ಶನಿವಾರ, ಮಾರ್ಚ್ 6, 2021
31 °C

ಚಟುವಟಿಕೆಯಿಂದಿರಿ: ‘ಮಸಲ್ ಮೇನಿಯಾ’ ವಿನ್ನರ್ ರಘುರಾಮಪ್ಪ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆರೊಗ್ಯಕರ ಡಯಟ್ ಹೇಗಿರಬೇಕು?

ನಾವು ಆರಂಭಿಸುವ ಡಯಟ್‌ ಕೆಲ ದಿನಗಳ ನಂತರ ಬೇಸರ ಉಂಟುಮಾಡುತ್ತದೆ. ಆ ಸಮಯಕ್ಕೆ ಮತ್ತೆ ನಮ್ಮ ಹಳೆ ಆಹಾರ ಪದ್ಧತಿಯ ಕಡೆಗೆ ಹೊರಳುತ್ತೇವೆ. ಹಾಗಾಗಿ ಇಷ್ಟು ಸಮಸ್ಯೆ ಮಾಡಿಕೊಳ್ಳುವ ಬದಲು ನಿಮ್ಮ ಊಟದಲ್ಲಿ ಸಕ್ಕರೆ ಬಳಸುವುದನ್ನು ಕಡಿಮೆ ಮಾಡಿ. ಸಕ್ಕರೆ ಬದಲು ಬೆಲ್ಲ ಬಳಸಿ.

ಪೋಷಕಾಂಶಯುಕ್ತ ಆಹಾರ ಸೇವನೆ ಕಡೆ ಗಮನಕೊಡಿ. ನಿಮ್ಮ ಆಹಾರದಲ್ಲಿ ತುಪ್ಪ, ಬೆಣ್ಣೆಯ ಬಳಕೆಯೂ ಇರಲಿ. ಇದು ಆರೋಗ್ಯಕ್ಕೆ ಒಳ್ಳೆಯದು.  ಹೊರಗಡೆ ಕುರುಕಲು ತಿಂಡಿ ತಿನ್ನುವ ಬದಲು ಮನೆ ಊಟಕ್ಕೆ ಪ್ರಾಶಸ್ತ್ಯ ನೀಡಿ. ದಿನಕ್ಕೆ ಐದು ಹೊತ್ತು ಸ್ವಲ್ಪ ಸ್ವಲ್ಪ ಊಟ ಮಾಡಬೇಕು ಎಂದು ಹೇಳುತ್ತಾರೆ. ಆದರೆ ನಮ್ಮ ದೇಹದ ಸಮಯದ ಪ್ರಕಾರ ತಿನ್ನಬೇಕು. ಅಂದರೆ‌ ನಿಮಗೆ ಹಸಿವಾದಾಗ ಊಟ ಮಾಡಬೇಕು.

ಸರಿಯಾದ ಉಪವಾಸ ಕ್ರಮ ಯಾವುದು? 

ಮೊದಲು ಉಪವಾಸ ಮಾಡುವುದು ಹೇಗೆ ಎಂಬುದು ತಿಳಿದಿರಬೇಕು. ದೇಹಕ್ಕೆ ಗ್ಲೂಕೋಸ್ ಸೇರಿದರೆ ಅದು ಉಪವಾಸವಾಗುವುದಿಲ್ಲ.  ಉಪವಾಸ ಮಾಡುವುದರಲ್ಲಿ ಹಲವು ವಿಧಗಳಿವೆ. ಅದರಲ್ಲಿ ಇಂಟರ್ ಮಿಟೆಂಟ್ ಫಾಸ್ಟಿಂಗ್, ಎಕ್ಸೆಂಡ್‌ ಫಾಸ್ಟಿಂಗ್‌ ಹೀಗೆ ವಿವಿಧ ಹಂತಗಳಿವೆ. ಉಪವಾಸ ಮಾಡುವ ಮೊದಲು ಫಿಟ್‌ನೆಸ್‌ ಟ್ರೈನರ್ ಸಲಹೆ ಪಡೆಯಿರಿ. 

ಹೊಸಬರಿಗಾಗಿ ಸಲಹೆಗಳು...

ಹಲವರು ದಪ್ಪಗಾಗಬೇಕು ಎಂದು ಬಯಸಿದರೇ ಕೆಲವರು ಸಣ್ಣ ಆಗಬೇಕೆಂದುಕೊಂಡಿರುತ್ತಾರೆ. ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ ಫಿಟ್‌ನೆಸ್‌ನ ಆಶಯ ಭಿನ್ನವಾಗಿರುತ್ತದೆ. ಹಾಗಾಗಿ  ಆರಂಭಿಸುವ ಮೊದಲು ನಮ್ಮ ಗುರಿ ಏನು ಎಂಬುದನ್ನು ಮೊದಲು ನಿರ್ಧರಿಸಬೇಕು. ಯಾರೇ ಆಗಲಿ;  ಆರಂಭದಲ್ಲಿ ಒಂದೇ ಸಲಕ್ಕೆ ದೇಹದ ಮೇಲೆ  ಒತ್ತಡ ಹಾಕಬಾರದು.

