ಮುಂಬೈ (ಪಿಟಿಐ): ಸೋಮವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟ ರೂ 52.84ಕ್ಕೆ ಕುಸಿತ ಕಂಡಿದೆ.

ಅಕ್ಟೋಬರ್ ತಿಂಗಳ ದೇಶದ ಕೈಗಾರಿಕೆ ಉತ್ಪಾದನಾ (ಐಐಪಿ) ವೃದ್ಧಿ ದರವು ಕಳೆದ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟ ಶೇ 5.1ಕ್ಕೆ ಕುಸಿತ ಕಂಡ ಹಿನ್ನೆಲೆಯಲ್ಲಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಷೇರು ಪೇಟೆಯಿಂದ ಗರಿಷ್ಠ ಪ್ರಮಾಣದಲ್ಲಿ ಬಂಡವಾಳ ಹಿಂತೆಗೆದುಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಡಾಲರ್ ಬೇಡಿಕೆ ದಿಢೀರನೆ ಹೆಚ್ಚಿದೆ.

ಸೋಮವಾರ ಒಂದೇ ದಿನ ಡಾಲರ್ ಎದುರು ರೂಪಾಯಿ ಮೌಲ್ಯ 81 ಪೈಸೆಗಳಷ್ಟು ಇಳಿಕೆ ಕಂಡಿದೆ. `ಯೂರೊ~ ಮೌಲ್ಯ ಇಳಿಕೆಯಾಗಿರುವುದು ಕೂಡ ಡಾಲರ್ ಬೇಡಿಕೆ ಹೆಚ್ಚುವಂತೆ ಮಾಡಿದೆ ಎಂದು ಐಡಿಬಿಐ ಬ್ಯಾಂಕ್ನ ಖಜಾನೆ ವ್ಯವಹಾರಗಳ ಮುಖ್ಯಸ್ಥ ಎನ್.ಎಸ್ ವೆಂಕಟೇಶ್ ಹೇಳಿದ್ದಾರೆ.

ರೂಪಾಯಿ ಬೆಲೆ ಕುಸಿತದ ಜತೆಗೆ ಕೈಗಾರಿಕೆ ಉತ್ಪಾದನೆ ವೃದ್ಧಿ ದರ ಗಣನೀಯ ಕುಸಿತ ಕಂಡಿರುವುದೂ ಹೂಡಿಕೆದಾರರ ಆತ್ಮವಿಶ್ವಾಸ ತಗ್ಗಿಸಿದೆ.

ಸೋಮವಾರ ಬೆಳಿಗ್ಗೆ ಡಾಲರ್ ಎದುರು ರೂ52.09 ಇದ್ದ ರೂಪಾಯಿಯ ವಿನಿಮಯ ದರ ಮುಕ್ತಾಯದ ವೇಳೆಗೆ ರೂ52.84ರಷ್ಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.