ಗುರುವಾರ , ಜೂನ್ 4, 2020
27 °C

ದೈನಂದಿನ ರಾಶಿ ಭವಿಷ್ಯ | ಶನಿವಾರ, ಮೇ 16, 2020

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ: ಸಂದುನೋವು, ಬೆನ್ನುನೋವಿನಿಂದ ಬಳಲುವ ಸಾಧ್ಯತೆ. ಹಿರಿಯರ ಮಾತುಗಳಿಗೆ ಮನ್ನಣೆ ನೀಡಿ ಬರಲಿರುವ ಅವಘಡದಿಂದ ತಪ್ಪಿಸಿಕೊಳ್ಳಿ. ವೈದ್ಯಕೀಯ ರಂಗದಲ್ಲಿರುವವರಿಗೆ ಉತ್ತಮ ಆದಾಯದ ನಿರೀಕ್ಷೆ.

ವೃಷಭ: ಸ್ತ್ರೀ ವರ್ಗದವರಿಗೆ ಅತ್ಯಂತ ಸಂತೋಷಕರ ವಾತಾವರಣ ಮೂಡಲಿದೆ. ಮದುವೆ–ಮುಂಜಿಯಂತಹ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಬಂಧು–ಬಾಂಧವರ ಸಮಾಗಮ ಸಾಧ್ಯತೆ. ಮಕ್ಕಳ ವಿಷಯದಲ್ಲಿ ಗಮನವಿರಲಿ.

ಮಿಥುನ: ಕೋರ್ಟ್, ಕಚೇರಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗಲಿದೆ. ಸ್ಥಿರಾಸ್ತಿ ಪ್ರಾಪ್ತವಾಗುವ ಯೋಗ. ಸಾಂಸಾರಿಕ ಸುಖ ಅನುಭವಿಸಲಿದ್ದೀರಿ. ಕೃಷಿ ವೃತ್ತಿಯವರಿಗೆ ಕೊಂಚ ಬಿಡುವು. ದೂರ ಪ್ರಯಾಣ ಸಾಧ್ಯತೆ.

ಕರ್ಕಾಟಕ: ಭೂ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ. ಅತಿಯಾದ ಕಾರ್ಯ ಒತ್ತಡದಿಂದಾಗಿ ಗೊಂದಲಮಯ ಪರಿಸ್ಥಿತಿ ನಿರ್ಮಾಣ. ಸಕಾಲಿಕ ಚಿಂತನೆಯಿಂದಾಗಿ ಮಾನಸಿಕ ಶಾಂತಿ.  

ಸಿಂಹ: ಸ್ಥಿರಾಸ್ತಿ ಪ್ರಾಪ್ತವಾಗುವ ಸಾಧ್ಯತೆಯಿದ್ದು, ಭೂ ಖರೀದಿಗೆ ಯೋಗ್ಯ ದಿನವಾಗಿದೆ. ವಿದೇಶ ಪ್ರಯಾಣದ ಕನಸು ಕಮರಿ ಹೋಗವ ಸಾಧ್ಯತೆ. ಹೊಸ ಮನೆ, ಸಂತಾನ ಭಾಗ್ಯಗಳು ದೊರಕಿ ಸಂತಸದ ವಾತಾವರಣ ಮೂಡುವುದು.

ಕನ್ಯಾ: ಭೂ ವ್ಯವಹಾರದಲ್ಲಿ ಸಣ್ಣ ಪ್ರಮಾಣದ ಲಾಭ. ಉದ್ಯೋಗದಲ್ಲಿರುವವರಿಗೆ ಉನ್ನತ ಹುದ್ದೆ ಪ್ರಾಪ್ತವಾಗುವ ಸಾಧ್ಯತೆ. ನೀಡಿದ ಸಾಲಗಳು ಮರುಪಾವತಿಯಾಗುವವು. ವಿದ್ಯಾರ್ಥಿಗಳ ಯಶಸ್ಸಿನ ಹಾದಿಗೆ ಅವಕಾಶ.

ತುಲಾ: ಹಿಂದಿನ ತಾಪತ್ರಯಗಳೆಲ್ಲವೂ ನಿವಾರಣೆಯಾಗಿ ನಿರಾಳತೆ ಮೂಡುವುದು. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ. ದಿನಸಿ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ನಷ್ಟ ಉಂಟಾಗುವ ಸಾಧ್ಯತೆ. ವಾಹನ ಯೋಗ.  

ವೃಶ್ಚಿಕ: ಪಿತ್ರಾರ್ಜಿತ ಆಸ್ತಿಯು ನಿಮ್ಮ ಪಾಲಿಗೆ ಬಂದೊದಗಲಿದೆ. ಹಿರಿಯರ ಆಶೀರ್ವಾದದಿಂದಾಗಿ ಆದಾಯದ ಮೂಲಗಳು ಗೋಚರವಾಗಲಿವೆ. ಕುಟುಂಬವರ್ಗದವರಿಂದ ಸ್ಥಾನಮಾನಗಳು ಲಭ್ಯವಾಗಲಿವೆ.  

ಧನು: ದಿನದ ಮಟ್ಟಿಗೆ ಸ್ವಲ್ಪಮಟ್ಟಿನ ಅಡೆತಡೆಗಳು ಎದುರಾಗುವ ಸಾಧ್ಯತೆಯಿದ್ದು ಜಾಗರೂಕರಾಗಿರುವುದು ಉತ್ತಮ. ಅಪಾಯಕಾರಿ ಕೆಲಸ ಮತ್ತು ವಾಹನಗಳಿಂದ ದೂರವಿರಿ. ಗುರು ಗಣಪತಿಯ ಆರಾಧನೆ ಮಾಡಿ. 

ಮಕರ: ನಿಮ್ಮ ಎಲ್ಲ ಕೆಲಸ–ಕಾರ್ಯಗಳು ಸುಗಮವಾಗಿ ಕೈಗೂಡಲಿದೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ದಾರಿ ಸುಗಮವಾಗುವ ಲಕ್ಷಣ ಕಾಣಲಿದೆ. ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಾಣಲಿದೆ. 

ಕುಂಭ: ಕಳ್ಳಕಾಕರ ಬಗ್ಗೆ ಗಮನ ವಹಿಸುವುದು ಉತ್ತಮ. ಬೆಲೆ ಬಾಳುವ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳಿ. ಮನಸ್ತಾಪ ಶಮನವಾಗಿ ಮಿತ್ರತ್ವ ಸಾಧ್ಯತೆ. ಸಂಗಾತಿಯಿಂದ ವಿಶೇಷ ಕೊಡುಗೆ ಪ್ರಾಪ್ತಿ.

ಮೀನ: ಸ್ವಯಂ ಉದ್ಯೋಗಿಗಳಿಗೆ ಆದಾಯದಲ್ಲಿ ಸುಧಾರಣೆ. ಮೋಸ ಹೋಗುವ ಸಾಧ್ಯತೆಯಿದ್ದು ಎಚ್ಚರಿಕೆ ಅಗತ್ಯ. ಸ್ನೇಹಿತ ವರ್ಗದವರಿಂದ ಸಂತಸದ ಸುದ್ದಿ. ಉದ್ಯೋಗದಲ್ಲಿ ಬದಲಾವಣೆಗಳು ಸಂಭವಿಸಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.