ಮಂಗಳವಾರ, ಏಪ್ರಿಲ್ 7, 2020
19 °C
ಲಾಡ್ಲಾಪುರ : ಶಿವರಾತ್ರಿ ಜಾಗರಣೆ ಉತ್ಸವದಲ್ಲೊಂದು ವಿಶೇಷತೆ

ದೀಪ ಹಚ್ಚಿ ಭಾವೈಕ್ಯತೆ ಬೆಳಗಿದರು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದ ಹಾಜಿಸರ್ವರ್ (ಹಾದೀಶರಣ) ಬೆಟ್ಟದಲ್ಲಿ ಶಿವರಾತ್ರಿ ಜಾಗರಣೆ ನಿಮಿತ್ತ ಶುಕ್ರವಾರ ಸಂಜೆ ಹಿಂದೂ–ಮುಸ್ಲಿಂ ಬಾಂಧವರು ಸೇರಿ ದೀಪ ಬೆಳಗಿಸುವುದರ ಮೂಲಕ ಭಾವೈಕ್ಯತೆ ಸಂದೇಶ ಸಾರಿದರು. 

ಮಹಾಶಿವರಾತ್ರಿ ಹಬ್ಬದಂದು ಗ್ರಾಮಸ್ಥರು ಒಟ್ಟಾಗಿ ಸೇರಿ ಸಂಭ್ರಮದಿಂದ ಜಾಗರಣೆ ಮಾಡಿದರು. ಗ್ರಾಮಸ್ಥರು ಮನೆಯಲ್ಲಿ ತಯಾರಿಸಿದ ಹೆಸರು, ಕಡಲೆ ಗುಗ್ಗರಿ, ಶೇಂಗಾ, ರವೆಹುಂಡಿ ಹಾಗೂ ಹಣ್ಣು ಹಂಪಲುಗಳನ್ನು ಪರಸ್ಪರ ಹಂಚಿ ಸಂಭ್ರಮಿಸಿದರು.

'ಶಿವರಾತ್ರಿ ಜಾಗರಣೆಯಂದು ಹಾಜಿಸರ್ವರ್ ಗದ್ದುಗೆಯಲ್ಲಿ ಮಣ್ಣಿನ ಹಣತೆಗಳನ್ನು ಸಾಲಾಗಿ ಇಟ್ಟು ಎಣ್ಣೆ ಸುರಿದು ದೀಪ ಹಚ್ಚುವುದು ಅತ್ಯಂತ ಖುಷಿ ಕೊಟ್ಟಿದೆ. ಗ್ರಾಮದ ಹಿಂದೂ ಮುಸ್ಲಿಂ ಎಂಬ ಬೇಧವೆನಿಸದೆ ದೀಪ ಹಚ್ಚುತ್ತೇವೆ’ ಎಂದು ಮೈನುದ್ದೀನ್ ಖುರೇಷಿ ಹೇಳಿಕೆ.

ಹೊಸ ಬಟ್ಟೆ ಧರಿಸಿ ಬಂದಿದ್ದ ಮಹಿಳೆಯರು ಮಕ್ಕಳು ಸಾಲಾಗಿ ಮಣ್ಣಿನ ಹಣತೆ ಗಳನ್ನು ಇಟ್ಟು ದೀಪ ಹಚ್ಚುತ್ತಿರುವುದು ಕಂಡು ಬಂದಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)