ನವದೆಹಲಿ (ಐಎಎನ್ಎಸ್): ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಏರ್ಇಂಡಿಯಾ ಸಂಸ್ಥೆಯ ಪೈಲೆಟ್ಗಳು ಮುಂದಿನ ವಾರ ಮುಷ್ಕರ ನಡೆಸಲು ಉದ್ದೇಶಿಸಿದ್ದು, ಇದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ನಡೆಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಏರ್ ಇಂಡಿಯಾ ಸದ್ಯ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಉದ್ಯೋಗಿಗಳ ಮುಷ್ಕರ ಸಂಸ್ಥೆಗೆ ಮತ್ತಷ್ಟು ಹಾನಿಯುಂಟು ಮಾಡಲಿದೆ. ಆದ್ದರಿಂದ ಉದ್ದೇಶಿತ ಮುಷ್ಕರ ತಡೆಯಲು ಸರ್ವ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಭಾರತೀಯ ವಾಣಿಜ್ಯ ಪೈಲೆಟ್ಗಳ ಒಕ್ಕೂಟ (ಐಸಿಪಿಎ) ಈಗಾಗಲೇ ಮುಂದಿನ ವಾರ ಮುಷ್ಕರ ನಡೆಸುವುದಾಗಿ ಏರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಜಾದವ್ ಅವರಿಗೆ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.