ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆಷಾಢ ಮಾಸದ ತೇರು!

Published 8 ನವೆಂಬರ್ 2023, 14:09 IST
Last Updated 8 ನವೆಂಬರ್ 2023, 14:09 IST
ಅಕ್ಷರ ಗಾತ್ರ

ಚಾಮರಾಜನಗರ: ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವ ದೇವಾಲಯದಲ್ಲೂ ರಥೋತ್ಸವ ನಡೆಯುವುದಿಲ್ಲ. ಆದರೆ, ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಇದಕ್ಕಿಂತ ಭಿನ್ನ. ಇಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ತೇರು ನಡೆಯುತ್ತದೆ. 

ಈ ಕಾರಣಕ್ಕೆ ಚಾಮರಾಜೇಶ್ವರಸ್ವಾಮಿಯ ರಥೋತ್ಸವ ಪ್ರಸಿದ್ಧಿ ಗಳಿಸಿದೆ. 200 ವರ್ಷಗಳ ಇತಿಹಾಸವಿರುವ ಈ ದೇವಾಲಯದ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. 

ಆಗ ತಾನೆ ಮದುವೆಯಾದ ನವಜೋಡಿಗಳು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಜಾತ್ರೆ ದಿನ ದೇವಾಲಯಕ್ಕೆ ಬರುತ್ತಾರೆ. ಹರಕೆ ಸಲ್ಲಿಸುತ್ತಾರೆ. 

ಸಾಮಾನ್ಯವಾಗಿ ನವ ದಂಪತಿ ಆಷಾಢ ಮಾಸದಲ್ಲಿ ದೂರ ಇರುತ್ತಾರೆ. ಈ ಜಾತ್ರೆಯ ನೆಪದಲ್ಲಿ ಅವರು ಭೇಟಿಯಾಗಿ, ಜೊತೆಗೆ ದೇವರ ದರ್ಶನ ಪಡೆಯುತ್ತಾರೆ. ಆ ಕಾರಣಕ್ಕೆ ಈ ಜಾತ್ರೆ ವಿಶೇಷ.

ನವಜೋಡಿಗಳು ಭಾಗವಹಿಸುವುದು ಈ ರಥೋತ್ಸವದ ವಿಶೇಷ
ನವಜೋಡಿಗಳು ಭಾಗವಹಿಸುವುದು ಈ ರಥೋತ್ಸವದ ವಿಶೇಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT