ಷೇರುಪೇಟೆ ಎಂಬುದು ಒಂದು ರೀತಿಯ ಬ್ರಾಂತುಲೋಕ. ಇಲ್ಲಿ ಸಹಜತೆಗಿಂತ ಭಾವನೆಗಳಿಗೇ ಹೆಚ್ಚಿನ ಮಹತ್ವ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತ ಕಾರಣಗಳಿಂದ ದರಗಳ ಬದಲಾವಣೆಯನ್ನು ಕಾಣುತ್ತೇವೆ. ಹಿಂದಿನವಾರ ವಿವಿಧ ದೇಶಗಳಲ್ಲಿ ಉಂಟಾದ ಭೂಕಂಪನದ ಪರಿಣಾಮ, ಚೇತರಿಕೆ ಕಾಣುತ್ತಿದ್ದ ಪೇಟೆಯನ್ನು ಕುಸಿಯುವಂತೆ ಮಾಡಿತು. ಮಂಗಳವಾರ ಪೆಟ್ರೋಲಿಯಂ ಅಂಡ್ ನ್ಯಾಚುರಲ್ ಗ್ಯಾಸ್ ನಿಯಂತ್ರಕ ಮಂಡಳಿಯು ದೆಹಲಿಯ ಇಂದ್ರಪ್ರಸ್ತ ಗ್ಯಾಸ್ ಕಂಪನಿಗೆ ಸಂಪರ್ಕ ಚಂದಾ ಹಾಗೂ `ಕಂಪ್ರೆಶನ್~ ದರವನ್ನು ಕಡಿತಗೊಳಿಸುವ ಆದೇಶವನ್ನು ತಕ್ಷಣದಿಂದ ಜಾರಿಗೊಳಿಸುವುದರ ಜೊತೆಗೆ ಕಳೆದ 4 ವರ್ಷಗಳಿಂದ ಸಂಗ್ರಹಿಸಿರುವ ಹೆಚ್ಚಿನ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಬೇಕೆಂಬ ಆದೇಶವನ್ನೂ ನೀಡಿದೆ. ಇಂತಹ ಆದೇಶದ ಕಾರಣ ಅಂದು ಇಂದ್ರಪ್ರಸ್ತ ಗ್ಯಾಸ್ ಕಂಪೆನಿಯ ಷೇರಿನ ಬೆಲೆ ರೂ. 315ರ ಗರಿಷ್ಠ ಮಟ್ಟದಿಂದ ರೂ. 170ರ ಕನಿಷ್ಠ ಮಟ್ಟಕ್ಕೆ ಕುಸಿದು ರೂ. 230ರ ಸಮೀಪಕ್ಕೆ ಬಂದಿತಲ್ಲದೆ ವಲಯದ ಇತರೆ ಕಂಪನಿಗಳಾದ ಗುಜರಾತ್ ಸ್ಟೇಟ್ ಪೆಟ್ರೋನೆಟ್, ಗುಜರಾತ್ ಗ್ಯಾಸ್, ಗ್ಯಾಸ್ ಅಥಾರಿಟಿ ಮುಂತಾದವುಗಳ ಷೇರು ಗಣನೀಯ ಕುಸಿತ ಕಂಡವು. ಇವುಗಳ ಜೊತೆಗೆ ತಾಂತ್ರಿಕ ವಲಯದ ಅಗ್ರಮಾನ್ಯ ಕಂಪನಿ ಇನ್ಫೋಸಿಸ್ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಕಾರಣಕ್ಕಾಗಿ ಮಾರಾಟದ ಒತ್ತಡವನ್ನೆದುರಿಸಿ 347 ರೂಪಾಯಿಗಳಷ್ಟು ಕುಸಿದಿದ್ದು ಸಂವೇದಿ ಸೂಚ್ಯಂಕದ ಹಾನಿಗೆ ಪ್ರಮುಖ ಕಾರಣವಾಯಿತು. ಇನ್ಫೋಸಿಸ್ ಕಂಪನಿಯ ಕುಸಿತ 201 ಪಾಯಿಂಟುಗಳಷ್ಟು ಸೂಚ್ಯಂಕವನ್ನು ಕೆಳಜಗ್ಗಿದರೆ, ಟಿಸಿಎಸ್ನ ಇಳಿಕೆ 43 ಪಾಯಿಂಟುಗಳ ಇಳಿಕೆಗೆ ಕಾರಣವಾಯಿತು.

ಒಟ್ಟಾರೆ ವಾರದಲ್ಲಿ ಸಂವೇದಿ ಸೂಚ್ಯಂಕ 391 ಪಾಯಿಂಟುಗಳ ಇಳಿಕೆಯಿಂದ ಶೇ. 2.24ರಷ್ಟು ಕುಸಿಯಿತು. ಮಧ್ಯಮ ಶ್ರೇಣಿ ಸೂಚ್ಯಂಕ 136 ಪಾಯಿಂಟ್ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 46 ಪಾಯಿಂಟುಗಳ ಇಳಿಕೆ ಕಂಡವು. ವಿದೇಶಿ ಹಣಕಾಸು ಸಂಸ್ಥೆಗಳು ರೂ. 770 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ, ಸ್ಥಳೀಯ ಹಣಕಾಸು ಸಂಸ್ಥೆಗಳು ರೂ. 440 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳೀಕರಣ ಮೌಲ್ಯ ರೂ. 62.99 ಲಕ್ಷ ಕೋಟಿಯಿಂದ ರೂ. 61.63 ಲಕ್ಷ ಕೋಟಿಗೆ ಕುಸಿದಿತ್ತು.

ಹೊಸ ಷೇರಿನ ವಿಚಾರ
ಈ ವರ್ಷದಲ್ಲಿ ಪ್ರಥಮ ಬಾರಿ ಹೊಸ ಕಂಪನಿಗಳೆರಡು ವಹಿವಾಟಿಗೆ ಬಿಡುಗಡೆಯಾಗಿ, ಹೂಡಿಕೆದಾರರ ಹಿತರಕ್ಷಣೆ ದೃಷ್ಟಿಯಿಂದ ಈ ಷೇರುಗಳನ್ನು ವಹಿವಾಟಿನಿಂದ ವಹಿವಾಟು ಗುಂಪಿಗೆ (ಟಿ. ಗುಂಪಿಗೆ) ಸೇರಿಸಿದ್ದರಿಂದ ಸಟ್ಟಾ ವ್ಯಾಪಾರಕ್ಕೆ ಅವಕಾಶವಿಲ್ಲದೆ ಅವಶ್ಯಕತೆಯನ್ನಾಧರಿಸಿದ ವಹಿವಾಟು ನಡೆದಿತ್ತು. ಈ ಕ್ರಮ ಸ್ವಾಗತಾರ್ಹ.

*ಸಾರ್ವಜನಿಕ ವಲಯದ ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಪ್ರತಿ ಷೇರಿಗೆ ರೂ. 106ರಂತೆ ವಿತರಿಸಿ ಸಣ್ಣ ಹೂಡಿಕೆದಾರರಿಗೆ ಶೇ. 5ರ ರಿಯಾಯಿತಿಯಂತೆ ಅಂದರೆ ರೂ. 100.70ರಂತೆ ವಿತರಿಸಿದ್ದು 12 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಿ ಆರಂಭದ ದಿನ ರೂ. 95.05ರಿಂದ ರೂ. 101ರವರೆಗೂ ಏರಿಳಿತ ಪ್ರದರ್ಶಿಸಿ, ರೂ. 95.50ರಲ್ಲಿ ವಾರಾಂತ್ಯ ಕಂಡಿತು.

*ಪ್ರತಿ ಷೇರಿಗೆ ರೂ. 80ರಂತೆ ಸಾರ್ವಜನಿಕ ವಿತರಣೆ ಮಾಡಿದ ಎಂ.ಟಿ.ಎಜುಕೇರ್ ಲಿ. 12ರಂದು ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ ರೂ. 86.05ರಿಂದ ರೂ. 90.35ರವರೆಗೂ ಏರಿಳಿತ ಕಂಡು, ರೂ. 94.85ರಲ್ಲಿ ವಾರಾಂತ್ಯ ಕಂಡಿತು.

ಐಡಿಎಫ್ಸಿ (3ನೇ ಮಾಲಿಕೆ) ಬಿಡುಗಡೆ
ಕಳೆದ ಮಾರ್ಚ್ನಲ್ಲಿ ಬಿಡುಗಡೆ ಮಾಡಿದ ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳ 3ನೇ ಮಾಲಿಕೆಯು 16ರಿಂದ ಎಫ್ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ. ರೂ. 5,000 ಮುಖಬೆಲೆಯ ಈ ಬಾಂಡ್ಗಳಿಗೆ ಶೇ. 8.43ರ ವಾರ್ಷಿಕ ಬಡ್ಡಿ ನೀಡಲಾಗುವುದು. ಸಂಚಿತ ರೀತಿಯಲ್ಲಿ ಒಟ್ಟಿಗೆ ಅಸಲಿನೊಂದಿಗೆ ಪಡೆಯುವುದಾದರೆ 5 ವರ್ಷಕ್ಕೆ ರೂ. 7,495ನ್ನು 10 ವರ್ಷಕ್ಕೆ ರೂ. 11,230ನ್ನು ಪಡೆಯಬಹುದಾಗಿದೆ.

ಲಾಭಾಂಶ ವಿಚಾರ
ದಿಸಾ ಇಂಡಿಯ ವಿತರಿಸಲಿರುವ, ಪ್ರತಿ ಷೇರಿಗೆ ರೂ. 200ರಂತೆ, ಲಾಭಾಂಶಕ್ಕೆ ಮೇ 3 ನಿಗದಿತ ದಿನವಾಗಿದೆ. ಪಿ.ಎಸ್.ಎಲ್. ಶೇ. 20, ಇನ್ಫೋಸಿಸ್ ಶೇ. 640 (ಮುಖಬೆಲೆ ರೂ. 5).

ಮುಂದಿನ ದಿನಗಳಲ್ಲಿ ಜಯಭಾರತ್ ಮಾರುತಿ ಮತ್ತು ಮಲ್ಟಿ ಕಮಾಡಿಟೀಸ್ ಎಕ್ಸ್ಚೇಂಜ್ಗಳು 16ರಂದು, ಆಟೊಮೊಬೈಲ್ ಕಾರ್ಪೊರೇಷನ್ ಆಫ್ ಗೋವಾ 19ರಂದು, ಬಿನಾನಿ ಇಂಡಸ್ಟ್ರೀಸ್ 21ರಂದು, ಟಾಟಾ ಸ್ಪಾಂಜ್, ಆಲ್ಸ್ತೊಂ ಪ್ರಾಜೆಕ್ಟ್ಸ್ ಮತ್ತು ರ್ಯಾಲೀಸ್ ಇಂಡಿಯ 23ರಂದು, ಪ್ರೀಮಿಯರ್, ಆಟೊಮೊಟಿವ್ ಸ್ಟಾಂಪಿಂಗ್ಸ್, ಐಎನ್ಜಿ ವೈಶ್ಯ ಬ್ಯಾಂಕ್ 24ರಂದು, ಫೊಸೆಕೊ, ಸ್ಪರಾಜ್ ಎಂಜಿನ್ಸ್, ವಿಟಿಎಂ, ಮತ್ತು ಝೆನ್ಸಾರ್ ಟೆಕ್ನಾಲಜೀಸ್ 25ರಂದು, ವೆಂಡ್ಟ್ ಇಂಡಿಯ, ಮಹೇಂದ್ರ ಕಾಂಪೊಜಿಟ್ ಮತ್ತು ಸಾಸ್ಕೆನ್ ಕಮ್ಯುನಿಕೇಷನ್ 26ರಂದು, ತಾಜ್ ಜಿವಿಕೆ ಹೋಟೆಲ್ಸ್, ಟ್ಯೂಬ್ ಇನ್ವೆಸ್ಟ್ಮೆಂಟ್ಸ್ 30ರಂದು, ಕನ್ಸಾಯಿ ನೆರೊಲ್ಯಾಕ್, ಧನುಸೆರಿ ಪೆಟ್ರೋ ಕೆಂ ಅಂಡ್ ಟೀ ಮೇ 2ರಂದು, ಲಾಭಾಂಶ ಪ್ರಕಟಿಸುವ ಕಾರ್ಯಸೂಚಿ ಹೊಂದಿವೆ.

ಮುಖಬೆಲೆ ಸೀಳಿಕೆ ವಿಚಾರ
*ಬ್ಲೇಜಾಸ್ ಮಾರ್ಬಲ್ಸ್ ಲಿ. (ಈ ಹಿಂದೆ ಶುಭಂ ಗ್ರಾನೈಟ್ಸ್ ಲಿ. ಎಂದಿತ್ತು) ಕಂಪನಿಯು ಷೇರಿನ ಮುಖಬೆಲೆಯನ್ನು ರೂ. 10ರಿಂದ ರೂ. 2ಕ್ಕೆ ಸೀಳಲಿದೆ.ಗೋಲ್ಡನ್ ಗೋಯೆಂಕ ಫಾನ್ ಕಾರ್ಪ್ ಲಿ. (ಹಿಂದಿನ ಹೆಸರು: ಗೋಲ್ಡನ್ ಸೆಕ್ಯುರಿಟೀಸ್ ಲಿ.) ಕಂಪನಿಯು ರೂ. 10ರ ಮುಖಬೆಲೆಯನ್ನು ರೂ. 5ರ ಮುಖಬೆಲೆಗೆ ಸೀಳಲಿದ್ದು, ಮೇ 4 ನಿಗದಿತ ದಿನವನ್ನಾಗಿಸಿದೆ. ವಿ.ಟಿ.ಎಂ. ಲಿ. ಕಂಪನಿ 25ರಂದು ಷೇರಿನ ಮುಖಬೆಲೆ ಸೀಳಲು ನಿರ್ಧರಿಸಲಿದೆ.

ಷೇರು ಹಿಂಕೊಳ್ಳುವಿಕೆ ವಿಚಾರ
ಇಸಿಇ ಇಂಡಸ್ಟ್ರೀಸ್ ಲಿ. ಕಂಪನಿ, ಷೇರು ವಿನಿಮಯ ಕೇಂದ್ರಗಳ ಎಲೆಕ್ಟ್ರಾನಿಕ್ ವಹಿವಾಟು ಪದ್ಧತಿ ಮೂಲಕ ಪ್ರತಿಷೇರಿಗೆ ಗರಿಷ್ಠ ರೂ. 125ರಂತೆ ಮುಂದಿನ ಮಾರ್ಚ್ 2013ರವರೆಗೂ ಅಥವಾ ಕಂಪನಿಯು 6,90,000 ಷೇರುಗಳನ್ನು ಕೊಳ್ಳುವವರೆಗೂ ತೆರೆದಿರುವಂತೆ, ಷೇರು ಹಿಂಕೊಳ್ಳಲು ನಿರ್ಧರಿಸಿದ್ದು, ಈ ಮೂಲಕ ಒಟ್ಟು ರೂ. 862.50 ಲಕ್ಷದವರೆಗೂ ಕಂಪನಿ ಹಣ ಹೂಡಬಹುದಾಗಿದೆ. ಈ ಹಿಂಕೊಳ್ಳುವ ಯೋಜನೆ 18ರಿಂದ ಆರಂಭವಾಗಲಿದೆ.

ಸೂಚ್ಯಂಕಕ್ಕೆ ಸೇರ್ಪಡೆ: ಹೊಸದಾಗಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ನ್ಯಾಷನಲ್ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಮತ್ತು ಎಂ.ಟಿ. ಎಜುಕೇರ್ ಕಂಪನಿಗಳನ್ನು ಐ.ಪಿ.ಒ. ಸೂಚ್ಯಂಕಕ್ಕೆ 16ರಿಂದ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.