ಮಂಗಳವಾರ, ಏಪ್ರಿಲ್ 7, 2020
19 °C
ಯಲಬುರ್ಗಾ: ಬೀರಲಿಂಗೇಶ್ವರ ಜಾತ್ರೆ, ಅದ್ದೂರಿ ಪಲ್ಲಕ್ಕಿ ಮೆರವಣಿಗೆ

ಹಾಲುಮತ ಸಮಾಜದ ಕೊಡುಗೆ ಸ್ಮರಣೀಯ: ವಿರೂಪಾಕ್ಷಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ಸ್ಥಳೀಯ ಬೀರಲಿಂಗೇಶ್ವರ ಜಾತ್ರೆ ಪ್ರಯುಕ್ತ ಶುಕ್ರವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳ್ಳಿ ಮೂರ್ತಿ ಉದ್ಘಾಟನೆ ಹಾಗೂ ನೂತನ ಮೂರ್ತಿಗಳ ಅನಾವರಣ ಕಾರ್ಯಕ್ರಮ ಜರುಗಿತು. ಪಲ್ಲಕ್ಕಿಯ ಬೆಳ್ಳಿ ಮೂರ್ತಿ ಅನಾವರಣ
ಗೊಳಿಸಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ,‘ವಿಶಿಷ್ಟ ಪರಂಪರೆಯೊಂದಿಗೆ ದೇಸಿ ಸಂಸ್ಕೃತಿಯನ್ನೂ ಪೊರೆಯುತ್ತಿರುವ ಹಾಲುಮತ ಸಮಾಜದ ಕೊಡುಗೆ ಸ್ಮರಣೀಯ’ ಎಂದರು.

ಬೀರಲಿಂಗೇಶ್ವರ ಹಾಗೂ ಕನಕದಾಸರ ಮೇಲಿನ ಸಮಾಜದ ಭಕ್ತಿ ಮಾದರಿ’ ಎಂದು ಅಭಿಪ್ರಾಯಪಟ್ಟರು.

ಸಮಾಜದ ಮುಖಂಡ ಪಟ್ಟಣ ಪಂಚಾಯಿತಿ ಸದಸ್ಯ ರೇವಣಪ್ಪ ಹಿರೇಕುರುಬರ, ಮಾಜಿ ಜಿ.ಪಂ ಸದಸ್ಯ ಕೆರಿಬಸಪ್ಪ ನಿಡಗುಂದಿ ಮಾತನಾಡಿದರು.

ದೇವಸ್ಥಾನದಿಂದ ಹೊರಟ ಮೆರವಣಿಗೆಯು ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಸಂಚರಿಸಿ ನಂತರ ಪ್ರಮುಖ ಬೀದಿಯಲ್ಲಿ ಹಾದು ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ಮರಳಿತು. ಗಣ್ಯರಾದ ರೇವಣೆಪ್ಪ ನಿ. ಬಸವರಾಜ ಕುಡಗುಂಟಿ, ಉಮೇಶ ಜೋಗಿನ, ದೊಡ್ಡಯ್ಯ ಗುರುವಿನ, ನಾಗರಾಜ, ರಾಮಣ್ಣ ಸಾಲಭಾವಿ ಹಾಗೂ ಎಸ್.ಕೆ.ದಾನಕೈ
ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)