‘ಇಂಡಿಯಾ’ ಮೈತ್ರಿಕೂಟ ಹಾಗೂ ಇತರ ಕೆಲವು ರಾಜಕೀಯ ಪಕ್ಷಗಳ ಪ್ರಮುಖರು ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್ಐಆರ್) ಬಹಳ ಗಟ್ಟಿ ದನಿಯಲ್ಲಿ ವಿರೋಧಿಸಿದರು. ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೆಲವು ನಿರ್ಬಂಧಗಳನ್ನು ವಿಧಿಸಿ ಎಸ್ಐಆರ್ ಮುಂದುವರಿಸಲು ಕೋರ್ಟ್, ಚುನಾವಣಾ ಆಯೋಗಕ್ಕೆ ಅವಕಾಶ ಮಾಡಿಕೊಟ್ಟಿತು.

ದೇಶದ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸುವ, ಅದನ್ನು ಸರಿಪಡಿಸುವ ಹೊಣೆಯನ್ನು ಸಂವಿಧಾನವು ಚುನಾವಣಾ ಆಯೋಗಕ್ಕೆ ನೀಡಿದೆ. ಈ ಕೆಲಸವು ಬಹಳ ಸುದೀರ್ಘ ಅವಧಿಗೆ ನಡೆಯುತ್ತದೆಯಾದ ಕಾರಣ, ಇದನ್ನು ಹೇಗೆ ಕಾಲಕಾಲಕ್ಕೆ ಮಾಡಬೇಕೋ ಆ ರೀತಿಯಲ್ಲಿ ಮಾಡುತ್ತಿಲ್ಲ. ಬಿಹಾರದಲ್ಲಿ ಆಗಿರುವಂತೆ, ಕೆಲವು ಸಂದರ್ಭಗಳಲ್ಲಿ ಈ ಕೆಲಸವನ್ನು ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ನಂತರ ನಡೆಸಲಾಗುತ್ತಿದೆ. ಆದರೆ, ಮೃತಪಟ್ಟವರು, ಮನೆ ತೊರೆದು ಬೇರೆಡೆ ಹೋದವರು ಅಥವಾ ಮತದಾರರ ಪಟ್ಟಿಗೆ ಅಕ್ರಮವಾಗಿ ಪ್ರವೇಶ ಪಡೆದವರ ಹೆಸರನ್ನು ತೆಗೆಯಲು ಈ ಪ್ರಕ್ರಿಯೆಯನ್ನು ನಡೆಸಲೇಬೇಕು. ಪ್ರಜಾತಾಂತ್ರಿಕ ಪ್ರಕ್ರಿಯೆಯ ಶುದ್ಧಿಯನ್ನು ಕಾಪಾಡಬೇಕು ಎಂದು ಬಯಸುವುದಾದರೆ, ಈ ಪ್ರಕ್ರಿಯೆ ನಡೆಯಲೇಬೇಕು.

ಹೀಗಿದ್ದರೂ, ಕಾಂಗ್ರೆಸ್ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯ ಜನತಾದಳ (ಆರ್ಜೆಡಿ), ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿವೆ. 12 ರಾಜ್ಯಗಳಲ್ಲಿ ಎಸ್ಐಆರ್ ನಡೆಸುವುದಾಗಿ ಚುನಾವಣಾ ಆಯೋಗವು ಈಚೆಗೆ ಮಾಡಿರುವ ಘೋಷಣೆಯನ್ನೂ ಅವು ವಿರೋಧಿಸಿವೆ. ಎಸ್ಐಆರ್ ಪ್ರಕ್ರಿಯೆಗೆ ಈ ಪಕ್ಷಗಳು ಎತ್ತಿರುವ ತಕರಾರುಗಳ ಪೈಕಿ ಒಂದು, ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಪ್ರಜೆಗಳಲ್ಲದವರ ಹೆಸರನ್ನು ಚುನಾವಣಾ ಆಯೋಗವು ತೆಗೆದುಹಾಕಲಿದೆ ಎಂಬುದಾಗಿದೆ. ಈ ವಾದವನ್ನು ಒಪ್ಪುವುದಾದರೆ, ಸಂವಿಧಾನವು ಚುನಾವಣಾ ಆಯೋಗಕ್ಕೆ ನೀಡಿರುವ ಕೆಲವು ನಿರ್ದಿಷ್ಟ ಅಧಿಕಾರಗಳ ಉಲ್ಲಂಘನೆಯಾಗುತ್ತದೆ. ಅಲ್ಲದೆ, ಭಾರತದ ಪ್ರಜೆಗಳು ಮಾತ್ರವೇ ಅರ್ಹ ಮತದಾರರಾಗಿರುತ್ತಾರೆ ಎಂದು ಹೇಳುವ ಕೆಲವು ಕಾಯ್ದೆಗಳ ಉಲ್ಲಂಘನೆಯೂ ಆಗುತ್ತದೆ. ಅಕ್ರಮ ವಲಸಿಗರು ಹಾಗೂ ಗಡಿಯಾಚೆಯಿಂದ ನುಸುಳುವ ಕೆಲವರಿಗೆ ನಮ್ಮ ಮತದಾರರ ಪಟ್ಟಿಯಲ್ಲಿ ಕಳ್ಳಮಾರ್ಗದಲ್ಲಿ ಸ್ಥಾನ ಪಡೆದು, ದೇಶದ ಏಕತೆ ಹಾಗೂ ಸಮಗ್ರತೆಗೆ ಅಪಾಯ ತಂದೊಡ್ಡಲು ಅವಕಾಶ ಮಾಡಿಕೊಟ್ಟಂತೆಯೂ ಆಗುತ್ತದೆ. ಭಾರತದ ಪ್ರಜೆಗಳಲ್ಲದವರನ್ನು ಮತದಾರರ ಪಟ್ಟಿಯಿಂದ ಹೊರಹಾಕುವುದಕ್ಕೆ ಈ ಪಕ್ಷಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂಬುದು ನಮ್ಮೆದುರಿನ ಪ್ರಶ್ನೆಯಾಗಿದೆ.

ಇಲ್ಲಿ ಆಡಳಿತದ ಮೇಲೆ ಆಗುವ ಗಂಭೀರ ಪರಿಣಾಮಗಳ ವಿಚಾರವೂ ಇದೆ. ಸಂವಿಧಾನದ ಪ್ರಕಾರ, 25 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಪ್ರತಿ ಮತದಾರ ಕೂಡ ವಿಧಾನಸಭೆ ಅಥವಾ ಲೋಕಸಭೆಯ ಸದಸ್ಯನಾಗಲು ಅರ್ಹತೆ ಪಡೆಯುತ್ತಾನೆ. ಅದರ ಮುಂದುವರಿದ ಭಾಗವಾಗಿ ಆತ ರಾಜ್ಯವೊಂದರ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿಯಾಗಲು ಅರ್ಹತೆ ಪಡೆಯುತ್ತಾನೆ. ಹೀಗಾಗಿ, ದೇಶದ ಪ್ರಜೆಗಳಲ್ಲದವರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳದಂತೆ ನೋಡಿಕೊಳ್ಳುವ ದೊಡ್ಡ ಹೊಣೆಗಾರಿಕೆಯು ಚುನಾವಣಾ ಆಯೋಗದ ಮೇಲಿದೆ.

ಕೇಂದ್ರ ಚುನಾವಣಾ ಆಯೋಗದ ಅಧಿಕಾರದ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ಚುನಾವಣೆ ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸದಲ್ಲಿ ಚುನಾವಣಾ ಆಯೋಗಕ್ಕೆ ‘ಮೇಲ್ವಿಚಾರಣೆ ನಡೆಸುವ, ನಿರ್ದೇಶನ ನೀಡುವ ಮತ್ತು ನಿಯಂತ್ರಣ ಹೊಂದಿರುವ’ ಅಧಿಕಾರವಿದೆ ಎಂದು ಸಂವಿಧಾನದ 324ನೇ ವಿಧಿಯು ಹೇಳುತ್ತದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ವಿಚಾರದಲ್ಲಿ ಸಂವಿಧಾನದ 326ನೇ ವಿಧಿಯು, ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗೆ ನಡೆಯುವ ಚುನಾವಣೆಯು ವಯಸ್ಕ ಮತಾಧಿಕಾರವನ್ನು ಆಧರಿಸಿರಬೇಕು ಎಂದು ಸಾರುತ್ತದೆ. ಅಂದರೆ, ಭಾರತದ ಪ್ರಜೆಯಾಗಿರುವ ಪ್ರತಿ ವ್ಯಕ್ತಿ, ಆತನಿಗೆ ನಿಗದಿಪಡಿಸಿದ ದಿನಾಂಕಕ್ಕೆ 18 ವರ್ಷ ವಯಸ್ಸಾಗಿದ್ದರೆ, ಸಂವಿಧಾನದ ಪ್ರಕಾರ ಆತ ಅನರ್ಹಗೊಂಡಿಲ್ಲದಿದ್ದರೆ, ಚುನಾವಣೆಯಲ್ಲಿ ಮತದಾರನಾಗಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾನೆ.

ಪೌರತ್ವಕ್ಕೆ ಸಂಬಂಧಿಸಿದ ಈ ನಿಯಮವನ್ನು ಪ್ರಜಾಪ್ರಾತಿನಿಧ್ಯ ಕಾಯ್ದೆ–1950ರ ಸೆಕ್ಷನ್ 16ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಿ, ‘ಭಾರತದ ಪ್ರಜೆ ಅಲ್ಲದ ಯಾವುದೇ ವ್ಯಕ್ತಿಗೆ ಮತದಾರನಾಗಿ ಹೆಸರು ನೋಂದಾಯಿಸಲು ಅರ್ಹತೆ ಇರುವುದಿಲ್ಲ’ ಎಂದು ಹೇಳಲಾಗಿದೆ. ಅಂದರೆ, ಸಂವಿಧಾನ ಮತ್ತು ಸಂಸತ್ತು ರೂಪಿಸಿದ ಚುನಾವಣಾ ಕಾಯ್ದೆಯು ಭಾರತದ ಪ್ರಜೆಗಳು ಮಾತ್ರವೇ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದು ಎಂದು ಸ್ಪಷ್ಟವಾಗಿ ಹೇಳುತ್ತವೆ. ಇವನ್ನೆಲ್ಲ ಗಮನಿಸಿದ ನಂತರವೂ, ಈ ವಿಚಾರವಾಗಿ ಚುನಾವಣಾ ಆಯೋಗವು ಮುಂದಡಿ ಇರಿಸಬಾರದು ಎಂದು ಹೇಳುವುದು ತರ್ಕಹೀನವಾಗುತ್ತದೆ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ವಕ್ತಾರರು ಕೂಡ ಈ ಸಾಂವಿಧಾನಿಕ, ಕಾನೂನಾತ್ಮಕ ಅಂಶಗಳ ಬಗ್ಗೆ ಅರಿವು ಹೊಂದಿಲ್ಲದಿರುವುದು ಬೇಸರದ ಸಂಗತಿ. ಆ ವಕ್ತಾರರಲ್ಲಿ ಒಬ್ಬರು, ‘ಆಧಾರ್ ಕಾರ್ಡ್ ಪೌರತ್ವಕ್ಕೆ ಸಾಕ್ಷ್ಯವಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ ಪೌರತ್ವದ ಬಗ್ಗೆ ಯಾರು ತೀರ್ಮಾನಿಸಬೇಕು? ಅವರು (ಚುನಾವಣಾ ಆಯೋಗದವರು) ಆ ಅಧಿಕಾರ ಹೊಂದಿಲ್ಲ’ ಎಂದು ಟ್ವೀಟ್ ಮಾಡಿದ್ದರು. ಹಾಗಾದರೆ, ಸಂವಿಧಾನದ 324 ಹಾಗೂ 326ನೇ ವಿಧಿಗಳನ್ನು ಅಳಿಸಲಾಗಿದೆ ಎಂದು ಅವರು ಹೇಳಬಹುದೇ?

ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಹಾಗೂ ಅದನ್ನು ಪರಿಷ್ಕರಿಸುವ ಅಧಿಕಾರವನ್ನು ಕೂಡ ಚುನಾವಣಾ ಆಯೋಗಕ್ಕೆ ಕಾನೂನು ನೀಡಿದೆ.

ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲು ಸ್ಪಷ್ಟವಾಗಿ ಅಧಿಕಾರ ನೀಡುವ ಕಾನೂನು ಇರುವಾಗ, ಈ ಪ್ರಕ್ರಿಯೆಗೆ ವಿರೋಧ ದಾಖಲಿಸಿರುವ ಕೆಲವು ರಾಜಕೀಯ ಪಕ್ಷಗಳ ವಾದವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಟಿಎಂಸಿ ಪಕ್ಷದ ಶಾಸಕರೊಬ್ಬರು ಎಸ್ಐಆರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಹಿಂಸೆಯ ಎಚ್ಚರಿಕೆಯನ್ನೂ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಅನುಷ್ಠಾನಕ್ಕೆ ತಂದರೆ, ಅಲ್ಲಿನ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ತೆಗೆದರೆ ತಾವು ಬಿಜೆಪಿ ನಾಯಕರ ಕಾಲು ಮುರಿಯುವುದಾಗಿ, ಬಿಜೆಪಿ ನಾಯಕರಿಗೆ ಬೆಂಕಿ ಹಚ್ಚುವುದಾಗಿ ಅವರು ಬೆದರಿಕೆ ಒಡ್ಡಿದ್ದಾರೆ. ಆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಮುಖ್ಯ ಚುನಾವಣಾ ಅಧಿಕಾರಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ; ಎಸ್ಐಆರ್ ವಿಚಾರವಾಗಿ ಚುನಾವಣಾ ಆಯೋಗದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮೊದಲೇ ಹೇಳಿರುವಂತೆ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ವಿರೋಧ ಏಕೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಏಕೆಂದರೆ ಬಹುತೇಕ ರಾಜ್ಯಗಳಲ್ಲಿ ಈ ಪ್ರಕ್ರಿಯೆಯು 20 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ನಡೆದೇ ಇಲ್ಲ. 2002ರಲ್ಲಿ ಸಿದ್ಧವಾದ ಮತದಾರರ ಪಟ್ಟಿಯಲ್ಲಿ ಇರುವ ಮೃತ ವ್ಯಕ್ತಿಗಳ, ಒಂದೇ ಊರಿನಲ್ಲಿ ಬೇರೆಡೆಗೆ ಅಥವಾ ಬೇರೆ ಪಟ್ಟಣಕ್ಕೆ ಅಥವಾ ಬೇರೊಂದು ರಾಜ್ಯಕ್ಕೆ ವಲಸೆ ಹೋಗಿರುವವರ ಸಂಖ್ಯೆಯನ್ನು ಯಾರಾದರೂ ಊಹೆ ಮಾಡಿಕೊಳ್ಳಬಹುದು. ಸರ್ಕಾರಿ ಉದ್ಯೋಗಗಳಲ್ಲಿ ಇರುವ ಹಲವರು ಕಾಲಕಾಲಕ್ಕೆ ವರ್ಗವಾಗುತ್ತಿರುತ್ತಾರೆ. ನೌಕರಿಯಿಂದ ನಿವೃತ್ತರಾದ ನಂತರ ಸರ್ಕಾರಿ ನಿವಾಸ ತೊರೆದವರ ಸಂಖ್ಯೆಯನ್ನೂ ಊಹಿಸಬಹುದು. ಅಲ್ಲದೆ, ಮತದಾನಕ್ಕೆ ಅರ್ಹತೆ ಪಡೆಯುವಷ್ಟು ವಯಸ್ಸಾಗಿರುವ ಯುವಕರು ಶಿಕ್ಷಣಕ್ಕಾಗಿ ಬೇರೊಂದು ಊರಿಗೆ ತೆರಳಿರುತ್ತಾರೆ. ಇಂತಹ ಎಲ್ಲರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಬೇಕಾಗುತ್ತದೆ. ಈ ಉದ್ದೇಶಕ್ಕೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಗತ್ಯವಾಗುತ್ತದೆ.

ಇವೆಲ್ಲ ಅಂಶಗಳಷ್ಟೇ ಅಲ್ಲದೆ, ಈ ಮೊದಲೇ ಉಲ್ಲೇಖಿಸಿರುವಂತೆ, ವರ್ಷಗಳಿಂದ ಲಕ್ಷಾಂತರ ಮಂದಿ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ನಿಂದ ಭಾರತಕ್ಕೆ ನುಸುಳಿ ಬಂದಿದ್ದಾರೆ. ಅವರು ಇಲ್ಲಿನ ಮತದಾರರ ಪಟ್ಟಿಯಲ್ಲಿ ಕಳ್ಳಮಾರ್ಗದಿಂದ ಸೇರಿಕೊಂಡಿದ್ದಾರೆ. ಈ ಮೂಲಕ ಅವರು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅಪಾಯ ತಂದೊಡ್ಡಿದ್ದಾರೆ. ಅಂಥವರ ಹೆಸರನ್ನು ತೆಗೆಯಬೇಕಾಗುತ್ತದೆ.

ಸಂವಿಧಾನ ಹಾಗೂ ಸಂಸತ್ತು ರೂಪಿಸಿದ ಶಾಸನಗಳು ತನ್ನ ಮೇಲೆ ಹೊರಿಸಿರುವ ಹೊಣೆಯನ್ನು ಚುನಾವಣಾ ಆಯೋಗವು ನಿರ್ವಹಿಸಬೇಕು. ಬೆದರಿಕೆಗಳು, ನಿಂದನೆಗಳಿಗೆ ಅದು ಬಾಗಬಾರದು. ಚುನಾವಣೆಗಳ ಮೇಲೆ ನಿಗಾ ಇರಿಸಲು, ಅವುಗಳಿಗೆ ನಿರ್ದೇಶನ ನೀಡಲು ಹಾಗೂ ಅವುಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ. ಸಂವಿಧಾನದ 324ನೇ ವಿಧಿಯು ಈ ಅಧಿಕಾರ ನೀಡಿದೆ. ಅದಕ್ಕಿಂತ ಮುಖ್ಯವಾಗಿ, ಮತದಾರರ ಪಟ್ಟಿಯ ವಿಚಾರವಾಗಿ, ದೇಶದ ಪ್ರಜೆಗಳು ಮಾತ್ರವೇ ಮತದಾರರಾಗಬಹುದು ಎಂಬುದನ್ನು ಸಂವಿಧಾನದ 326ನೇ ವಿಧಿ ಹಾಗೂ ಚುನಾವನಾ ಕಾನೂನುಗಳು ಸ್ಪಷ್ಟವಾಗಿ ಹೇಳುತ್ತವೆ. ಇದಕ್ಕೆ ಬದ್ಧವಾಗಿ ನಡೆದುಕೊಳ್ಳುವ ಹೊಣೆ ಆಯೋಗದ ಮೇಲಿದೆ. ದೇಶದ ಪ್ರಜೆಗಳಲ್ಲದವರು ಮತದಾರರ ಪಟ್ಟಿಯಲ್ಲಿ ತೂರಿಕೊಳ್ಳುವುದಕ್ಕೆ ಅವಕಾಶ ಕೊಡಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.