ಹಲ್ದಿಯಾ / ಪಶ್ಚಿಮ ಬಂಗಾಳ (ಪಿಟಿಐ): ಅಡುಗೆ ಅನಿಲ (ಎಲ್‌ಪಿಜಿ) ಮತ್ತು ಡೀಸೆಲ್‌ಗಳ ಬೆಲೆ ಏರಿಕೆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶನಿವಾರ ಇಲ್ಲಿ ತಿಳಿಸಿದರು.ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಯಾವಾಗಲೂ ಪರಿಷ್ಕೃತಗೊಳ್ಳುತ್ತಲೇ ಇರುತ್ತವೆ. ಸೂಕ್ತ ಸಮಯದಲ್ಲಿ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಎಲ್ಲ ವಿಷಯಗಳನ್ನು ಪರಿಗಣಿಸಲಾಗುವುದು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳದ ಬಗ್ಗೆ ಆತಂಕ ಸೃಷ್ಟಿಸಬಾರದು. ಬೆಲೆ ಏರಿಕೆಯ ನಿರ್ಧಾರ ಕೈಗೊಳ್ಳುವುದು ಕಠಿಣವಾಗಿದ್ದರೂ, ಸರ್ಕಾರ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿನ ತೈಲ ಶುದ್ಧೀಕರಣ ಘಟಕದ ವಿಸ್ತರಣಾ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಬೆಲೆ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿರುವ ಪ್ರಣವ್ ನೇತೃತ್ವದ ಸಚಿವರ ಅಧಿಕಾರ ಸಮಿತಿ ಸಭೆ ಈ ತಿಂಗಳಾಂತ್ಯಕ್ಕೆ ಸಭೆ ಸೇರಲಿದೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್‌ಗೆ 91 ಡಾಲರ್‌ಗಳಿಗೆ ಏರಿಕೆಯಾಗಿರುವಾಗ ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆ ಎಣ್ಣೆಗಳ ಮಾರಾಟದಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಕ್ರಮವಾಗಿ ರೂ 5.41, ರೂ 16.88 ಮತ್ತು ರೂ 272.19 ರಷ್ಟು ನಷ್ಟಕ್ಕೆ ಗುರಿಯಾಗುತ್ತಿವೆ. ಪೆಟ್ರೋಲಿಯಂ ಉತ್ಪನ್ನಗಳು ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದರೂ ಭಾರತವು ಪ್ರಮುಖ ರಫ್ತು ದೇಶವಾಗಿ ಹೊರ ಹೊಮ್ಮಲಿದೆ ಎಂದರು.

ಪ್ರಣವ್ ಅವರು ಇದಕ್ಕೂ ಮುನ್ನ ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿನ, ಮಾಲಿನ್ಯ ನಿಯಂತ್ರಣದ ಬಿಎಸ್3 ಮತ್ತು ಬಿಎಸ್4 ಮಾನದಂಡದ ಹೈಸ್ಪೀಡ್ ಡೀಸೆಲ್ ಉತ್ಪಾದಿಸುವ ಹೈಡ್ರೊಕ್ರ್ಯಾಕರ್ ಘಟಕದ ಉದ್ಘಾಟನೆಯನ್ನೂ ನೆರವೇರಿಸಿದರು. ಈ ಎರಡೂ ಘಟಕಗಳಿಗೆ ್ಙ 2869 ಕೋಟಿ ವೆಚ್ಚವಾಗಿರುವ ಅಂದಾಜಿದೆ. ಸದ್ಯಕ್ಕೆ ದೇಶದ ಕಚ್ಚಾ ತೈಲದ ಉತ್ಪಾದನಾ ಮಟ್ಟವು 35 ದಶಲಕ್ಷ ಟನ್‌ಗಳಷ್ಟಿದ್ದು, ಹೆಚ್ಚುವರಿಯಾಗಿ 6ರಿಂದ 7 ದಶಲಕ್ಷ ಟನ್‌ಗಳಷ್ಟು ಏರಿಕೆಯಾಗಲಿದೆ. ದೇಶದ ಕಚ್ಚಾ ತೈಲ ಶುದ್ಧೀಕರಣ ಘಟಕಗಳ ಸಾಮರ್ಥ್ಯವು 11ನೇ ಪಂಚವಾರ್ಷಿಕ ಯೋಜನೆ ಅಂತ್ಯದ ಹೊತ್ತಿಗೆ 185 ದಶಲಕ್ಷ ಟನ್‌ಗಳಿಂದ 240 ದಶಲಕ್ಷ ಟನ್‌ಗಳಿಗೆ ಹೆಚ್ಚಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.