ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಎಲ್ಲಿಯವರೆಗೆ ಭಯ

Last Updated 24 ಅಕ್ಟೋಬರ್ 2021, 4:50 IST
ಅಕ್ಷರ ಗಾತ್ರ

ತಾವದ್ಭಯಾದ್ಧಿ ಭೇತವ್ಯಂ ಯಾವದ್ಭಯಮನಾಗತಮ್‌ ।

ಆಗತಂ ತು ಭಯಂ ವೀಕ್ಷ್ಯ ಪ್ರಹರ್ತವ್ಯಮಭೀತವತ್‌ ।।

ಇದರ ತಾತ್ಪರ್ಯ ಹೀಗೆ:

‘ಭಯ ಎಲ್ಲಿಯವರೆಗೂ ಬಂದಿಲ್ಲವೋ ಅಲ್ಲಿಯವರೆಗೂ ಅದಕ್ಕೆ ಹೆದರಬೇಕು. ಅದು ಬಂದುಬಿಟ್ಟದ್ದೇ ಆದರೆ ನಿರ್ಭಯವಾಗಿ ಅದನ್ನು ಪ್ರಹರಿಸಬೇಕು.’

ಇದೊಂದು ಸ್ವಾರಸ್ಯಕರವಾದ ಪದ್ಯ. ನಾವು ಭಯಕ್ಕೆ ಎಲ್ಲಿಯ ತನಕ ಹೆದರಬೇಕು. ಅದು ನಮ್ಮಲ್ಲಿಗೆ ಬರುವವರೆಗೂ ಅದಕ್ಕೆ ಹೆದರಬೇಕು. ಒಮ್ಮೆ ಭಯ ಬಂದಮೇಲೆ ಭಯಕ್ಕೆ ಭಯಪಡಬಾರದು; ಅದನ್ನು ಧೈರ್ಯವಾಗಿ ಎದುರಿಸಬೇಕು.

ಸುಮಾರು ಎರಡು ವರ್ಷದ ಹಿಂದೆ ನಮಗೆ ಭಯದ ಸೂಚನೆಯಿತ್ತು, ನಮ್ಮ ದೇಶಕ್ಕೂ ಕೋವಿಡ್‌ ಬರಬಹುದು ಎಂಬ ಭಯ. ಹೌದು, ಕೋವಿಡ್‌ ನಮ್ಮಲ್ಲಿಗೂ ಬಂದೇಬಿಟ್ಟಿತು. ಆಗ ನಾವು ಏನು ಮಾಡಬೇಕು? ಭಯಪಡುತ್ತಲೇ ಇರಬೇಕಿತ್ತೆ? ಒಮ್ಮೆ ಕೋವಿಡ್‌ ಬಂದಮೇಲೆ ಅದನ್ನು ಎದುರಿಸುವುದು ಹೇಗೆ ಎಂದು ಯೋಚಿಸಿ, ಅದರಂತೆ ಕಾರ್ಯಪ್ರವೃತ್ತರಾಗಬೇಕೆ ವಿನಾ ಭಯ ಪಡುತ್ತ ಮೂಲೆ ಸೇರುವುದು ವಿವೇಕವಲ್ಲ. ನಮ್ಮ ದೇಶ ಧೈರ್ಯವಾಗಿಯೇ ಸಮಸ್ಯೆಯನ್ನು ಎದುರಿಸಿತು; ಅದು ಬೇರೆ ವಿಷಯ. ಇದು ನಾವು ಗಮನಿಸಬೇಕಾದ್ದು ಭಯವನ್ನು ಗೆಲ್ಲುವ ಬಗೆ.

ಹೀಗೆ ಜೀವನದಲ್ಲಿ ಅಪಾಯಗಳು ಬಂದೀತು ಎಂಬ ಭಯ ಪಡುತ್ತ ಎಚ್ಚರಿಕೆಯಿಂದ ಇರಬೇಕು. ಆದರೆ ಒಮ್ಮೆ ಅಪಾಯ ಬಂದರೆ ಆಗ ಹೆದರುತ್ತ ಕೂರುವುದಲ್ಲ, ಅದನ್ನು ಧೈರ್ಯವಾಗಿ ಎದುರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT