ಇತ್ತೀಚೆಗೆ ನಡೆದ ಕೇಂದ್ರ ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ, ಭದ್ರತಾ ಅಧಿಕಾರಿಗಳು `ರಿಮ್~ ಮುಂಬೈನಲ್ಲಿ ಸರ್ವರ್ ಸ್ಥಾಪಿಸಿದೆ ಎಂದು ಧೃಡೀಕರಿಸಿದ್ದಾರೆ. ಭದ್ರತಾ ಅಧಿಕಾರಿಗಳ ತಂಡವೊಂದು ಸರ್ವರ್ ಪರಿ ಶೀಲಿಸಿದೆ. ಕಾನೂನಿನ ವ್ಯಾಪ್ತಿಯಲ್ಲೇ ಬ್ಲ್ಯಾಕ್ಬೆರಿ ಮೆಸೆಂಜರ್ ಸೇವೆಯ ಮೇಲೆ ನೇರವಾಗಿ ನಿಗಾ ವಹಿಸಲು ಸರ್ಕಾರಕ್ಕೆ ಶೀಘ್ರದಲ್ಲಿಯೇ ಕಂಪೆನಿಯು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.