ನಿಧಾನವಾಗಿ, ಹಂತಹಂತವಾಗಿ ತಯಾರಿ ನಡೆಸಬೇಕು.  ಅದರಲ್ಲೂ ಫಿಟ್‌ನೆಸ್‌ ಬಯಸುವ ಕೆಲವರಿಗೆ ಜಿಮ್ ಇಷ್ಟ ಆಗಬಹುದು, ಕೆಲವರಿಗೆ ಯೋಗ, ಜುಂಬಾ, ಗ್ರೂಪ್ ವ್ಯಾಯಾಮ ಇಷ್ಟವಾಗಬಹುದು. ವಯಸ್ಸಾಗಿರುವವರಿಗೆ ಜಿಮ್‌ಗೆ ಹೋಗಲು ಸಾಧ್ಯವಾಗದೇ ಇರಬಹುದು. ಹಾಗಾಗಿ ಸಾಧ್ಯವಾದಷ್ಟು ಚಟುವಟಿಕೆಯಿಂದ ಇರಿ.  ವ್ಯಾಯಾಮ ಮಾಡಬೇಕು. ಇವತ್ತು ನಮ್ಮ ಜೀವನಶೈಲಿಯೇ ಬದಲಾಗಿದೆ. ನಮ್ಮ ದೇಹಕ್ಕೆ ಹೆಚ್ಚಿನ ಕೆಲಸ ಕೊಡುತ್ತಿಲ್ಲ.  ಪ್ರತಿದಿನ ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು.

ಇವತ್ತಿನ ಫಿಟ್‌ನೆಸ್ ಟ್ರೆಂಡ್ ಏನು? 

ಕಳೆದ ಒಂದು ದಶಕದಲ್ಲಿ ಫಿಟ್‌ನೆಸ್‌ ಬಗ್ಗೆ ಜನರ ಒಲವು ಹೆಚ್ಚುತ್ತಿದೆ. ಏರಿಯಾಗಳಿಗೊಂದರಂತೆ ಜಿಮ್‌ಗಳು ಆರಂಭವಾಗುತ್ತಿವೆ. ಯೋಗ, ಜುಂಬಾ, ಜಿಮ್‌ನಲ್ಲಿ ಬೆವರಿಳಿಸುವುದು ಹೀಗೆ ಎಲ್ಲಾ ರೀತಿಯ ವ್ಯಾಯಾಮಗಳತ್ತ ಜನ ಮೊರೆ ಹೋಗುತ್ತಿದ್ದಾರೆ.

ಕಚೇರಿ ಕೆಲಸ ಮಾಡುವವರಿಗೆ ವ್ಯಾಯಾಮದ ಸಲಹೆಗಳು

ಕಚೇರಿ ಸಮಯದಲ್ಲಿ ನಾವು ಯಾವಾಗಲೂ ಕುಳಿತೇ ಇರುತ್ತೇವೆ. ಹಾಗಾಗಿ ಕನಿಷ್ಟ 30 ನಿಮಿಷಗಳಿಗೊಮ್ಮೆ ಕುಳಿತಲ್ಲಿಂದ ಎದ್ದು ಓಡಾಡಿ. ಕಚೇರಿಯಲ್ಲಿ ಲಿಫ್ಟ್‌ ಬದಲು ಮೆಟ್ಟಿಲು ಬಳಸಿ. ದಿನಕ್ಕೆ ಕನಿಷ್ಟ ಅರ್ಧ ಗಂಟೆ ನಿಮಗಾಗಿ ಮೀಸಲಿಡಿ. ಓಡುವುದು, ನಡೆಯುವುದು‌, ಕೆಲಸಕ್ಕೆ ಹೋಗಲು ಸೈಕಲ್ ಬಳಸಲು ಪ್ರಯತ್ನಿಸಿ. ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.

ಫಿಟ್ ನೆಸ್ ನಿಮಗೆ ಯಾಕೆ‌ ಮುಖ್ಯ?

ಆರೋಗ್ಯವಾಗಿರಲು, ಚೆನ್ನಾಗಿ ಕಾಣಲು ಹಾಗೂ ಉತ್ತಮವಾಗಿರಲು ಮುಖ್ಯ ಎನ್ನುವುದು ನನ್ನ ಅನಿಸಿಕೆ.

ಫಿಟ್‌ನೆಸ್‌ಗಾಗಿ ನೀವು ಮಾಡುವ ವರ್ಕ್‌ಔಟ್‌ ಯಾವುದು?

ವೇಟ್ ಟ್ರೈನಿಂಗ್ ಅಂದ್ರೆ ನಂಗೆ ಅಚ್ಚುಮೆಚ್ಚು. ಅಪ್ಪನಿಂದ ಬಳುವಳಿಯಾಗಿ ಬಂದದ್ದು. ಹಾಗಾಗಿ ಇದು ನನಗೆ ಇಷ್ಟ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು