ನವದೆಹಲಿ (ಪಿಟಿಐ): ದೇಶಿ ಮಾರುಕಟ್ಟೆಗೆಂದೇ ವಿಶೇಷವಾಗಿ ವಿನ್ಯಾಸ ಮಾಡಿರುವ ಪುಟ್ಟ ಕಾರು `ಇಆನ್~ ಅನ್ನು ಹುಂಡೈ ಮೋಟಾರ್ ಕಂಪನಿ ಗುರುವಾರ ಇಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.

ಗ್ರಾಹಕರ ಅಭಿರುಚಿ ಮತ್ತು ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಕಾರಿನ ವಿನ್ಯಾಸ ರೂಪಿಸಲಾಗಿದೆ ಎಂದು ಹುಂಡೈ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಎಚ್. ಡಬ್ಲ್ಯು ಪರ್ಕ್ ಹೇಳಿದ್ದಾರೆ.

ಮಾರುತಿ ಸುಜುಕಿಯ ಆಲ್ಟೊಗೆ ಇದು ಸ್ಪರ್ಧೆ ಒಡ್ಡಲಿದೆ ಎಂದೂ ಹೇಳಲಾಗಿದೆ. `ಇಆನ್~ ದೆಹಲಿ ಎಕ್ಸ್‌ಷೋ ರೂಂ ಬೆಲೆ ರೂ. 2.69 ಲಕ್ಷದಿಂದ ರೂ.3.71 ಲಕ್ಷದವರೆಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.