ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ ತ್ರೈಮಾಸಿಕದಲ್ಲಿ ಟಿಸಿಎಸ್‌ಗೆ ₹ 8,118 ಕೋಟಿ ಲಾಭ

Last Updated 17 ಜನವರಿ 2020, 11:35 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಸಾಫ್ಟ್‌ವೇರ್‌ ಸೇವೆಗಳ ಬೃಹತ್‌ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿಸಿಎಸ್‌) ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 8,118 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ಶುಕ್ರವಾರ ಘೋಷಿಸಿಕೊಂಡಿದೆ.

ಕಳೆದ ತ್ರೈಮಾಸಿಕದಲ್ಲಿ ₹ 8,042 ಕೋಟಿ ಲಾಭ ಗಳಿಸಿದ್ದ ಟಿಸಿಎಸ್‌ 2019ರ ಡಿಸೆಂಬರ್‌ ಆಂತ್ಯಕ್ಕೆ ಶೇ 0.9ರಷ್ಟು ಹೆಚ್ಚಳದೊಂದಿಗೆ ₹ 8,118 ಕೋಟಿ ಗಳಿಸಿದೆ. ಟಿಸಿಎಸ್‌ ಆದಾಯ ಶೇ 2.25ರಷ್ಟು, ಅಂದರೆ ₹ 38,977 ಕೋಟಿಯಿಂದ ₹ 39,854 ಕೋಟಿಗೆ ಏರಿಕೆಯಾಗಿದೆ.

ಕಂಪನಿ ಪ್ರತಿ ಷೇರಿಗೆ ₹ 5ರಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ. ವರ್ಷದಿಂದ ವರ್ಷಕ್ಕೆ ಟಿಸಿಎಸ್‌ ಆದಾಯ ಶೇ 6.8ರಷ್ಟು ಹೆಚ್ಚಳವಾಗುತ್ತಿದೆ.

ಶುಕ್ರವಾರದ ವಹಿವಾಟಿನಲ್ಲಿ ಟಿಸಿಎಸ್‌ ಷೇರು ಶೇ 0.91ರಷ್ಟು ಇಳಿಕೆಯಾಗಿದ್ದು, ₹ 2,218ರಲ್ಲಿ ವಹಿವಾಟು ಮುಕ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT