ನವದೆಹಲಿ (ಪಿಟಿಐ): ಆನ್‌ಲೈನ್ ಮೂಲಕ ವೈವಾಹಿಕ ಮಾಹಿತಿ ಒದಗಿಸುವ ತಾಣಗಳ ವಹಿವಾಟು 2017ರ ವೇಳೆಗೆ ₨1,500 ಕೋಟಿ ದಾಟಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಅಧ್ಯಯನ ತಿಳಿಸಿದೆ.

ಸದ್ಯ ಇಂತಹ ತಾಣಗಳ ಮಾರುಕಟ್ಟೆ ಗಾತ್ರ ₨520 ಕೋಟಿಯಷ್ಟಿದ್ದು, ವಾರ್ಷಿಕ ಶೇ 65ರಷ್ಟು ಪ್ರಗತಿ ಕಾಣುತ್ತಿದೆ. ಇಂಟರ್‌ನೆಟ್ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನೆರಡು ವರ್ಷಗಳಲ್ಲಿ ಈ ಮಾರುಕಟ್ಟೆ ಗಣನೀಯ ಪ್ರಗತಿ ಕಾಣಲಿದೆ ಎಂದು ‘ಅಸೋಚಾಂ’ ಅಧ್ಯಯನ ವಿವರಿಸಿದೆ.

2012–13ನೇ ಸಾಲಿನಲ್ಲಿ ಸುಮಾರು 5 ಕೋಟಿ ಜನರು ವೈವಾಹಿಕ ಮಾಹಿತಿ ತಾಣಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 25 ಲಕ್ಷ ಮಂದಿ ತಮ್ಮ ಭಾವಚಿತ್ರ ಮತ್ತು ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ಗೆ ಅಪ್ಲೋಡ್ ಮಾಡಿದ್ದಾರೆ.

‘ಇಂತಹ ತಾಣಗಳಲ್ಲಿ ನೋಂದಣಿ ಮಾಡಿಕೊಳ್ಳುವುದು ಸುಲಭ. ಸರಳವಾಗಿ ವೈವಾಹಿಕ ಮಾಹಿತಿ ಪಡೆಯಬಹುದು ಇದರಿಂದ ದಿನೇ ದಿನೇ ಇಂತಹ ತಾಣಗಳ ಜನಪ್ರಿಯತೆ ಹೆಚ್ಚುತ್ತಿದೆ’ ಎಂದು ‘ಅಸೋಚಾಂ’ನ ಪ್ರಧಾನ ಕಾರ್ಯದರ್ಶಿ ಎಸ್.ಡಿ ರಾವತ್ ಅಭಿಪ್ರಾಯಪಟ್ಟಿದ್ದಾರೆ.

2011–12 ಮತ್ತು 2012–13ನೇ ಸಾಲಿನಲ್ಲಿ ಆನ್‌ಲೈನ್ ವೈವಾಹಿಕ ತಾಣಗಳು ಮತ್ತು ಉದ್ಯೋಗ ತಾಣಗಳು ಕ್ರಮವಾಗಿ ಶೇ 56 ಮತ್ತು ಶೇ 52ರಷ್ಟು ಪ್ರಗತಿ ದಾಖಲಿಸಿವೆ. ವೃತ್ತಿಪರರು ಮತ್ತು ಅನಿವಾಸಿ ಭಾರತೀಯರು (ಎನ್‌ಆರ್‌ಐ) ಹೆಚ್ಚಾಗಿ ಇಂತಹ ತಾಣಗಳ ಮೂಲಕವೇ ತಮ್ಮ ಸಂಗಾತಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಜಾತಿ, ವೃತ್ತಿ, ಊರು, ಆಸಕ್ತಿ, ಹವ್ಯಾಸಕ್ಕೆ ತಕ್ಕಂತೆ ಸರಳವಾದ ಆಯ್ಕೆಗಳು ಇಲ್ಲಿವೆ ಎಂದು ಅವರು ಹೇಳಿದ್ದಾರೆ.

2012–13ನೇ ಸಾಲಿನಲ್ಲಿ ಉದ್ಯೋಗ ಮಾಹಿತಿ ತಾಣಗಳಲ್ಲಿ 2.5 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಈ ಸಂಖ್ಯೆ 5 ಕೋಟಿಗೆ ಏರಿಕೆ ಕಾಣುವ ನಿರೀಕ್ಷೆ ಇದೆ. ಆನ್‌ಲೈನ್ ಮೂಲಕ ಉದ್ಯೋಗ ಹುಡುಕುವವರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.