ಕಳೆದ ವರ್ಷದಲ್ಲಿ ಬಿಸಿಸಿಐ ಆದಾಯದಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದೆ. ಐಸಿಸಿಯ ಆದಾಯಕ್ಕಿಂತಲೂ ಶೇ 38ರಷ್ಟು ಹೆಚ್ಚು ಬಿಸಿಸಿಐ ಗಳಿಕೆಯಿದೆ. ಮುಂಬರುವ ಐದು ವರ್ಷಗಳಲ್ಲಿ ನಡೆಯುವ ದ್ವಿಪಕ್ಷೀಯ ಸರಣಿಗಳ ಮಾಧ್ಯಮ ಹಕ್ಕುಗಳನ್ನು ಈಚೆಗೆ ಬಿಡ್ ಮಾಡಲಾಗಿದೆ. ಅದರಲ್ಲಿ ಪಂದ್ಯವೊಂದಕ್ಕೆ ಅಂದಾಜು ₹ 67 ಕೋಟಿಯನ್ನು ನಿರೀಕ್ಷಿಸಲಾಗಿದೆ. ಇದಕ್ಕೆ ಸದಸ್ಯರು ಸಂತಸ ವ್ಯಕ್ತಪಡಿಸಿದರು.