ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ | ಸಿಂಹಾಸನ ಜೋಡಣೆ ಸೆ.27ಕ್ಕೆ

Published : 25 ಸೆಪ್ಟೆಂಬರ್ 2024, 15:30 IST
Last Updated : 25 ಸೆಪ್ಟೆಂಬರ್ 2024, 15:30 IST
ಫಾಲೋ ಮಾಡಿ
Comments

ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ಅರಮನೆಯಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಸೆ.27ರಂದು ನಡೆಯಲಿದೆ.

ಅರಮನೆಯಲ್ಲಿ ಸೆ.27ರಂದು ವಿವಿಧ ಧಾರ್ಮಿಕ ಕಾರ್ಯ ಹಾಗೂ ಜೋಡಣೆ ನಡೆಯಲಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರವಾಸಿಗರು ಹಾಗೂ ನಾಗರಿಕರಿಗೆ ಅರಮನೆ ಪ್ರವೇಶ ಇರುವುದಿಲ್ಲ ಎಂದು ಅರಮನೆ ಮಂಡಳಿ ತಿಳಿಸಿದೆ. 

ಈ ಬಾರಿ ದಸರಾ ಉತ್ಸವ ಅ.3ರಂದು ಆರಂಭವಾಗಿ ಅ.12ರಂದು ಕೊನೆಗೊಳ್ಳಲಿದೆ. ಅರಮನೆಯಲ್ಲಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಂದ ಅ.3ರಂದು ಖಾಸಗಿ ದರ್ಬಾರ್‌ ನಡೆಯಲಿದೆ. ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಪ್ರವೇಶವಿರುವುದಿಲ್ಲ. ಅ.11ರಂದು ಆಯುಧಪೂಜೆ ಹಾಗೂ 12ರಂದು ವಿಜಯದಶಮಿ ಪ್ರಯುಕ್ತ ಸಂಪೂರ್ಣ ದಿನ ಪ್ರವೇಶ ನಿರ್ಬಂಧವಿದೆ.

ಅ.27ರಂದು ಸಿಂಹಾಸನದ ವಿಸರ್ಜನೆ ನಡೆಯಲಿದ್ದು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಯೂ ಆದ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಮನೆಯ ಭದ್ರತಾ ಕೊಠಡಿಯಲ್ಲಿರುವ ಸಿಂಹಾಸನದ 13 ಬಿಡಿ ಭಾಗಗಳನ್ನು ದರ್ಬಾರ್‌ ಹಾಲ್‌ಗೆ ತಂದು ಜೋಡಿಸಲಾಗುತ್ತದೆ. ಪ್ರತಿ ವರ್ಷದಂತೆ ಅರಮನೆಯ ಸಿಬ್ಬಂದಿ ಹಾಗೂ ಕುಶಲಕರ್ಮಿಗಳು ಸಿಂಹಾಸನ ಜೋಡಣೆ ನಡೆಸುವರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT