ಷ ಕೋಟಿಗಳಿಂದ ₹ 147.96 ಲಕ್ಷ ಕೋಟಿಗಳಿಗೆ ಇಳಿಕೆಯಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.