ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಮಾರಿಕಾಂಬಾ ದೇವಿ ಜಾತ್ರೆಗೆ ಭಕ್ತರ ದಂಡು

Last Updated 28 ಫೆಬ್ರುವರಿ 2018, 3:20 IST
ಅಕ್ಷರ ಗಾತ್ರ

ಶಿರಸಿ: ಸೂರ್ಯ ರಶ್ಮಿ ಭುವಿಗೆ ಸ್ಪರ್ಶಿಸುವ ಮುನ್ನವೇ ಮಾರಿಕಾಂಬಾ ದೇವಾಲಯದ ಎದುರು ಅಸಂಖ್ಯ ಭಕ್ತರು ಸೇರಿದ್ದಾರೆ. ಮಾರಿಕಾಂಬೆಗೆ ಜೈ ಎನ್ನುತ್ತ ಭಾವಪರವಶರಾಗಿದ್ದಾರೆ. ಕೆಂಪು ವಸ್ತ್ರಧಾರಿಗಳು ಕೈಯಲ್ಲಿ ಅಡಿಕೆ ಸಿಂಗಾರ ಹಿಡಿದು ಭಕ್ತಿ ಉನ್ಮಾದದ ಹರಕೆ ತೀರಿಸುತ್ತಿದ್ದಾರೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ರಾಜ್ಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ದೃಶ್ಯವಿದು.

ದೇವಾಲಯದ ಎದುರಿನ‌ ರಥದಲ್ಲಿ ದೇವಿ ಆಸೀನಳಾಗಿದ್ದಾಳೆ.‌ ಭಕ್ತರ ಜಯಘೋಷ ಮುಗಿಲು ಮುಟ್ಟಿದೆ.

ದೇವಾಲಯದ ಕಟ್ಟೆ, ಮನೆಗಳು, ಅಂಗಡಿಗಳ ಮೇಲೆ ಎಲ್ಲೆಂದರಲ್ಲಿ ಜನರು ನಿಂತು ದೇವಿಯ ಶೋಭಾಯಾತ್ರೆ ಆರಂಭವಾಗುವುದನ್ನು ಕಾತರದಿಂದ ಕಾಯುತ್ತಿದ್ದಾರೆ.

ಬಾಳೆ ಹಣ್ಣು, ನಾಣ್ಯ, ಹಾರುಕೋಳಿಗಳನ್ನು ರಥದೆಡೆಗೆ ಎಸೆದು ದೇವಿಗೆ ನಮಸ್ಕರಿಸುತ್ತಿದ್ದಾರೆ. ಲಂಬಾಣಿ ಮಹಿಳೆಯರು ಗುಂಪುಗುಂಪಾಗಿ ನಿಂತು ಹೇಳುತ್ತಿರುವ ಸೋಬಾನೆ ಪದ ಮಾರ್ದನಿಸುತ್ತಿದೆ.

ದೇವಾಲಯದಿಂದ ಜಾತ್ರಾ ಗದ್ದುಗೆ ಇರುವ ಬಿಡಕಿಬೈಲಿನವರೆಗೆ ಶೋಭಾಯಾತ್ರೆ ನಡೆಯತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT