ಮಂಗಳವಾರ, ಸೆಪ್ಟೆಂಬರ್ 28, 2021
22 °C

ವಚನಾಮೃತ: ಬದುಕಿನಲ್ಲಿ ಗುಣವೇ ಮುಖ್ಯ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಗುಣಃ ಪೂಜಾ ಸ್ಥಾನಂನಚಮಯ ನಚ ಲಿಂಗಂ’ ಎನ್ನುವರು. ಮನುಷ್ಯನನ್ನು ಮೇಲೆ ಎತ್ತರಕ್ಕೆ ಒಯ್ಯುವಂತವು ಗುಣಗಳು. ಅಧಃಪತನಕ್ಕೆ ತಳ್ಳುವಂತಹವು ಗುಣಗಳೇ. ಆದ್ದರಿಂದ ಗುಣದಿಂದ ಮಾನವ ಪೂಜೆಗೊಳ್ಳುತ್ತಾನೆ. ಹಣ, ಅಂತಸ್ತು, ಜಾತಿಯಿಂದ ಅಲ್ಲ. ಜೀವನದಲ್ಲಿ ಹಣ ಹೋದರೆ ಮರಳಿ ಗಳಿಸಬಹುದು. ಆರೋಗ್ಯ ಹೋದರೆ ಅರ್ಧ ಜೀವನ ಕಳೆದುಕೊಂಡಂತೆ. ಆದರೆ ಮಾನವನಲ್ಲಿರುವ ಗುಣವೇನಾದರೂ ಹೋದರೆ ಜೀವನವನ್ನೇ ಕಳೆದುಕೊಂಡಂತೆ ಎನ್ನುವರು.

ಮಹಾತ್ಮ ಗಾಂಧಿಯವರನ್ನು ಒಮ್ಮೆ ವಾರಣಾಸಿಯಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡುತ್ತಿದ್ದರು. ಅಪಾರ ಜನರು ಭಾಗವಹಿಸಿದ್ದರು. ಪ್ರತಿಯೊಬ್ಬರು ಮಹಾತ್ಮಗಾಂಧಿ ಕಿ ಜೈ, ಮಹಾತ್ಮ ಗಾಂಧಿ ಅವರಿಗೆ ಜಯವಾಗಲಿ ಎನ್ನುತ್ತಿದ್ದರು.

ಅಪಾರ ಜನ ಏಕಕಂಠದಿಂದ ಜಯಘೋಷ ಮಾಡುವಾಗ ಗಾಂಧೀಜಿ ಗಾಡಿಯಲ್ಲಿ ಅದರ ಬಗ್ಗೆ ಲಕ್ಷ್ಯ ಕೊಡದೆ ಆರಾಮವಾಗಿ ನಿದ್ರೆಗೆ ಜಾರಿದ್ದರು. ಅವರನ್ನು ಯಾರೊ ಒಬ್ಬರು ಎಬ್ಬಿಸಿ, ಏನು ಮಹಾತ್ಮಾಜಿ, ಎಲ್ಲರೂ ಜಯಘೋಷ ಮಾಡುವಾಗ ನೀವು ಆರಾಮ ಮಲಗಿದ್ದೀರಿ ಎಂದರು. ಆಗ ಗಾಂಧಿ ಅವರು ಜಯಘೋಷ ಮಾಡುವುದು ನನಗಲ್ಲ, ನನ್ನಲ್ಲಿ ಇದ್ದ ಇನ್ನೊಬ್ಬ ಸದ್ಗುಣವೆಂಬ ಒಳಗಿನ ಗಾಂಧೀಜಿಗೆ ಎಂದರಂತೆ. ಇದು ಅಲ್ಲವೇ ಪೂಜೆಗೊಳ್ಳುವ ಗುಣ.

ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ವಿರಕ್ತಮಠ, ಆಲಮೇಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.