ಮುಂಬೈ (ಪಿಟಿಐ): ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ತನ್ನ ಗೃಹ ಮತ್ತು ಕಾರು ಖರೀದಿ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ.
ಹೊಸ ದರಗಳು ಈ ತಿಂಗಳ 1 ರಿಂದಲೇ ಜಾರಿಗೆ ಬಂದಿವೆ. ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿ ನಿಗದಿಪಡಿಸುವ ಕನಿಷ್ಠ ಬಡ್ಡಿ ದರವನ್ನು (ಎಂಸಿಎಲ್ಆರ್) ಶೇ 9.15ಕ್ಕೆ ಇಳಿಸಿದೆ.
ಇದರಿಂದ ಗೃಹ ಸಾಲಗಳ ಮೇಲಿನ ಬಡ್ಡಿ ದರವು ಶೇ 9.40ರಷ್ಟಾಗಲಿದ್ದು, ಮಹಿಳೆಯರಿಗೆ ಶೇ 9.35 ರಷ್ಟು ಬಡ್ಡಿ ಅನ್ವಯಿಸಲಿದೆ.
ಕಾರು ಖರೀದಿ ಸಾಲದ ಬಡ್ಡಿ ದರವು ಕೂಡ ಶೇ 0.5ರಷ್ಟು ಕಡಿಮೆಯಾಗಿದೆ.