ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿಯ ಅಡಿಯಲ್ಲಿ `ಹಟ್ಟಿ ಗೋಲ್ಡ್ ವಿದೇಶ~ ಎಂಬ ಉಪ ಕಂಪನಿ ಆರಂಭಿಸಲು ನಿರ್ದೇಶಕ ಮಂಡಳಿ ಅನುಮತಿ ನೀಡಿದೆ.

ಹಟ್ಟಿ ಒಂದು ಹಳೆಯ ಕಂಪನಿ ಆಗಿದ್ದರಿಂದ ಇಲ್ಲಿ ಉತ್ತಮ ಗಣಿ ತಜ್ಞರಿದ್ದಾರೆ. ಇವರನ್ನು ಬಳಸಿಕೊಂಡು ಕರ್ನಾಟಕ ಮತ್ತು ವಿದೇಶಗಳಲ್ಲಿ ಚಿನ್ನದ ಗಣಿ ತೆಗೆಯಲು ತಜ್ಞರ ಸೇವೆ ನೀಡಲಾಗುತ್ತದೆ. ಇದರಿಂದ ಕಂಪನಿ ಹೆಚ್ಚು ಲಾಭ ಗಳಿಸಬಹುದು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮೊನ್ನಪ್ಪ ತಿಳಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಣಿ ಕಾರ್ಮಿಕರ ವೇತನ ಮತ್ತು ಭತ್ಯೆ ಸೇರಿ ಶೇ 22.94ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಕಾರ್ಮಿಕ ಸಂಘ ಮತ್ತು ಆಡಳಿತ ವರ್ಗ ನಡುವಿನ ವೇತನ ಒಪ್ಪಂದಕ್ಕೆ ನಿರ್ದೇಶಕ ಮಂಡಳಿ ಅನುಮೋದನೆ ಸಿಕ್ಕಿದೆ. ಇದಕ್ಕೆ ಸರ್ಕಾರದ ಅನುಮೋದನೆ ಪಡೆಯಬೇಕಾಗಿದೆ. ಸರ್ಕಾರಕ್ಕೆ ಗಣಿ ಕಾರ್ಮಿಕರ ಸಂಕಷ್ಟ ಮನವರಿಕೆ ಮಾಡಿ ಅನುಮೋದನೆ ಪಡೆಯುವ ವಿಶ್ವಾಸವಿದೆ ಎಂದರು.

ಸುಮಾರು ರೂ. 235 ಕೋಟಿಗಳ ವೆಚ್ಚದಲ್ಲಿ ಹೊಸ ಸರ್ಕುಲರ್ ಶಾಫ್ಟ್ ಆರಂಭಿಸಲು ಕೂಡ ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿದೆ. ಇದರಿಂದ ಕಂಪನಿಯ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಲಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಾಗಿದೆ. ಮೂರು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಉತ್ಪಾದನೆ ಹಿನ್ನಡೆ: 2011-12ನೇ ಸಾಲಿನಲ್ಲಿ ಕಂಪನಿಯು 2.4 ಟನ್ಗಳಷ್ಟು ಚಿನ್ನ ಉತ್ಪಾದಿಸಬೇಕಿತ್ತು. ತಾಂತ್ರಿಕ ಅಡೆತಡೆಗಳಿಂದ ಶೇ 10ರಷ್ಟು ಹಿನ್ನಡೆಯಾಗಿದೆ. ಅಂದರೆ 2.1 ಟನ್ ಚಿನ್ನದ ಉತ್ಪಾದಿಸಲಾಗಿದೆ ಎಂದರು.

ಅನುಕಂಪದ ಆಧಾರ ಮೇಲೆ ನೇಮಕಾತಿ ಮಾಡಲಾಗುತ್ತಿದೆ. ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡುವ ಕುರಿತು ಕೆಲವೇ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ನೆರೆ ಸಂತ್ರಸ್ತರಿಗೆ ನಿರ್ಮಿಸಿದ 887 ಮನೆಗಳಲ್ಲಿ ಮಾದರ ಗ್ರಾಮದ 98 ಮನೆಗಳನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗಿದೆ. ಮಾನ್ವಿ ತಾಲ್ಲೂಕು ಹಾರನಹಳ್ಳಿಯಲ್ಲಿ 200 ಮನೆಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಹಟ್ಟಿ ಗಣಿ ಕಾರ್ಮಿಕರಿಗೆ ಪ್ರತಿ ವರ್ಷ 100 ಮನೆ ನಿರ್ಮಿಸಲು ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿದ್ದು ಟೆಂಡರ್ ಕರೆಯಲಾಗಿದೆ. ಜೈವಿಕ ಇಂಧನ ಉತ್ಪಾದಿಸುವ ದೃಷ್ಟಿಯಿಂದ ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ಮರ ಬೆಳೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಜೊತೆಯಲ್ಲಿ ಸೌರ ಶಕ್ತಿ ಮತ್ತು ಜೈವಿಕ ಇಂಧನ ಉತ್ಪಾದಿಸುವ ಉದ್ದೇಶವನ್ನೂ ಕಂಪನಿ ಹೊಂದಿದೆ ಎಂದರು. ಉಪ ಪ್ರಧಾನ ವ್ಯವಸ್ಥಾಪಕ ಅಶೋಕ ವಾಲ್ಮೀಕಿ ಹಾಗೂ ಎಸ್. ಕಿಶೋರ ಕುಮಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.