ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯ ಪ್ರತಿಯೊಂದು ಬೆಳವಣಿಗೆಗಳೂ ತೀವ್ರ ಏರಿಳಿತ ಕಾಣುತ್ತಿದೆ. ಉದಾಹರಣೆಗೆ ಕಳೆದ ವಾರದ ಘಟನಾವಳಿಗಳನ್ನು ಗಮನಿಸಬಹುದು.

ಬುಧವಾರದಂದು ಉಚ್ಚ ನ್ಯಾಯಾಲಯವು ಫೈನಾನ್ಶಿಯಲ್ ಟೆಕ್ನಾಲಜೀಸ್ ಪರವಾಗಿ ತೀರ್ಪು ನೀಡಿದ್ದು ಆ ಷೇರಿನ ಬೆಲೆಯನ್ನು ಕ್ಷಣ ಮಾತ್ರದಲ್ಲಿ ರೂ. 796 ರಿಂದ ರೂ. 830ರ ಸಮೀಪಕ್ಕೆ ಜಿಗಿಯಿತು. ಆದರೆ ಸ್ಥಿರತೆ ಕಾಣದೆ ಮತ್ತೆ ಕುಸಿಯಿತು.

ರೈಲ್ವೆ ಬಜೆಟ್ ಮಂಡನೆಯಾದ ಮೇಲೂ ಸೂಚ್ಯಂಕದ ಏರಿಕೆಯು ಸ್ಥಿರತೆ ಕಾಣದಾಯಿತು. ಅಂದು ಹಣದುಬ್ಬರದ ಏರಿಕೆಯು ಪ್ರಕಟವಾದ ಮೇಲೆ ಸೂಚ್ಯಂಕಗಳು ಮಾರಾಟದ ಒತ್ತಡಹೇರಿದವು. ಗುರುವಾರದಂದು ಸಹ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿಯನ್ನು ಪ್ರಕಟಿಸುವ ಮುನ್ನ ಪೂರ್ಣ ತಟಸ್ಥವಾಗಿದ್ದ ಸಂವೇದಿ ಸೂಚ್ಯಂಕವು 243 ಅಂಶಗಳಷ್ಟು ಭಾರಿ ಇಳಿಕೆ ಕಂಡಿತು.

ಶುಕ್ರವಾರವೂ ಸಹ ಲೋಕಸಭೆಯಲ್ಲಿ ಬಜೆಟ್ ಮಂಡಣೆ ಆರಂಭವಾದ ಮೇಲೆ ಹಾಗೂ ಅಂತ್ಯದ ಸಮಯದವರೆಗೂ ಏರಿಕೆಯಲ್ಲಿದ ಸಂವೇದಿ ಸೂಚ್ಯಂಕವು ಮಧ್ಯಾಹ್ನ ಸುಮಾರು 2 ಗಂಟೆಯಿಂದ ಏಕಮುಖವಾಗಿ ಇಳಿದು ಅಂತಿಮವಾಗಿ 17,466ರಲ್ಲಿ ಅಂತ್ಯಗೊಂಡಿತು. ಸುಮಾರು 400 ಅಂಶಗಳ ಅಂತರದಲ್ಲಿ ಹಲವಾರು ಏರಿಳಿತ ಪ್ರದರ್ಶಿಸಿತು.

ವಾರದ ಮೊದಲ ಮೂರು ದಿನ ಏರಿಕೆಯ ಪಥದಲ್ಲಿದ್ದ ಸಂವೇದಿ ಸೂಚ್ಯಂಕವು ನಂತರದ ಎರಡು ದಿನಗಳು ಹೆಚ್ಚಿನ ಇಳಿಕೆ ಪ್ರದರ್ಶಿಸಿತು. ಆದರೆ ವಾರದುದ್ದಕ್ಕೂ ವಿದೇಶಿ ವಿತ್ತೀಯ ಸಂಸ್ಥೆಗಳು ಗಣನೀಯ ಪ್ರಮಾಣದ ಖರೀದಿ ಮಾಡಿ ಪೇಟೆಯನ್ನು ಬೆಂಬಲಿಸಿದವು. ಸೋಮವಾರದಂದು ರೂ.1,298 ಕೋಟಿ ನಿವ್ವಳ ಹೂಡಿಕೆ ಗಮನಾರ್ಹವಾದುದಾಗಿದೆ.

ಸ್ವದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆ ಮಿಶ್ರಿತವಾದರೂ ಮಾರಾಟದ ಪಥದಲ್ಲಿ ಸಾಗಿದ್ದವು ಪೇಟೆಯ ಬಂಡವಾಳ ಮೌಲ್ಯವು ರೂ.62.78 ಲಕ್ಷ ಕೋಟಿಯಿಂದ ರೂ.62.42 ಲಕ್ಷ ಕೋಟಿಗೆ ಇಳಿದಿದೆ.

ಬೋನಸ್ ಷೇರಿನ ವಿಚಾರ
*ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ಸ್ ಲಿ. ಕಂಪೆನಿಯು ವಿತರಿಸಲಿರುವ 1:2ರ ಅನುಪಾತದ ಬೋನಸ್ಗೆ ಮಾರ್ಚ್ 27 ನಿಗದಿತ ದಿನವಾಗಿದೆ.

* ಟಿ. ವಿಭಾಗದ ಬನಾಸ್ ಫೈನಾ ನ್ಸ್ ಲಿ. ಕಂಪೆನಿಯು 21 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಲಾಭಾಂಶ ವಿಚಾರ
ಕೋಲ್ ಇಂಡಿಯಾ ಶೇ 95 ರಷ್ಟು ಲಾಭಾಂಶ ಪ್ರಕಟಿಸಿ 17ನೇ ಮಾರ್ಚ್ ನಿಗದಿತ ದಿನವಾಗಿಸಿತು. ಈಗ ಲಾಭಾಂಶ ರಹಿತ ವಹಿವಾಟು ಆರಂಭವಾಗಿದೆ. ಬೆಸ್ಟ್ ಈಸ್ಟರ್ನ್ ಹೋಟೆಲ್ಸ್ ಶೇ 15 (ಮು.ಬೆ. ರೂ.2) ಸಹ 19ನೇ ಮಾರ್ಚ್ ನಿಗದಿತ ದಿನವಾಗಿದೆ.

ಟಿವಿಎಸ್ ಮೋಟಾರ್ಸ್ ಶೇ 60 (ಮು.ಬೆ.ರೂ.1), ಒ.ಎನ್.ಜಿ.ಸಿ. ಶೇ 30 (ಮು.ಬೆ. ರೂ.5), ಶಾಸೂನ್ ಫಾರ್ಮ ಶೇ 100 (ಮು.ಬೆ. ರೂ. 2), ವೀಲ್ಸ್ ಇಂಡಿಯಾ ಶೇ 40.
ಮುಂದಿನ ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಲಾಭಾಂಶ ಪ್ರಕಟಿಸಲಿದೆ.

ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಹಾಗೂ ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ಗಳು ಮಂಗಳವಾರ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪೆನಿಗಳ ಷೇರುಗಳಲ್ಲಿ ವಹಿವಾಟಿಗೆ ಪ್ರತ್ಯೇಕ ಎಸ್.ಎಂ.ಇ. ಎಕ್ಸ್ಚೇಂಜ್ ವೇದಿಕೆಯನ್ನು ಆರಂಭಿಸಿದವು. ಈ ಕಾರಣದಿಂದಾಗಿ ಈ ವಲಯದ ಕಂಪೆನಿಗಳ ಆರ್ಥಿಕ ಸಂಪನ್ಮೂಲದ ಅಗತ್ಯತೆಗಳನ್ನು ಪೂರೈಸಿಕೊಂಡು ಉತ್ತಮ ಬೆಳವಣಿಗೆಗೆ ಸಹಾಯವಾದಂತಾಗಿದೆ.

ಭಾರತದಲ್ಲಿ ಸುಮಾರು 30 ಲಕ್ಷ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿದ್ದು ಈ ವಲಯಕ್ಕೆ ಸುಮಾರು ರೂ. 2.5ಲಕ್ಷ ಕೋಟಿ ಈಕ್ವಿಟಿ ಬಂಡವಾಳ ಹಾಗೂ ರೂ.4.7 ಲಕ್ಷ ಕೋಟಿ ಸಾಲದ ಅಗತ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ವಲಯದಲ್ಲಿ ಹೂಡಿಕೆ ಅಥವಾ ವಹಿವಾಟು ನಡೆಸಲು ಕನಿಷ್ಠ ಒಂದು ಲಕ್ಷ ರೂಪಾಯಿಯ ಗುಚ್ಚದಲ್ಲಿರುವುದರಿಂದ ಸಣ್ಣ ಹೂಡಿಕೆದಾರರು ಈ ವಲಯದ ಚಟುವಟಿಕೆಯಿಂದ ವಂಚಿತರಾಗುತ್ತಾರೆ. ಆರಂಭದ ಚಟುವಟಿಕೆಯಲ್ಲಿ ಮುಂಬೈನ ಬಿ.ಸಿ.ಬಿ. ಫೈನಾನ್ಸ್ ವಹಿವಾಟಿಗೆ ನೋಂದಾಯಿಸಿಕೊಂಡಿದೆ.

ಹೊಸ ಷೇರಿನ ವಿಚಾರ
*ಮಂಗಳವಾರದಿಂದ ಆರಂಭವಾದ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಚಟುವಟಿಕೆ ವೇದಿಕೆಯಲ್ಲಿ ಅಂದೇ ಮುಂಬೈ ಮೂಲದ ಬಿಸಿಬಿ ಫೈನಾನ್ಸ್ ಲಿಮಿಟೆಡ್ ಕಂಪೆನಿ ವಹಿವಾಟು ಆರಂಭವಾಗಿದ್ದು ಈ ಸಮೂಹದ ಕಂಪೆನಿಗಳನ್ನು ಎಂ.ಟಿ. ಗುಂಪಿಗೆ ಸೇರಿಸಲಾಗಿದೆ. ಆರಂಭದಲ್ಲಿ ನಿಗದಿಯಾಗಿದ್ದು 26ರವರೆಗೂ ಇದು ಮುಂದುವರೆಯಲಿದೆ.

*ಅಹಮದಾಬಾದ್, ದೆಹಲಿ ಮತ್ತು ಜಯಪುರ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಅಲೈಯನ್ಸ್ ಇಂಟಿಗ್ರೇಟೆಡ್ ಮೆಟಾಲಿ ಕ್ಸ್ ಲಿ. ಕಂಪೆನಿಯು 14 ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿದೆ. ಪ್ರೀತಿ ಮರ್ಕಂಟೈಲ್ ಕಂಪೆನಿ ಲಿ. ಉತ್ತರಪ್ರದೇಶದ ಮೂಲ ಹೊಂದಿದ್ದು 12 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿದೆ.

*ಶೇನೆಡರ್ ಎಲೆಕ್ಟ್ರಿಕ್ ಇನ್ಫ್ರಾಸ್ಟ್ರಕ್ಚರ್ ಲಿ. ಕಂಪೆನಿಯು ಅರೇವಾ ಟಿ ಅಂಡ್ ಡಿ ಇಂಡಿಯಾ ಲಿ.ನ ಟ್ರಾನ್ಸ್ಮಿಷನ್ ಮತ್ತು ಡಿಸ್ಟ್ರಿಬ್ಯೂಷನ್ ವ್ಯವಹಾರವನ್ನು ಬೇರ್ಪಡಿಸಿ ರಚಿಸಲಾಗಿದ್ದು 20 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.

ಹಕ್ಕಿನ ಷೇರು ವಿತರಣೆ ವಿಚಾರ
ನ್ಯೂಲ್ಯಾಂಡ್ ಲ್ಯಾಬೊರಟರೀಸ್ ಕಂಪೆನಿ ವಿತರಿಸಲಿರುವ 5:12ರ ಅನುಪಾತದ ರೂ. 45 ರಂತೆ ಪ್ರತಿ ಷೇರಿಗೆ, ಹಕ್ಕಿನ ಷೇರಿಗೆ 23 ನಿಗದಿತ ದಿನ.

ಅಮಾನತು ತೆರವು
*ಮೇ 1999ರಿಂದ ವಿಧಿಸಿದ್ದ ಅಮಾನತನ್ನು ತೆರವುಗೊಳಿಸಿಕೊಂಡು ಶಾಮಕಮಲ್ ಇನ್ವೆಸ್ಟ್ಮೆಂಟ್ಸ್ ಲಿ. 20 ರಿಂದ ಟಿ ಗುಂಪಿನಲ್ಲಿ ವಹಿವಾಟಾಗಲಿದೆ.

ವಾರದ ವಿಶೇಷ
ಶುಕ್ರವಾರದಂದು ವಿತ್ತ ಸಚಿವರು ಮಂಡಿಸಿದ ಬಜೆಟ್ ಬಗ್ಗೆ ವೈವಿದ್ಯಮಯ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಸಂದರ್ಭ ಮತ್ತು ಒತ್ತಡಗಳಿಗೆ ಮಣಿದು ಸಮತೋಲನೆ ಮೂಡಿಸುವ ರೀತಿ ಬೆಸುಗೆ ಹಾಕಲಾಗಿದೆ ಎನ್ನಬಹುದು.

ಬಜೆಟ್ನಲ್ಲಿ ಪ್ರಕಟಿಸಿದ ಅಂಶಗಳು ಮುಂದಿನ ವರ್ಷದವರೆಗೂ ಬದಲಾಗುವುದಿಲ್ಲವೆಂಬ ಪರಿಸ್ಥಿತಿಯಿಂದ ಬಹುದೂರ ಸರಿದಿದ್ದೇವೆ. ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಬಾರಿ `ರೆಪೊ~ ದರ ಮತ್ತು `ರಿವರ್ಸ್~ ರೆಪೊ ದರ ಬದಲಾವಣೆಯನ್ನು ನಾವು ಹಿಂದಿನ ವರ್ಷ ಕಂಡಿದ್ದೇವೆ.

ಹಲವಾರು ಬಾರಿ ಪೆಟ್ರೋಲ್ ದರದ ಬದಲಾವಣೆಯನ್ನು ಕಂಡಿದ್ದೇವೆ. ಯಾವುದೂ ಸ್ಥಿರವಲ್ಲ. ಸಂದರ್ಭಕ್ಕೆ ಅಗತ್ಯಗಳಿಗೆ ತಕ್ಕಂತೆ ಬದಲಾಗುತ್ತಿವೆ ಹಾಗಾಗಿ ಈಗ ಪರಿಗಣಿಸದೆ ಇರುವುದು ಮುಂದೆ ಪರಿಶೀಲಿಸಲು ಸಾಧ್ಯವಿದೆ. ಬಂಡವಾಳ ಪೇಟೆಯ ದೃಷ್ಟಿಯಿಂದ ಸೇವಾ ತೆರಿಗೆ ಹೆಚ್ಚಿಸಿ, ಸೆಕ್ಯುರಿಟೀಸ್ ವಹಿವಾಟು ತೆರಿಗೆ ಇಳಿಸಿ ಸಮತೋಲನೆ ಮೂಡಿಸಲಾಗಿದೆ.

ಷೇರು ವಿಕ್ರಯದ ಗುರಿಯನ್ನು ರೂ.30 ಸಾವಿರ ಕೋಟಿಗೆ ಇಳಿಸಲಾಗಿದೆ. ಹತ್ತು ಕೋಟಿ ರೂಪಾಯಿಯವರೆಗಿನ ಆರಂಭಿಕ ಷೇರು ವಿತರಣೆಯನ್ನು ಕಡ್ಡಾಯವಾಗಿ ಡಿಮ್ಯಾಟ್ ರೂಪದಲ್ಲಿರಬೇಕೆಂದು ಘೋಷಿಸಲಾಗಿದೆ. ಮೈಕ್ರೋ ಫೈನಾನ್ಸ್ ಬಿಲ್ ಮಂಡಿಸಲಾಗುವುದೆಂದು ತಿಳಿಸಲಾಗಿದೆ.

ರಾಜೀವ್ಗಾಂಧಿ ಈಕ್ವಿಟಿ ಯೋಜನೆಯನ್ನು ರೂ. 10 ಲಕ್ಷ ರೂಪಾಯಿ ಆದಾಯದೊಳಗಿರುವ ಸಮೂಹಕ್ಕೆ ರೂಪಿಸಲಾಗಿದೆ. ಸ್ಥಳೀಯ ಬೇಡಿಕೆಯ ಕಾರಣ ಬೆಳವಣಿಗೆ ಅಭಾದಿತವೆಂಬ ಅಂಶ ಗಮನಾರ್ಹ.

ಜಾಗತಿಕ ಮಟ್ಟದಲ್ಲಿ ಎಲ್ಲರೂ ಭಾರತದತ್ತ ಗಮನಹರಿಸಿರುವುದು ಇಲ್ಲಿನ ಅಪಾರ ಗ್ರಾಹಕ ಸಂಪತ್ತು ಮುಖ್ಯ ಕಾರಣ. ಶೇ 17 ರಷ್ಟರ ವಿಶ್ವದ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಶೇ 70 ರಷ್ಟು ಭಾಗ ಯುವಜನರಿಂದ ಕೂಡಿದ್ದು ಕೊಳ್ಳುವ ಹವ್ಯಾಸ ಹೆಚ್ಚಾಗಿದೆ ಎಂಬುದಾಗಿದೆ.

ಇಂತಹ ಸಕಾರಾತ್ಮಕ ಅಂಶವನ್ನು ಗಮನಿಸಿ ಷೇರುಪೇಟೆಯತ್ತ ಇಂತಹ ಸಮೂಹವನ್ನು ಸೆಳೆಯಬೇಕಾಗಿದೆ. ಈಗಿನ ವಾತಾವರಣದಲ್ಲಿ ಹೆಚ್ಚಿನವರು ಸ್ಥಿರ ಆದಾಯದ ಯೋಜನೆಗಳನ್ನು ಹುಡುಕುತ್ತಾರೆ ಕಾರಣ, ಕಳೆದ ವರ್ಷಗಳಲ್ಲಿ ಷೇರುಪೇಟೆ ಆಧಾರಿತ ಹೂಡಿಕೆಗಳಲ್ಲಿ ಹಣವನ್ನು ಕಳೆದುಕೊಂಡವರೇ ಹೆಚ್ಚು.

ಮ್ಯೂಚುವಲ್ ಫಂಡ್ ಮತ್ತು ವಿಮಾ ಕ್ಷೇತ್ರದ ಈಕ್ವಿಟಿ ಯೋಜನೆಗಳು ಸಹ ಹೂಡಿಕೆದಾರರ ಮೂಲ ಹಣವನ್ನು ರಕ್ಷಿಸದಾಗಿದೆ. ಭಾರತದ ಪ್ರತಿಷ್ಠಿತ ಬಿಎಸ್ಇಯ ಬಂಡವಾಳ ಮೌಲ್ಯವು ಸುಮಾರು 62 ಲಕ್ಷ ಕೋಟಿಯಲ್ಲಿದ್ದು ಪ್ರತಿದಿನದ ಚಟುವಟಿಕೆ ಕೇವಲ ರೂ. 2 ರಿಂದ ರೂ.3 ಸಾವಿರ ಕೋಟಿ ರೂಪಾಯಿ ಮಾತ್ರ.

ಒಂದು ಲಕ್ಷ ಕೋಟಿ ರೂಪಾಯಿ ವ್ಯವಹಾರವೆಂದು ಮಾಧ್ಯಮದಲ್ಲಿ ಬರುವುದು ಸಹಜ ವಹಿವಾಟಲ್ಲ. ಅದರಲ್ಲಿ ಸಟ್ಟಾ ಪೇಟೆ ಎನ್ನಬಹುದಾದ ಮೂಲಾಧಾರಿತ ಪೇಟೆಯ ಚಟುವಟಿಕೆಯನ್ನು ಸೇರಿಸಿರುತ್ತಾರೆ.

ಮೂಲತಃ ಷೇರುಪೇಟೆಯಲ್ಲಿನ ಅಪಾಯವನ್ನರಿತು, ಹೂಡಿಕೆಗೆ ಸುಭದ್ರ ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅವಧಿಗೆ ಅಂಟಿಕೊಳ್ಳದೆ ಅವಕಾಶದ ಉಪಯೋಗ ಪಡಿಸಿಕೊಳ್ಳಬೇಕು. ಅಲ್ಪಾವಧಿ ಬಂಡವಾಳ ತೆರಿಗೆ ಬಂದ ಲಾಭದ ಮೇಲೆ ಶೇ 15 ರಷ್ಟು ಮಾತ್ರ, ಎಲ್ಲಾ ಕಾಂಟ್ರಾಕ್ಟ್ ನೋಟ್ಗಳನ್ನು ಸುರಕ್ಷಿತವಾಗಿಟ್ಟುಕೊಂಡು ಲೆಕ್ಕವಿಡಿರಿ.

ಲಾಭ ಬಂದರೆ ಮಾತ್ರ ಮಾರಾಟ ಮಾಡಿ ಇಲ್ಲವಾದರೆ ಹೂಡಿಕೆ ಮುಂದುವರೆಸುವಂತಹ ಗುಣಮಟ್ಟದ ಕಂಪೆನಿ ಆಯ್ಕೆ ಮಾಡಿಕೊಳ್ಳಬೇಕು. ಹೂಡಿಕೆದಾರರಿಗೆ ಉತ್ತಮ ಲಾಭಾಂಶ, ಬೋನಸ್ ಮುಂತಾದ ಕಾರ್ಪೊರೇಟ್ ಫಲಗಳ ಅಂಶವೂ ಪರಿಗಣಿಸಿರಬೇಕು.

ಟಾರ್ಗೆಟ್ ಆಧಾರಿತ ಚಟುವಟಿಕೆ ಹೂಡಿಕೆಯು ಅಂತರ್ಗತ ಮೌಲ್ಯಗಳನ್ನು ಪರಿಗಣಿಸದೆ ಕೇವಲ ಪೇಟೆಯ ಏರಿಳಿತದ ದರಗಳನ್ನಾಧರಿಸುತ್ತದೆ.

ನೆನಪಿಡಿ: ಹೂಡಿಕೆ ಕೇವಲ ಬಂಡವಾಳ ಅಭಿವೃದ್ಧಿ ಮಾತ್ರವಲ್ಲ, ಬಂಡವಾಳವನ್ನು ಸುರಕ್ಷಿತಗೊಳಿಸಿ ಅಭಿವೃದ್ಧಿಪಡಿಸುವುದೂ ಅತ್ಯವಶ್ಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.