68 ದಿನಗಳಲ್ಲಿ ವಿಮಾನದಲ್ಲಿ ವಿಶ್ವಪರ್ಯಟನೆ

ಶುಕ್ರವಾರ, ಜೂನ್ 21, 2019
24 °C

68 ದಿನಗಳಲ್ಲಿ ವಿಮಾನದಲ್ಲಿ ವಿಶ್ವಪರ್ಯಟನೆ

Published:
Updated:
Prajavani

ಬೀಜಿಂಗ್‌: ಚೀನಾದ 57 ವರ್ಷದ ಜಾಂಗ್‌ ಬೊ ಎಂಬವರು ಎರಡನೇ ಬಾರಿ ವಿಮಾನದಲ್ಲಿ ವಿಶ್ವ ಪರ್ಯಟನೆ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಷಿಕಾಗೊ ವಿಮಾನ ನಿಲ್ದಾಣದಿಂದ ಏಪ್ರಿಲ್‌ 2 ರಂದು ಪರ್ಯಟನೆ ಆರಂಭಿಸಿದ್ದ ಜಾಂಗ್‌ ಅವರು, 68 ದಿವಸಗಳಲ್ಲಿ ಮೂರು ಭೂಖಂಡಗಳ 21 ದೇಶಗಳಲ್ಲಿ ಮತ್ತು ಮೂರು ಸಮುದ್ರಗಳ ಮೇಲೆ ಹಾರಾಟ ನಡೆಸಿದ್ದರು ಎಂದೂ ಹೇಳಿವೆ.

2016ರಲ್ಲಿ ಅವರು ವಿಮಾನದಲ್ಲಿ ಮೊದಲ ವಿಶ್ವಪರ್ಯಟನೆ ನಡೆಸಿದ್ದರು.

‘ಷಿಕಾಗೊದಿಂದ ಹಾರಾಟ ಆರಂಭಿಸಿ ಆರ್ಕ್ಟಿಕ್‌ ಮೂಲಕ ಪ್ರಯಾಣ ಬೆಳೆಸುವಾಗ ಹೆಚ್ಚು ಪ್ರಯಾಸ ಅನುಭವಿಸಬೇಕಾಯಿತು. ಈ ಪ್ರದೇಶದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವಾಗಿ ಮೈನಸ್‌ 50 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು’ ಎಂದು ಜಾಂಗ್‌ ಅನುಭವ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !