ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ

Last Updated 12 ನವೆಂಬರ್ 2019, 19:31 IST
ಅಕ್ಷರ ಗಾತ್ರ

* ನನ್ನ ವಾರ್ಷಿಕ ಸಂಬಳ 6,53,562. ಸೆಕ್ಷನ್ 80C ಆಧಾರದ ಮೇಲೆ ಗರಿಷ್ಠ₹ 1.50 ಲಕ್ಷ ಎನ್‌.ಪಿ.ಎಸ್. ಮೇಲೆ₹ 87,204 ವಾರ್ಷಿಕವಾಗಿ ಕಟ್ಟುತ್ತೇನೆ. ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ.

-ಅಭಿಲಾಷ, ಪಾಂಡವಪುರ

ಉತ್ತರ: ತಾ. 1–4–2019 ರಿಂದ ನಿಮ್ಮ ಒಟ್ಟು ವಾರ್ಷಿಕ ಆದಾಯ ಸೆಕ್ಷನ್ 80C (ಗರಿಷ್ಠ₹ 1.50 ಲಕ್ಷ) ಸೆಕ್ಷನ್ 80CCB (1B), ಎನ್.ಪಿ.ಎಸ್. (ಗರಿಷ್ಠ₹ 50,000) ಸೆಕ್ಷನ್ 16 ಆಧಾರದ ಮೇಲೆ (ಗರಿಷ್ಠ₹ 50,000) ಹೀಗೆ ಒಟ್ಟಿನಲ್ಲಿ₹ 2.50 ಲಕ್ಷ ಕಳೆದ ನಂತರ,₹ 5 ಲಕ್ಷದ ಒಳಗಿರುವಲ್ಲಿ ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಇಂತಹ ವಿನಾಯಿತಿ ಪಡೆದ ನಂತರವೂ ನೀವು₹ 5 ಲಕ್ಷ ಮಿತಿ ದಾಟಿದಲ್ಲಿ₹ 2.50 ಲಕ್ಷ ಮಿತಿಯಿಂದಲೇ ತೆರಿಗೆ ಕೊಡಬೇಕಾಗುತ್ತದೆ. ತೆರಿಗೆ ಉಳಿಸಲು ಗೃಹಸಾಲ ಹಾಗೂ ಆರೋಗ್ಯ ವಿಮೆ ಮಾಡಿರಿ.

ನಾನು ನಿವೃತ್ತ ನೌಕರ, ವಯಸ್ಸು 87. ನನ್ನ ಮಾಸಿಕ ಪಿಂಚಣಿ 46,644. ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕ ಠೇವಣಿಯಲ್ಲಿ₹ 14 ಲಕ್ಷ ಇರಿಸಿದ್ದೇನೆ. ಬ್ಯಾಂಕ್ ಠೇವಣಿಯಿಂದ₹ 30,000 ಬಡ್ಡಿ ಬರುತ್ತದೆ. ಔಷಧದ ಖರ್ಚು₹ 2,000. ನನಗೆ ತೆರಿಗೆ ಬರುತ್ತದೆಯೇ?

-ಹೆಸರು ಬೇಡ, ಮೈಸೂರು

ಉತ್ತರ: ನಿಮ್ಮ ಪಿಂಚಣಿ ಹಾಗೂ ಬಡ್ಡಿ ವಾರ್ಷಿಕ ಆದಾಯ₹ 5,89,728. ಇದರಲ್ಲಿ ಸೆಕ್ಷನ್ 16 ಆಧಾರದ ಮೇಲೆ₹ 50,000 ಸ್ಟ್ಯಾಂಡರ್ಡ್ ಡಿಡಕ್ಷನ್, ಸೆಕ್ಷನ್ 80 TTB ಆದಾರದ ಮೇಲೆ ನೀವು ಸದ್ಯ ಪಡೆಯುವ ಬ್ಯಾಂಕ್ ಠೇವಣಿ ಬಡ್ಡಿ₹ 30,000 ಕಳೆದು ಉಳಿದ ಮೊತ್ತಕ್ಕೆ ಶೇ 20 ತೆರಿಗೆ ಸಲ್ಲಿಸಬೇಕಾಗುತ್ತದೆ. ತೆರಿಗೆ ಉಳಿಸಲು₹ 25,000, 5 ವರ್ಷದ ಬ್ಯಾಂಕ್ ಠೇವಣಿ ಮಾಡಿರಿ. ನಿಮಗೆ ತೆರಿಗೆ ಬರುವುದಿಲ್ಲ. ಆದರೆ I.T. Return ತುಂಬ ಬೇಕಾಗುತ್ತದೆ.

ನನ್ನ ವಯಸ್ಸು 53. ಯಾವುದೇ ಸೌಲಭ್ಯ ಇರದ ಒಂದು ಸಣ್ಣ ಕಂಪನಿಯಲ್ಲಿದ್ದೇನೆ. 23 ಹಾಗೂ 13 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನ್ನ ಹೆಂಡತಿ ಹೆಸರಿನಲ್ಲಿ 1997ರಲ್ಲಿ ಕೊಂಡ ಒಂದು ನಿವೇಶನ ಇದೆ. ಇದರ ಇಂದಿನ ಮಾರುಕಟ್ಟೆ ಬೆಲೆ₹ 55 ಲಕ್ಷ. ಇದನ್ನು ಮಾರಾಟ ಮಾಡಿದರೆ ಮತ್ತೆ ಮನೆ ಅಥವಾ ನಿವೇಶನಕ್ಕೆ ಉಪಯೋಗಿಸಬೇಕೆಂಬ ನಿಯಮ ಇದೆಯಾ? ನನಗೆ ತೆರಿಗೆ ಉಳಿಸಿ ಪ್ರತೀ ತಿಂಗಳು ವರಮಾನ ಬರಲು ಮಾರ್ಗದರ್ಶನ ಮಾಡಿರಿ.

-ಗಣೇಶ, ಬೆಂಗಳೂರು

ಉತ್ತರ: ಹಣದ ಅವಶ್ಯವಿರದ ತನಕ ನಿವೇಶನ ಮಾರಾಟ ಮಾಡಬೇಡಿ. ಒಂದು ವೇಳೆ ಮಾರಾಟ ಮಾಡಿದರೆ ಬರುವ ಹಣದಲ್ಲಿ ನೀವು ಕೊಂಡುಕೊಳ್ಳುವಾಗ ಕೊಟ್ಟ ಮೊತ್ತ ಹಾಗೂ Cost Of Inflation Index ನಿಂದ ಬರುವ ಮೊತ್ತ ಸೇರಿಸಿ ಈ ಮೊತ್ತ ಕಳೆದು ಉಳಿದ ಹಣಕ್ಕೆ Capiatl Gain Tax ಕೊಡಬೇಕಾಗುತ್ತದೆ.

ನೀವು ತಿಳಿಸಿದಂತೆ, ನಿವೇಶನ–ಮನೆಕೊಂಡರೆ ತೆರಿಗೆ ಬರುವುದಿಲ್ಲ. ಇಲ್ಲಿ ತಿಳಿಸಿದಂತೆ ಕೊಂಡು ಕೊಳ್ಳುವಾಗ ಕೊಟ್ಟ ಹಣ C.I.I. ಮೊತ್ತ ನಿಮ್ಮೊಡನೆ ಇರಿಸಿಕೊಂಡು ಉಳಿದ ಹಣ, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಅಥವಾ ರೂರಲ್ ಎಲೆಕ್ಟ್ರಿಫಿಕೇಷನ್ ಬಾಂಡ್‌ನಲ್ಲಿ 5 ವರ್ಷಗಳ ಅವಧಿಗೆ ಇರಿಸಿದರೂ ತೆರಿಗೆ ಬರುವುದಿಲ್ಲ. ಇಲ್ಲಿ ವಾರ್ಷಿಕವಾಗಿ ಬಡ್ಡಿ ಬರುತ್ತದೆ ಹಾಗೂ ಬಡ್ಡಿ ದರ ಶೇ 5.75. 5 ವರ್ಷ ಮುಗಿದ ನಂತರ ನೀವು ಈ ಹಣದಿಂದ ಏನು ಬೇಕಾದರೂ ಮಾಡಬಹುದು. ಆಗ Capital Gain ಅಥವಾ ಇನ್ನಿತರ ತೆರಿಗೆ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT