ಸೋಮವಾರ, ಮೇ 10, 2021
19 °C

ವೃಶ್ಚಿಕದಿಂದ ಧನು ರಾಶಿಗೆ ಗುರು: ಯಾವ ರಾಶಿಗೆ ಏನೇನು ಫಲ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಗುರುವಿನ ಅನುಗ್ರಹ ಇದ್ದರೆ ಯಾವುದೇ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಇಂಥ ಗುರು ಇದೇ ನ.5ರಂದು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶಿಸುತ್ತಿದ್ದಾನೆ.  ಈ ರಾಶಿಯಲ್ಲಿ ಒಂದು ವರ್ಷ ಕಾಲ ಗುರು ಇರಲಿದ್ದಾನೆ. ಇದು ಜ್ಯೋತಿಷ್ಯದ ಮಟ್ಟಿಗೆ ಮಹತ್ವದ ವಿದ್ಯಮಾನ. ಇದರಿಂದ ಯಾವ ರಾಶಿಗಳಿಗೆ ಏನು ಫಲ ಸಿಗಲಿದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. 

ಮೇಷ: ಈ ವರ್ಷ ನಿಮಗೆ ಬಹಳ ಅನುಕೂಲಕರ. ನಿರುದ್ಯೋಗಿಗಳಿಗೆ ಕೆಲಸಗಳು ಸಿಗುವ ಯೋಗಗಳುಂಟು. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಶೃಂಗೇರಿ ಜಗದ್ಗುರುಗಳ ಆಶೀರ್ವಾದಗಳಿಂದ ಉನ್ನತ ಸ್ಥಾನಗಳು ಪ್ರಾಪ್ತಿಯಾಗುತ್ತವೆ. 

ವೃಷಭ: ಮನೆಯಲ್ಲಿ ಅಶಾಂತಿ ಇರುವ ಕಾರಣ ಈ ಸಮಯದಲ್ಲಿ ನಿಮಗೆ ಶಾಂತಿಯು ಉಂಟಾಗುವ ಸಾಧ್ಯತೆಗಳಿವೆ. ಭೂಮಿ ತೆಗೆದುಕೊಳ್ಳುವ ವಿಚಾರದಲ್ಲಿ ನೀವು ಬಹಳಷ್ಟು ಕಾಳಜಿ ವಹಿಸಬೇಕು. 

ಮಿಥುನ: ನಿಮಗೆ ಸಮಾಜದಲ್ಲಿ ಗೌರವ ಸನ್ಮಾನಗಳು ದೊರೆಯಲಿವೆ. ವೃತ್ತಿಯಲ್ಲಿ ಔನ್ನತ್ಯ ದೊರೆಯಲಿದೆ. ಹಾಗೆಯೇ ವಿದೇಶ ಪ್ರಯಾಣದ ಸಾಧ್ಯತೆಗಳಿವೆ. ತಿರುಪತಿ ವೆಂಕಟರಮಣನ ದರ್ಶನದಿಂದ ಇನ್ನಷ್ಟು ಲಾಭಗಳನ್ನು ನೀವು ಕಾಣಬಹುದು.

ಕರ್ಕಾಟಕ:  ಕೋರ್ಟ್‌ ವ್ಯಾಜ್ಯಗಳಲ್ಲಿ ನಿಮಗೆ ಜಯವಾಗುತ್ತದೆ.  ಮತ್ತಷ್ಟು ಉತ್ತಮವಾದ ಕೆಲಸಗಳು ಅರಸಿ ಬರಲಿವೆ. ರಾಹುಕಾಲದಲ್ಲಿ ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಅನುಗ್ರಹ ಪ್ರಾಪ್ತವಾಗಿ ಹೆಚ್ಚಿನ ಲಾಭಗಳು ಉಂಟಾಗುತ್ತವೆ.

ಸಿಂಹ: ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ವಿದೇಶ ಪ್ರಯಾಣ ಮಾಡುವರು. ಮನೆಯಲ್ಲಿ ನಿರಂತರವಾಗಿ ಉಂಟಾಗುತ್ತಿದ್ದ ಮನಸ್ತಾಪಗಳು ಕಡಿಮೆಯಾಗುವವು. ಸೂರ್ಯನಾರಾಯಣನ ಆರಾಧನೆಯಿಂದ ಲಾಭವಿದೆ. 

ಕನ್ಯಾ: ವಾಹನದಲ್ಲಿ ಸಂಚರಿಸುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ವರ್ಷವೂ ಜಮೀನು ಮನೆ ಖರೀದಿ ಸಾಧ್ಯತೆಗಳು ಹೆಚ್ಚಾಗಿವೆ. ಭೂವರಹಸ್ವಾಮಿ ದರ್ಶನದಿಂದ ನಿಮಗೆ ಹೆಚ್ಚಿನ ಅನುಕೂಲಗಳು ಆಗಲಿವೆ.

ತುಲಾ: ಅವಿವಾಹಿತರಿಗೆ ವಿವಾಹವಾಗುವ ಯೋಗಫಲಗಳುಂಟು. ಬರಬೇಕಾದ ಹಣಗಳು ಕೈ ಸೇರುವ ಸಾಧ್ಯತೆಗಳು ಇವೆ.  ಶೃಂಗೇರಿ ಜಗದ್ಗುರುಗಳ ಆಶೀರ್ವಾದದಿಂದ ಹೆಚ್ಚಿನ ಫಲಗಳು ನಿಮಗೆ ಸಿದ್ಧಿಸಲಿವೆ.

ವೃಶ್ಚಿಕ: ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ಕಡೆಗೆ ಉದ್ಯೋಗ ನಷ್ಟದ ವರೆಗೆ ಕೊಂಡೊಯ್ಯಬಹುದು. ಆದ್ದರಿಂದ ಎಚ್ಚರವಾಗಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹೆಚ್ಚಿನ ಖರ್ಚು ಉಂಟಾಗುತ್ತದೆ. ಶಿವನ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಮಾಡುಸುವುದರಿಂದ ಹೆಚ್ಚಿನ ಲಾಭ ಉಂಟಾಗುತ್ತದೆ

ಧನು:  ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಟ್ಟರೆ ಒಳಿತು ಅಧಿಕ ಖರ್ಚಿನಿಂದ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆಗಳಿವೆ. ವಿದೇಶ ಪ್ರಯಾಣ ಯೋಗವು ಕೂಡ ನಿಮಗೆ ಹೆಚ್ಚಾಗಿದೆ. ದತ್ತಾತ್ರೇಯರ ಆರಾಧನೆಯಿಂದ ಹೆಚ್ಚಿನ ಲಾಭವನ್ನು ಕಾಣುವಿರಿ. 

ಮಕರ: ಹೊಸ ವಾಹನ ಖರೀದಿ ಮಾಡುವ ಯೋಗ ನಿಮಗೆ ಒದಗಿ ಬಂದಿದೆ. ಉನ್ನತ ವ್ಯಾಸಂಗಕ್ಕಾಗಿ ಅಧಿಕ ಖರ್ಚು ಮಾಡುವಿರಿ. ಏಕವಾರ ರುದ್ರಾಭಿಷೇಕದಿಂದ ನಿಮಗೆ ಹೆಚ್ಚಿನ ಲಾಭವಾಗುತ್ತದೆ

ಕುಂಭ:  ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯಲಿದೆ.  ವಿದೇಶ ಪ್ರಯಾಣ ಯೋಗವೂ ಕೂಡ ಇದೆ. ಮನೆ ಜಮೀನು ಖರೀದಿ ಮಾಡಬಹುದು. ನಿಮಗೆ ವಿವಾಹ ಯೋಗವೂ ಕೂಡ ಒದಗಿ ಬರಲಿದೆ. ರಾಮೇಶ್ವರದಲ್ಲಿರುವ ಶಿವನ ದರ್ಶನದಿಂದ ಹೆಚ್ಚಿನ ಲಾಭ ಉಂಟಾಗುತ್ತದೆ.  ಶೃಂಗೇರಿ ಜಗದ್ಗುರುಗಳ ಆಶೀರ್ವಾದವೂ ಕೂಡ ಅಗತ್ಯವಿದ್ದು ಸಪ್ತಶತಿ ಪಾರಾಯಣದಿಂದ ಇನ್ನೂ ಹೆಚ್ಚಿನ ಅನುಕೂಲಗಳು ನಿಮಗೆ ಆಗಲಿವೆ.

ಮೀನ: ಉನ್ನತ ಹುದ್ದೆ ಸಿಗುವುದು. ಅದರಿಂದ ಹೆಚ್ಚಿನ ಲಾಭ ಉಂಟಾಗುತ್ತದೆ. ಮಕ್ಕಳಿಂದ ಹೆಚ್ಚಿನ ಪ್ರಶಂಸೆ ಹೆಚ್ಚಲಿದೆ. ತಂದೆ ಅಥವಾ ತಾಯಿಯಿಂದ ನಿಮಗೆ ಹಣಕಾಸಿನ ನೆರವು ಉಂಟಾಗಲಿದೆ. ಹೊಸ ಉದ್ಯೋಗ ಅಥವಾ ಬಂಡವಾಳ ಹೂಡಿಕೆಗೆ ಇದು ಉತ್ತಮ ಸಮಯ. ದತ್ತಾತ್ರೇಯನ ದರ್ಶನದಿಂದ ಹೆಚ್ಚಿನ ಲಾಭವಾಗಲಿದೆ.

– ಸುಬ್ರಹ್ಮಣ್ಯ, ಮೈಸೂರು

ಮೊಬೈಲ್‌: 7022036917

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು